Slide
Slide
Slide
previous arrow
next arrow

ನಾಲ್ಕನೇ ದಿನಕ್ಕೆ ಮುಂದುವರಿದ ಗ್ರಾಮೀಣ ಅಂಚೆ ನೌಕರರ ಮುಷ್ಕರ

300x250 AD

ದಾಂಡೇಲಿ : ಗ್ರಾಮೀಣ ಅಂಚೆ ನೌಕರರ ಉಳಿವಿಗಾಗಿ ಕಮಲೇಶ್ ಚಂದ್ರ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಾಂಡೇಲಿ ತಾಲೂಕಿನ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಮುಷ್ಕರ ಶುಕ್ರವಾರ ನಾಲ್ಕನೇ ದಿನಕ್ಕೆ ಮುಂದುವರೆದಿದೆ.

ನಗರದ ಬರ್ಚಿ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿಯ ಮುಂಭಾಗದಲ್ಲಿ ಗ್ರಾಮೀಣ ಅಂಚೆ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಎಂಟು ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲ ಸವಲತ್ತುಗಳನ್ನು ಒದಗಿಸುವುದು. ಸೇವಾ ಹಿರಿತನದ ಆಧಾರದ ಮೇಲೆ 12- 24- 36 ವರ್ಷ ಸೇವೆ ಸಲ್ಲಿಸಿದ ಗ್ರಾಮೀಣ ಅಂಚೆ ನೌಕರರಿಗೆ ವಿಶೇಷ ಇನ್ಕ್ರಿಮೆಂಟ್ ನೀಡುವುದು. ಗ್ರಾಚ್ಯುಟಿ ಮೇಲಿನ ಮೊತ್ತವನ್ನು ರೂ:1.50 ಲಕ್ಷದಿಂದ ರೂ: 5 ಲಕ್ಷದವರೆಗೆ ಏರಿಕೆ ಮಾಡಬೇಕು. ಗ್ರಾಮೀಣ ಅಂಚೆ ನೌಕರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಗ್ರಾಮೀಣ ಅಂಚೆ ನೌಕರರಿಗೆ 30 ದಿನಗಳ ವೇತನ ಸಹಿತ ರಜೆಯನ್ನು ನೀಡಬೇಕು ಮತ್ತು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ 180 ದಿನಗಳ ವರೆಗೆ ರಜೆ ಉಳಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಬೇಕು. ಗ್ರೂಪ್ ಇನ್ಸೂರೆನ್ಸ್ ಕವರೇಜ್ ಮೊತ್ತವನ್ನು ರೂ: 5 ಲಕ್ಷದವರೆಗೆ ಹೆಚ್ಚಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕರೆಯ ಮೇರೆಗೆ ದಾಂಡೇಲಿ ತಾಲೂಕಿನ ಗ್ರಾಮೀಣ ಅಂಚೆ ನೌಕರರು ಮುಷ್ಕರವನ್ನು ಕೈಗೊಂಡಿದ್ದಾರೆ.

ಮುಷ್ಕರದ ನಾಲ್ಕನೇ ದಿನವಾದ ಶುಕ್ರವಾರ ನಗರಸಭೆಯ ಸದಸ್ಯರಾದ ಮಹದೇವ್ ಜಮಾದಾರ್ ಅವರು ಮುಷ್ಕರದಲ್ಲಿ ಭಾಗವಹಿಸಿ, ಗ್ರಾಮೀಣ ಅಂಚೆ ನೌಕರರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

300x250 AD

ಈ ಸಂದರ್ಭದಲ್ಲಿ ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಬಿ.ರಂಗಸ್ವಾಮಿ ಹಾಗೂ ಗಚರಾಮೀಣ ಅಂಚೆ ನೌಕರರಾದ ಭಾರತಿ ಶೇಡಿ, ಆನಂದ್ ಕುಡ್ಚಿಕರ್, ಪೂಜಾ ರೂಗಿ, ಶಿಲ್ಪಾ ಪಾಲ್, ಮೇಘ ಜಾಧವ್, ಶ್ರೀಧರ್, ಕೃಷ್ಣ, ರವಿಕುಮಾರ್, ಮಂಜುನಾಥ್ ಭಾಗ್ವತ್, ಮೌಲಾಲಿ, ಪ್ರಕಾಶ್ ದೇಸಾಯಿ, ಬಾಲಕೃಷ್ಣ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top