Slide
Slide
Slide
previous arrow
next arrow

ಬಾವಿ ನೀರಿನಲ್ಲಿ ಪೆಟ್ರೋಲ್ ವಾಸನೆ; ಜನತೆ ಆತಂಕ

300x250 AD

ಶಿರಸಿ: ನಗರದ ಕೋಟೆಗಲ್ಲಿಯ ಸೌದಾಗರ ಓಣಿಯಲ್ಲಿರುವ ಸಾರ್ವಜನಿಕ ಬಾವಿಯ ನೀರಿನಲ್ಲಿ ಪೆಟ್ರೋಲ್ ಮಿಶ್ರಿತ ವಾಸನೆ ಬರುತ್ತಿರುವುದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಗುರುವಾರ ಬೆಳಿಗ್ಗೆ ಬಾವಿಯಿಂದ ನೀರು ಎತ್ತುವಾಗ ಪೆಟ್ರೋಲ್ ಹಾಗೂ ಡಿಸೈಲ್ ವಾಸನೆ ಬಂದಿರುವುದರಿಂದ ಸ್ಥಳೀಯರು ನಗರಸಭೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಾವಿಯ ಅನತಿ ದೂರದಲ್ಲಿಯೇ ಪೆಟ್ರೋಲ್ ಪಂಪ್ ಇದ್ದು, ಅಲ್ಲಿನ ಟ್ಯಾಂಕ್ ಸೋರಿಕೆಯಿಂದ ಪೆಟ್ರೋಲ್ ಮತ್ತು ಡಿಸೈಲ್ ಅಂಶ ಬಾವಿಗೆ ಸೇರಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

300x250 AD

ಕೋಟೆಗಲ್ಲಿಯ ಮಸೀದಿ ಎದುರಿನ ಸಾರ್ವಜನಿಕ ಬಾವಿಯ ನೀರು ಕಲುಷಿತಗೊಂಡು ಪೆಟ್ರೋಲ್ ವಾಸನೆ ಬರುತ್ತಿರುವುದರಿಂದ ಕುಡಿಯಲು ಮತ್ತು ಇನ್ನಿತರ ದಿನನಿತ್ಯದ ಬಳಕೆಗೆ ಯೋಗ್ಯವಿಲ್ಲದಂತಾಗಿದ್ದು, ಬಾವಿಯ ನೀರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಗರಸಭೆಯ ಮುಂದಿನ ಆದೇಶದವರೆಗೆ ಬಾವಿಯ ನೀರನ್ನು ಬಳಸಬಾರದು ಎಂದು ನಗರಸಭೆಯಿಂದ ನೋಟಿಸ್ ಹೊರಡಿಸಲಾಗಿದೆ.

Share This
300x250 AD
300x250 AD
300x250 AD
Back to top