Slide
Slide
Slide
previous arrow
next arrow

ಭಟ್ಕಳದಲ್ಲಿ ಹನಿಟ್ರ್ಯಾಪ್ ಪ್ರಕರಣ : ಇಬ್ಬರ ಬಂಧನ

300x250 AD

ಮಹಿಳೆಯರನ್ನು ಬಳಸಿಕೊಂಡು ದರೋಡೆ – ಪೊಲೀಸರ ಅತಿಥಿಯಾದ ಆರೋಪಿಗಳು

ಭಟ್ಕಳ: ಇಬ್ಬರು ಮಹಿಳೆಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುವ ಮೂಲಕ ಇಲ್ಲಿನ ಅಂಗಡಿ ವ್ಯಾಪಾರಿಯೋರ್ವನ ನಗದು ಹಾಗೂ ಮೊಬೈಲ್ ಫೋನ್ ದರೋಡೆ ಮಾಡಿದ ಆರೋಪದಡಿ ಇಬ್ಬರು ಖತರ್ನಾಕ್ ಆರೋಪಿಗಳನ್ನು ಬಂಧಿಸುವಲ್ಲಿ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ದರೋಡೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ನಾಲ್ವರಲ್ಲಿ ಫರ್ಜಾನಾ ಎಂಬ ಮಹಿಳೆ ಹಾಗೂ ಕಾರು ಚಾಲಕ ಮುರ್ಜುಜಾ ಎಂದು ತಿಳಿದು ಬಂದಿದ್ದು, ಇನ್ನಿಬ್ಬರ ಹೆಸರು, ವಿಳಾಸ ತಿಳಿದು ಬಂದಿಲ್ಲ. ಈ ಮಹಿಳೆಯರು ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದು ಅಂಗಡಿಯವನ ಫೋನ್ ನಂಬರ್ ಪಡೆದುಕೊಂಡಿದ್ದರು. ಅಲ್ಲದೇ, ರಾತ್ರಿ ಕರೆ ಮಾಡಿ, ತಿರುಗಾಡಲು ಹೋಗೋಣ ಎಂದು ತಿಳಿಸಿ, ಆತನನ್ನು ಹನೀಫಾಬಾದ್ ಕ್ರಾಸ್‌ಗೆ ಕರೆದೊಯ್ದಿದ್ದಾರೆ.

ಸ್ವಿಪ್ಟ್ ಕಾರಿನಲ್ಲಿ ಚಾಲಕ ಸೇರಿದಂತೆ ಇಬ್ಬರು ಮಹಿಳೆಯರು ಹಾಗೂ ಇನ್ನೋರ್ವ ಪುರುಷ ಸೇರಿ ಒಟ್ಟೂ ನಾಲ್ವರು ಆರೋಪಿಗಳು ಆತನನ್ನು ಮುರ್ಡೇಶ್ವರ ಸಮೀಪ ಕರೆದುಕೊಂಡು ಹೋಗಿ, ಅಲ್ಲಿ ನಾಲ್ವರೂ ಸೇರಿ ಹಲ್ಲೆ ಮಾಡಿದ್ದಾರೆ. ನಂತರ ದರೋಡೆ ಮಾಡಿದ್ದಲ್ಲದೇ, ಹೊನ್ನಾವರ ಸಮೀಪ ಕರೆದುಕೊಂಡು ಹೋಗಿ ತನ್ನಿಂದ ತಪ್ಪಾಗಿದೆ. ಮಹಿಳೆಯ ಮೈಮೇಲೆ ಕೈಮಾಡಿದ್ದೇನೆ ಎಂದು ಒತ್ತಾಯಪೂರ್ವಕವಾಗಿ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ. ಈ ಬಗ್ಗೆ ದೂರು ನೀಡಿದರೆ ವೀಡಿಯೋ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನಂತರ ರಾತ್ರಿ 1-30 ರ ಸುಮಾರಿಗೆ ವೆಂಕಟಾಪುರ ಸೇತುವೆಯ ಮೇಲೆ ಈತಙ್ನು ತಳ್ಳಿಹಾಕಿ, ಅವರು ತೆರಳಿದ್ದಾರೆ ಎಂದು ಅಂಗಡಿ ಮಾಲಿಕ ದೂರಿನಲ್ಲಿ ತಿಳಿಸಿದ್ದಾರೆ.

ದೂರು ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಪಿಎಸ್‌ಐ ಚಂದನ ಗೋಪಾಲ ವಿ., ತನಿಖೆ ನಡೆಸುತ್ತಿದ್ದಾರೆ.

300x250 AD

ಮತ್ತೊಂದು ಪ್ರಕರಣ:

ಕುಂದಾಪುರದ ಸಂಕೇತ ತಿಮ್ಮಪ್ಪ ಪೂಜಾರಿ ಎನ್ನುವವರು ಇವರ ಬಗ್ಗೆಯೇ ದೂರು ನೀಡಿದ್ದು, ದೂರಿನಲ್ಲಿ ಪುರವರ್ಗದ ಮುರ್ತುಜಾ ಮತ್ತು ಇನ್ನಿಬ್ಬರು ಅಪರಿಚಿತರು ಗಾರೆ ಕೆಲಸ ಮಾಡುವ ವ್ಯಕ್ತಿಯನ್ನು ಹಡೀನ್‌ನಲ್ಲಿ ಸಿಮೆಂಟ್ ದಾಸ್ತಾನು ಮಳಿಗೆ ತೋರಿಸುತ್ತೇನೆ ಎಂದು ಕರೆದು ಕೊಂಡು ಹೋಗಿ, ಹಡೀನ್ ಹತ್ತಿರ ಆರೋಪಿತರು ಮೂವರೂ ಸೇರಿ ಆತನನ್ನು ಹಿಡಿದುಕೊಂಡು
ಕುತ್ತಿಗೆಯಲ್ಲಿದ್ದ 10 ಗ್ರಾಂ ತೂಕದ 60 ಸಾವಿರ ರೂ. ಮೌಲ್ಯದ ಚಿನ್ನದ ಚೈನು, 20 ಸಾವಿರ ರೂ. ಮೌಲ್ಯದ ಎಂ.ಐ. ಕಂಪೆಯನಿಯ ನೋಟ್ ಪ್ರೋ ಮೊಬೈಲನ್ನು ಬಲವಂತವಾಗಿ ಕಿತ್ತುಕೊಂಡು, ಎರಡು ಸ್ಕೂಟರಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ದೂರನ್ನೂ ಸ್ವೀಕರಿಸಿದ ಪಿಎಸ್‌ಐ ಚಂದನ ಗೋಪಾಲ ವಿ., ತನಿಖೆ ನಡೆಸುತ್ತಿದ್ದಾರೆ. ಎರಡೂ ಪ್ರಕರಣದ ಆರೋಪಿಗಳಾಗ ಪುರವರ್ಗದ ನಿವಾಸಿಗಳಾದ ಮುರ್ತುಜಾ ಹಾಗೂ ರಿಜ್ವಾನ್ ಇಬ್ಬರನ್ನೂ ಬಂಧಿಸಲಾಗಿದ್ದು, ದರೋಡೆ ಮಾಡಿದ ವಸ್ತುಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ಮಹಿಳೆಯರ ಕುರಿತು ಸುಳಿವು ದೊರೆತಿದ್ದು, ಶೀಘ್ರದಲ್ಲಿ ಬಂಧಿಸುವ ವಿಶ್ವಾಸವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share This
300x250 AD
300x250 AD
300x250 AD
Back to top