Slide
Slide
Slide
previous arrow
next arrow

ದಾಂಡೇಲಿಯ ಗೃಹರಕ್ಷಕ ದಳಕ್ಕೆ ಜಿಲ್ಲಾ ಮಟ್ಟದ ಉತ್ತಮ ಘಟಕ ಪ್ರಶಸ್ತಿ

300x250 AD

ದಾಂಡೇಲಿ : ಗೃಹರಕ್ಷಕ ದಳ ಉತ್ತರ ಕನ್ನಡ ಜಿಲ್ಲೆ ಇದರ ವತಿಯಿಂದ ಕಾರವಾರದಲ್ಲಿ ನಡೆದ “ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆಯ” ಸಂದರ್ಭದಲ್ಲಿ ಚುನಾವಣೆ,ವಿವಿಧ ಬಂದೋಬಸ್ತ್ ಹಾಗೂ ಉತ್ತಮ ಸೇವೆಗಳನ್ನು ಗುರುತಿಸಿ ದಾಂಡೇಲಿಯ ಗೃಹರಕ್ಷಕ ದಳವು ಆಯ್ಕೆಯಾಗಿದ್ದು, ಜಿಲ್ಲಾ ಸಮಾದೇಷ್ಟರಾದ ಡಾ.ಸಂಜು.ಟಿ.ನಾಯಕ ಜಿಲ್ಲಾ ಮಟ್ಟದ ಉತ್ತಮ ಘಟಕ ಪ್ರಶಸ್ತಿಯನ್ನು ದಾಂಡೇಲಿಯ ಗೃಹರಕ್ಷಕ ದಳದ ಘಟಕಾಧಿಕಾರಿ ಧನಾಜಿ ಕಾಂಬಳೆ ಅವರಿಗೆ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಆರೋಗ್ಯಾಧಿಕಾರಿ ಡಾ.ಬಿ.ವಿ.ನೀರಜ್, ಕಾರವಾರದ ತಹಶೀಲ್ದಾರ್ ನಿಶ್ಚಲ್ ನರೋನ್ಹಾ,ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಮತ್ತು ಗೃಹರಕ್ಷಕ ದಳದ ಎಲ್ಲಾ ಘಟಕಗಳ ಘಟಕಾಧಿಕಾರಿಗಳು, ಪ್ರಭಾರ ಘಟಕಾಧಿಕಾರಿಗಳು, ಕಚೇರಿಯ ಸಿಬ್ಬಂದಿಗಳು, ಜಿಲ್ಲೆಯ ಎಲ್ಲಾ ಗೃಹರಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top