ಶಿರಸಿ: ಚಂದೀಗಡ್ನಲ್ಲಿ 5 ದಿನಗಳಿಂದ ನಡೆಯುತ್ತಿದ್ದ ನ್ಯಾಷನಲ್ ರೋಲರ್ ಸ್ಕೇಟಿಂಗ್ ಹಾಕಿಯಲ್ಲಿ ಕರ್ನಾಟಕ ತಂಡ ಒಂದು ಬೆಳ್ಳಿ ಎರಡು ಕಂಚು ಪಡೆದು ಸಾಧನೆಗೈದಿದೆ.
ಕರ್ನಾಟಕ ತಂಡದಿಂದ ಪ್ರತಿನಿಧಿಸಿದ್ದ ತಾಲೂಕಿನ ಸಣ್ಣಕೇರಿಯ ಅಕ್ಷರ ರಮೇಶ ಹೆಗಡೆ 11 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ, ಹಾಗೂ ಕೆಡೆಟ್ ಮಿಕ್ಸ್ಡ್ ವಿಭಾಗದಲ್ಲಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಬಾಲಕಿಗೆ ದಿಲೀಪ್ ಹಣಬರ ಕೋಚ್ ನೀಡಿದ್ದು, ಈಕೆಯ ಸಾಧನೆಗೆ ಪಾಲಕರು, ಪೋಷಕರು ಅಭಿನಂದಿಸಿ, ಹಾರೈಸಿದ್ದಾರೆ.