ದಾಂಡೇಲಿ : ದಾಂಡೇಲಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಮಾರ್ಗದ ತುರ್ತು ನಿರ್ವಹಣಾ ಕೆಲಸ ಇರುವ ಹಿನ್ನೆಲೆಯಲ್ಲಿ ನಾಳೆ ಡಿ:21 ರಂದು ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 6:00 ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ನಗರದಲ್ಲಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ್ ನಾಯಕ ಬುಧವಾರ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದ್ದಾರೆ.
ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ದಾಂಡೇಲಿ ತಾಲೂಕಿನ ಅಂಬಿಕಾನಗರ, ಜಮಗಾ, ಕುಳಗಿ, ಕೇಗದಾಳ, ಬೊಮ್ಮನಹಳ್ಳಿ, ಬಿ.ಪಿ ಡ್ಯಾಮ್, ಕಲಬಾವಿ ಹಾಗೂ ಬಡಕಾನಶೀರಡಾ, ಹಾರ್ನೋಡಾ ಮತ್ತು ಸಾಕ್ಷಾಳಿ ಗ್ರಾಮಗಳಲ್ಲಿ ನಾಳೆ ಡಿ:21 ರಂದು ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 6:00 ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಎಂದಿನಂತೆ ಸಹಕರಿಸುವಂತೆ ದೀಪಕ್ ನಾಯಕ ವಿನಂತಿಸಿದ್ದಾರೆ