Slide
Slide
Slide
previous arrow
next arrow

ತ್ರಿಶಂಕು ಕಥಾ ಸಂಕಲನ ಬಿಡುಗಡೆ

300x250 AD

ಶಿರಸಿ: ಕನ್ನಡ ಸಾಹಿತ್ಯ ಪರಿಷತ್ ಶಿರಸಿ ತಾಲೂಕಾ ಘಟಕದ ಆಶ್ರಯದಲ್ಲಿ ಶನಿವಾರ ಸಂಜೆ ಶಿರಸಿಯ ನೆಮ್ಮದಿ ಕುಟೀರದಲ್ಲಿ ಲೇಖಕ ಕಥೆಗಾರ ನರಸಿಂಹ ಹೆಗಡೆ ಕೋವಿಸರರವರ ತ್ರಿಶಂಕು ಕಥಾಸಂಕಲನ ಬಿಡುಗಡೆ ಗೊಳಿಸಲಾಯಿತು.

ಕೃತಿ ಲೋಕಾರ್ಪಣೆ ಮಾಡಿದ ಸಾಹಿತಿ ಡಾ| ಜಿ.ಎ.ಹೆಗಡೆ ಸೋಂದಾ ಮಾತನಾಡಿ ಇಂದು ಲೇಖಕರು ಪ್ರಚಾರ ಪ್ರಿಯತೆಯನ್ನು ಹೆಚ್ಚು ಬಯಸಿದಂತೆ ಕಾಣುತ್ತಿದೆ. ಜನರು ಅಪೇಕ್ಷಿಸುವ ಸಾಹಿತ್ಯ ಸೃಷ್ಠಿಯಾದರೆ ಓದುಗರು ದೊರೆಯುತ್ತಾರೆ. ಹೊಸತರಹದ ಸಾಹಿತ್ಯ ವಿಚಾರ ಹೊರಬರಬೇಕು. ಹೊಸ ಸಾಹಿತ್ಯದಿಂದ ಓದುಗರ ಜೊತೆ ಸಾಹಿತಿಯು ಪ್ರಚಾರಕ್ಕೆ ಬರಬೇಕು ಎಂದರು.

ಪುಸ್ತಕ ಪರಿಚಯವನ್ನು ಹಿರಿಯ ಸಾಹಿತಿ ವಾಗ್ಮಿ ಗಣಪತಿ ಭಟ್ಟ ವರ್ಗಾಸರ ಮಾಡಿ ಸಾಮಾಜಿಕ ಗ್ರಹಿಕೆಯೊಂದಿಗೆ ಉತ್ತಮ ಕಥಾಹಂದರವನ್ನು ತ್ರಿಶಂಕು ಕಥಾಸಂಕಲನದ ಕಥೆಯಲ್ಲಿ ಹರಡಿಕೊಂಡಿದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಎನ್.ಹೊಸಮನಿ ಮಾತನಾಡಿ ಜೀವನಕ್ಕೆ ಆಪ್ತವಾದ ನೈಜತೆಯ ಕಥೆಯನ್ನು ನರಸಿಂಹ ಹೆಗಡೆ ಬರೆದಿದ್ದಾರೆ ಎಂದರು. ಕೃತಿಗೆ ಮುನ್ನಡಿ ಬರೆದ ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಮಾತನಾಡಿ ಲೇಖಕರಿಗೆ ತಮ್ಮ ಬರಹದಲ್ಲಿ ವಿಮರ್ಶಾತ್ಮಕ ಗುಣವನ್ನು ಮೈಗೂಡಿಸಿಕೊಂಡರೆ ಸತ್ವಯುತ ಬರಹ ಕೃತಿಯಲ್ಲಿ ಹೆಚ್ಚು ಕಾಣಬಹುದಾಗಿದೆ ಎಂದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಶಿರಸಿ ತಾಲೂಕಾ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ವಹಿಸಿದರು. ಆರಂಭದಲ್ಲಿ ಸುಬ್ರಾಯ ಹೆಗಡೆ ಕೆರೆಕೊಪ್ಪ ಸ್ವಾಗತಿಸಿದರು. ವಿಮಲಾ ಭಾಗ್ವತ್ ಪ್ರಾರ್ಥಿಸಿದರು. ಕವಿ ಕೃಷ್ಣ ಪದಕಿ ಕಾರ್ಯಕ್ರಮ ನಿರ್ವಹಿಸಿದರು. ವಿ.ಆರ್ ಹೆಗಡೆ ಮತ್ತಿಘಟ್ಟಾ ವಂದಿಸಿದರು.

Share This
300x250 AD
300x250 AD
300x250 AD
Back to top