ಯಲ್ಲಾಪುರ: ಗೃಹರಕ್ಷಕರು ಶಿಸ್ತಿನ ಶಿಪಾಯಿಗಳು. ಯಾವುದೇ ಫಲಾಪೇಕ್ಷೆ ಇಲ್ಲದೇ ಸೇವೆ ಮಾಡುತ್ತಾ ಬಂದಿದ್ದಾರೆ. ಇವರಿಗೆ ಸಮಾಜದಿಂದ ಗೌರವ ಸಿಗಬೇಕೆಂದು ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಠ ಡಾ.ಸಂಜು ತಿಮ್ಮಣ್ಣ ನಾಯಕ ಹೇಳಿದರು.
ಅವರು ಪಟ್ಟಣದ ಗೃಹ ರಕ್ಷಕದಳಕ್ಕೆ ಭೇಟಿ ನೀಡಿ ಘಟಕದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಗೃಹ ರಕ್ಷಕರಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಸಮಾದೇಷ್ಠರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಎಲ್ಲಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಕುಂದುಕೊರತೆ ಆಲಿಸಿ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ತಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲಾ ಗೃಹರಕ್ಷಕರಿಗೆ ಜಿಲ್ಲಾ ಕೇಂದ್ರದಲ್ಲಿ ಹತ್ತು ದಿನದ ಸಾಮಾನ್ಯ ತರಬೇತಿ ನೀಡಲಾಗುವದು. ಗೃಹರಕ್ಷಕ ನಿವೃತ್ತನಾದರೆ ಮನೆಗೆ ಹೋಗುವಾಗ ಬರಿಕೈಯಲ್ಲಿ ಹೋಗುತ್ತಾನೆ. ಅವರಿಗ ನಿವೃತ್ತಿ ವೇತನವಿಲ್ಲ. ಆದರೆ ಯಲ್ಲಾಪುರ ಘಟಕದವರು ಸನ್ಮಾನಿಸಿ ಬೀಳ್ಕೊಡುತ್ತಿರುವದು ಶ್ಲಾಘನೀಯ ಎಂದರು.
ಘಟಕದಲ್ಲಿ 30 ವರ್ಷಗಳ ಕಾಲ ಗೃಹರಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ರಘುರಾಮ ಪೂಜಾರಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಘಟಕಾಧಿಕಾರಿ ಕೆ ಎಸ್ ಭಟ್ಟ ಆನಗೋಡ ಅಧ್ಯಕ್ಷತೆ ವಹಿಸಿ ರಘುರಾಮ ಪೂಜಾರಿಯವರ ಸೇವೆಯನ್ನು ಸ್ಮರಿಸಿದರು.
ಗೃಹರಕ್ಷಕ ಗುರು ಮರಾಠಿ, ರೂಪಾ ಬಾಂದೇಕರ ನಿರ್ವಹಿಸಿದರು.