ಸಿದ್ದಾಪುರ: ಸರ್ಕಾರದ ವಸತಿ ಯೋಜನೆಯಡಿ ಆಯ್ಕೆಯಾದ ತಾಲೂಕಿನ ತ್ಯಾಗಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಫಲಾನುಭವಿಗಳಿಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕಾಮಗಾರಿ ಆದೇಶ ವಿತರಿಸಿದರು.
ವಸತಿ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸಹ ಬಡವರಿಗೆ ಸೂರು ಕಲ್ಪಿಸಲಾಗಿಲ್ಲ ಎನ್ನುವ ನೋವು ಕಾಡುತ್ತಿದೆ. ಪಂಚಾಯ್ತಿಗೆ ಬೇಕಾದ ಬಾಕಿಯಿರುವ ಮನೆಗಳನ್ನು ಮಂಜೂರಿ ಮಾಡಿಸಿ ಎಲ್ಲರಿಗೂ ಸರ್ಕಾರದ ಮನೆ ಒದಗಿಸಿಕೊಡಲಾಗುವುದು. ತ್ಯಾಗಲಿ ಗ್ರಾಮ ಪಂಚಾಯ್ತಿಗೆ ನೂತನ ಕಟ್ಟಡವನ್ನು ಮಂಜೂರಿ ಮಾಡಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಸರ್ಕಾರಿ ಸೌಲಭ್ಯದಿಂದ ನೈಜ ಫಲಾನುಭವಿಗಳಾರು ವಂಚಿತರಾಗಬಾರದು. ಬಡವರ ಪರವಾಗಿ ನೀಡಿರುವ ಕಾರ್ಯಕ್ರಮಗಳು ಸರಿಯಾಗಿ ಸದ್ಬಳಕೆಯಾಗಬೇಕು. ಸರ್ಕಾರದ ಮನೆ ಸಿಗುತ್ತದೆ ಎಂದು ತಂದೆ-ತಾಯಿಯನ್ನು ದೂರ ಮಾಡಬೇಡಿ ಎಂದು ವಿನಂತಿಸಿದ ಭೀಮಣ್ಣ, ಕುಡಿಯುವ ನೀರು ಹಾಗೂ ಸರ್ಕಾರದ ಸೌಲಭ್ಯ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ ಮಾಡಿದರೆ ನಿರ್ದಾಕ್ಷಿಣ್ಯ ಕೈಗೊಳ್ಳಲಾಗುವುದು. ನೀರಿನ ಮೂಲ ಹಾಗೂ ಲಭ್ಯತೆ ನೋಡಿಕೊಳ್ಳದೇ ಪಂಚಾಯ್ತಿಗೆ ಹಸ್ತಾಂತರಿಸಿಕೊಂಡರೆ ಸಂಬಂಧಪಟ್ಟ ಪಿಡಿಓ ಜವಾಬ್ದಾರಿಯಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಯಶೋಧಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ವೆಂಕಟ್ರಮಣ ಹೆಗಡೆ, ಸದಸ್ಯೆ ಅರ್ಚನಾ ಡಿ.ಜಿ. ಮತ್ತಿತರರು ಉಪಸ್ಥಿತರಿದ್ದರು.