ಅಂಕೋಲಾ: ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹೆಬ್ಬುಳದ ಪ್ರತಿಭೆ ಸೀತಾರಾಮ ಗೌಡನಿಗೆ ಹೆಬ್ಬುಳದ ಶಾಲೆ ಆವರಣದಲ್ಲಿ ಹಳೆವಿದ್ಯಾರ್ಥಿಗಳ ಒಕ್ಕೂಟ ಹಾಗೂ ಹೆಬ್ಬುಳ ಗ್ರಾಮಸ್ಥರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಂಕಸಾಳ ಗ್ರಾಮ ಪಂಚಾಯತ್ ಅಧ್ಯಕ್ಷೆ ರಮೀಜಾ ರಾಜಾಸಾಬ್ ಸೈಯದ್ ಮಾತನಾಡಿ ಪ್ರಕಾಶ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಇಡೀ ನಮ್ಮ ಸುಂಕಸಾಳ ಪಂಚಾಯತ್ ಗೆ ಹೆಮ್ಮೆ ತಂದಿದೆ. ಹೆಬ್ಬುಳ ಗ್ರಾಮ ಇಂದು ಪ್ರಕಾಶನಿಂದ ಗುರುತಿಸಿಕೊಳ್ಳುವಂತಾಗಿರುವುದು ನಮಗೆಲ್ಲ ಹೆಮ್ಮೆ ತಂದಿದೆ. ಈತನಿಗೆ ಪಂಚಾಯತ್ ವತಿಯಿಂದ ಬೇಕಾಗುವ ಎಲ್ಲ ರೀತಿಯ ಸಹಾಯ ಸಹಕಾರ ನೀಡಲು ನಾವುಗಳು ಸದಾ ಸಿದ್ಧ ಎಂದರು. ಗ್ರಾ.ಪಂ ಸದಸ್ಯರಾದ ಪ್ರವೀಣ ನಾಯರ್ ಮಾತನಾಡಿ ಪ್ರಕಾಶ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಆತನ ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ಇನ್ನು ಹೆಚ್ಚಿನ ತರಭೇತಿ ಪಡೆಯಲು ಬೇಕಾಗುವ ಎಲ್ಲ ಪ್ರಯತ್ನಗಳನ್ನು ನಾವು ಊರವರೆಲ್ಲ ಸೇರಿ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶಂಕರ ಭಟ್, ಸಂತೋಷ ತಳೇಕರ್, ವಿಶಾಲ್ ತಳೇಕರ್, ಯೊಗೇಶ ಗುನಗಾ, ಈಶ್ವರ ಗೌಡ, ಪ್ರವೀಣ್ ಗೌಡ, ಉದಯ ಗೌಡ, ವೆಂಕಟ್ರಮಣ ಗೌಡ, ಶಾಂತರಾಮ ಗೌಡ, ಸೀತಾ ನಾಯ್ಕ, ಹೇಮಾ ನಾಯ್ಕ, ಉಮಾಕಾಂತ ತಳೇಕರ್, ರವಿದಾಸ್ ಪೆಡ್ನೇಕರ್, ಸುಮನಾ ನಾಯ್ಕ ಶಾಲಾ ಶಿಕ್ಷಕ ವೃಂದ, ಅಡುಗೆಯವರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಊರ ನಾಗರಿಕರು ಉಪಸ್ಥಿತರಿದ್ದರು.