ಶಿರಸಿ: ಶಿರಸಿ ರೋಟರಿ ಕ್ಲಬ್‌ನಿಂದ ಇಲ್ಲಿನ ಬನವಾಸಿ ರಸ್ತೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 12 ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಲಾಯಿತು. ಶಿರಸಿ ರೋಟರಿ ಕ್ಲಬ್, ರೋಟರಿ ಜಿಲ್ಲೆ 3170 ಮತ್ತು ಕರ್ನಾಟಕ ಸರಕಾರದ ಕಾಲಿಜೆಟ್ ಇಲಾಖೆಯ ಸಹಭಾಗಿತ್ವದಲ್ಲಿ ಕಂಪ್ಯೂಟರ್ ವಿತರಣೆ ಕಾರ್ಯಕ್ರಮವು ಡಿ.21ರಂದು ನಡೆಯಿತು.
ಉದ್ಗಾಟನಾ ಕಾರ್ಯಕ್ರಮದಲ್ಲಿ ಶಿರಸಿ ರೋಟರಿಯ ಕಾರ್ಯದರ್ಶಿ ಗಣಪತಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ರೋಟರಿ ಸಂಸ್ಥೆಯ ಬಗ್ಗೆ ಮತ್ತು ಕಂಪ್ಯೂಟರ್ ವಿತರಣಾ ಕಾರ್ಯಕ್ರಮದ ವಿವರ ನೀಡಿದರು.
ಕಾಲೇಜಿಗೆ ನೀಡಿದ ಎಲ್ಲ ಕಂಪ್ಯೂಟರ್‌ಗಳನ್ನು ಪ್ರಾಯೋಜಿಸಿದ ರೋಟರಿಯ ಅಧ್ಯಕ್ಷರಾದ ಶ್ರೀಧರ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ಕಂಪ್ಯೂಟರ್‌ಗಳ ಪ್ರಯೋಜನ ಪಡೆದು ಹೆಚ್ಚಿನ ಶ್ರೇಯಸ್ಸು ಪಡೆಯಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ, ರೋಟರಿಯ ಅಸಿಸ್ಟಂಟ್ ಗವರ್ನರ್ ಆದ ಆರ್.ಎ. ಖಾಝಿ , ಕಾಲೇಜಿನ ಪ್ರಾಂಶುಪಾಲರಾದ ದಾಕ್ಷಾಯಿಣಿ ಹೆಗಡೆ ಉಪಸ್ಥಿತರಿದ್ದರು.
ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಸ್ವಾಗತಿಸಿದರು ಮತ್ತು I.Q.S.C. ಸಂಯೋಜಕರಾದ ಲೋಕೇಶ ವಂದಿಸಿದರು. ಕುಮಾರಿ ಅಶ್ವಿನಿ ಮತ್ತು ತೃಪ್ತಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರೆ, ಕುಮಾರಿ ಕಾವ್ಯ ಸುಶ್ರಾವ್ಯವಾಗಿ ಸ್ವಾಗತಗೀತೆ ಹಾಡಿದರು.