Slide
Slide
Slide
previous arrow
next arrow

ಜುಲೈ-2023 ತಿಂಗಳ ಹಾಲಿನ ಪ್ರೋತ್ಸಾಹಧನ ಜಮಾ: ಕೆಶಿನ್ಮನೆ ಮಾಹಿತಿ

300x250 AD

ಶಿರಸಿ: ಜುಲೈ-2023 ನೇ ಮಾಹೆಯ ರೂ.5 ಪ್ರೋತ್ಸಾಹಧನವು ಡಿ.21, ಗುರುವಾರದಂದು ಜಮಾ ಆಗಿದೆ ಎಂದು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನಿರ್ದೇಶಕರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದರು.

ಈ ಸಂದರ್ಭದಲ್ಲಿ ಹೇಳಿಕೆ ನೀಡಿದ ಅವರು 2022-2023 ನೇ ಸಾಲಿನಲ್ಲಿ ಮಾರ್ಚ್‌-2023 ನೇ ಮಾಹೆಯ ಹಾಲಿನ ಪ್ರೋತ್ಸಾಹಧನ ಹಾಲು ಉತ್ಪಾದಕ ರೈತರ ಖಾತೆಗೆ ಸರ್ಕಾರದಿಂದ ಜಮಾ ಆಗಬೇಕಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಮಾರ್ಚ್‌-2023 ನೇ ಮಾಹೆಯ ರೂ.5 ಪ್ರೋತ್ಸಾಹಧನ ಕೂಡ ಶ್ರೀಘ್ರವೇ ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆಗುವ ನೀರಿಕ್ಷೆಯಿದೆ ಎಂದರು.

300x250 AD

2022-2023 ನೇ ಸಾಲಿನಲ್ಲಿ ಮಾರ್ಚ್‌-2023 ನೇ ಮಾಹೆಯನ್ನು ಹೊರತು ಪಡಿಸಿ 2023-2024 ನೇ ಸಾಲಿನ ಜುಲೈ-2023 ನೇ ಮಾಹೆಯವರೆಗಿನ ರೂ.5 ಪ್ರೋತ್ಸಾಹಧನ ರಾಜ್ಯ ಸರ್ಕಾರದಿಂದ ಜಿಲ್ಲೆಯ ಹಾಲು ಹಾಲು ಉತ್ಪಾದಕರ ರೈತರ ಖಾತೆಗೆ ಜಮಾ ಜಮಾ ಆದಂತಾಗಿದೆ ಎಂದರು. ಜುಲೈ-2023 ನೇ ಮಾಹೆಗಳ ರೂ. 5 ಪ್ರೋತ್ಸಾಹಧನ ಜಮಾ ಆಗದ ಹಾಲು ಉತ್ಪಾದಕ ರೈತರು ಕೂಡಲೇ ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದರು.

Share This
300x250 AD
300x250 AD
300x250 AD
Back to top