Slide
Slide
Slide
previous arrow
next arrow

ದನಗನಳ್ಳಿ ಕೆರೆಯಲ್ಲಿ ಮೀನುಗಾರಿಕೆ ಕೌಶಲ್ಯ ಪರೀಕ್ಷೆ

300x250 AD

ಶಿರಸಿ: ತಾಲೂಕಿನಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವ ದೃಷ್ಠಿಯಿಂದ ದನಗನಳ್ಳಿ ಕೆರೆಯಲ್ಲಿ ಮೀನುಗಾರಿಕೆ ಕೌಶಲ್ಯ ಪರೀಕ್ಷೆ ನಡೆಸಲಾಯಿತು.

ಈ ಪರೀಕ್ಷೆಯಲ್ಲಿ ತಾಲೂಕಿನಾದ್ಯಂತ ಇರುವ 50ಕ್ಕೂ ಹೆಚ್ಚಿನ ಮೀನುಗಾರಿಕೆಯಲ್ಲಿ ಆಸಕ್ತಿಯಿದ್ದವರು ಪಾಲ್ಗೊಂಡಿದ್ದರು.ಈ ಪರೀಕ್ಷೆಯಲ್ಲಿ 10 ಕ್ಕೂ ಹೆಚ್ಚಿನ ಮಹಿಳೆಯರು ಪಾಲ್ಗೊಂಡಿದ್ಸು ವಿಶೇಷವಾಗಿತ್ತು. ಪರೀಕ್ಷೆಯಲ್ಕಿ ಪಾಲ್ಗೊಂಡವರಿಗೆ ಈಜು,ಬಲೆ ಬೀಸುವುದು,ಬಲೆ ಹೆಣೆಯುವುದು,ಮೀನು ಸ್ವಚ್ಚಗೊಳಿಸುವುದು, ದೋಣಿ ಚಲಾಯಿಸುವುದು ಹಾಗು ಮೀನು ಮಾರಾಟದ ಬಗ್ಗೆ ಪರೀಕ್ಷೆ ನಡೆಸಲಾಯಿತು.ಪರೀಕ್ಷೆಯಲ್ಲಿ 24 ಜನರು ಪಾಸಾಗಿದ್ಸು ಇವರಲ್ಲಿ 21 ಜನರಿಗೆ ನಿಯೋಜಿತ ಪುಣ್ಯಕೋಟಿ ಮೀನುಗಾರರ ಸಹಕಾರಿ ಸಂಘದ ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು.

300x250 AD

ಈ ಸಂದರ್ಭದಲ್ಲಿ ಮಾತನಾಡಿದ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬಿಪಿನ್ ಬೂಪಣ್ಣ, ತಾಲೂಕಿನಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವ ದೃಷ್ಠಿಯಿಂದ ಕೌಶಲ್ಯ ಪರೀಕ್ಷೆ ಮಾಡಲಾಗುತ್ತಿದೆ.ಇದರಲ್ಕಿ ಆಯ್ಕೆಯಾದ 21 ಜನರಿಗೆ ಸಂಘದ ಸದಸ್ಯರನ್ನಾಗಿ ಮಾಡಿ ಒಂದು ಸಂಘ ರಚಿಸಿಕೊಡಲಾಗುತ್ತದೆ. ನಂತರ ಇವರಿಗೆ ಸರಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ನೀಡಲಾಗುವುದು. 21 ಸದಸ್ಯರಿರುವ ಸಂಘದಲ್ಲಿ ಮಹಿಳೆಯರು ಏಳು ಪುರುಷರು ಆರು ಎಸ್ಸಿ ಮೂರು ಎಸ್ಟಿ ಒಂದು ಅಲ್ಪಸಂಖ್ಯಾತರು ಮೂರು ಜನರನ್ನು ಆಯ್ಕೆಮಾಡಲಾಗುವುದೆಂದು ಹೇಳಿದರು.ಸಂಘ ರಚನೆಗೊಂಡ ಮೇಲೆ ಸಂಘದಿಂದ ಕೆರೆಯನ್ನು ಪಡೆದು ನಿಗದಿ ಹಣ ತುಂಬಿ ಕೆರೆ ಅಭಿವೃದ್ಸಿ ಪಡಿಸಬೇಕು ಮತ್ತು ಮೀನು ಮರಿಗಳನ್ನು ಬಿಟ್ಟು ಕಳ್ಳತನವಾಗದಂತೆ ನೋಡಿಕೊಳ್ಳಬೇಕು.ಇದಕ್ಕೆ ಸರಕಾರ ನಿಮ್ಮ ಹಿಂದೆ ನಿಂತು ಕೆಲಸಮಾಡುತ್ತದೆ ಎಂದರು.ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶ ಪ್ರತೀಕ ಶೆಟ್ಟಿ,ಸಹಾಯಕ ನಿರ್ದೇಶಕ ವೈಭವ,ನಿಯೋಜಿತ ಪುಣ್ಯಕೋಟಿ ಮೀನುಗಾರಿಕೆ ಸಂಘದ ಮುಖ್ಯ ಪ್ರಭಂದಕರಾದ ಪುರುಷೋತ್ತಮ ದುರ್ಗಾ ಅಂಬಿಗಾ ಹಾಗು ಬದನಗೋಡ ಗ್ರಾಮ ಪಂಚಾಯತಿ ಅದ್ಯಕ್ಷ ನಟರಾಜ ಬಿ ಹೊಸೂರ್ ಇತರರು ಹಾಜರಿದ್ದರು.

Share This
300x250 AD
300x250 AD
300x250 AD
Back to top