ಶಿರಸಿ: ಬ್ರಹ್ಮೀಭೂತ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿ ಅವರ ಆರಾಧನಾ ಮಹೋತ್ಸವ ಶ್ರೀ ಶ್ರೀಮದ್ಜಗದ್ಗುರು ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ಶನಿವಾರ ನೆರವೇರಿತು. ಇದರ ಅಂಗವಾಗಿ ಬೆಳಿಗ್ಗೆ ಸ್ವರ್ಣವಲ್ಲೀ ಮಹಾಸಂಸ್ಥಾನದ ನೂತನ ಗುರುಮೂರ್ತಿ ಮಂದಿರದಲ್ಲಿ ಶತರುದ್ರ ಪೂರ್ವಕ ಕಲ್ಪೋಕ್ತ ಮಹಾಪೂಜೆ ಸಂಪನ್ನಗೊಂಡಿತು.