Slide
Slide
Slide
previous arrow
next arrow

ಡಿ.11 ಹಾಗೂ 12 ರಂದು ಅಂತರಾಷ್ಟ್ರೀಯ ಸಮ್ಮೇಳನ

300x250 AD

ಕುಮಟಾ: ಕಾಲೇಜು ಶಿಕ್ಷಣದಲ್ಲಿ ಬೆಳೆಯುತ್ತಿರುವ ಸಂಶೋಧನಾ ಆಕಾಂಕ್ಷೆಗಳ ವಿಷಯದ ಮೇಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ.11 ಹಾಗೂ 12 ರಂದು ಎರಡು ದಿನಗಳ ಕಾಲ ಅಂತರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯೆ ವಿಜಯಾ ಡಿ. ನಾಯ್ಕ ತಿಳಿಸಿದರು.

ಕಾಲೇಜಿನಲ್ಲಿ ಸೋಮವಾರ ಸಮ್ಮೇಳನದ ಮಾಹಿತಿ ಪತ್ರ ಬಿಡುಗಡೆಗೊಳಿಸಿ, ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪದವಿ ಕಲಿಕೆಯ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಹಾಗೂ ಮೂಲ ವಿಜ್ಞಾನ ಸಾಧ್ಯತೆಗಳತ್ತ ಪ್ರೇರೇಪಿಸುವ ನಿಟ್ಟಿನಲ್ಲಿ ಸಮ್ಮೇಳನದ ಮೂಲಕ ವಿದ್ಯಾರ್ಥಿಗಳನ್ನು ಪದವಿ ಕಲಿಕೆಯ ನಂತರ ಸಂಶೋಧನಾ ವಿಷಯಗಳತ್ತ ಹುರಿದುಂಬಿಸುವ ಪ್ರಯತ್ನ ಇದರಲ್ಲಿದೆ ಎಂದರು.

ಸಮ್ಮೇಳನದ ಸಂಚಾಲಕ ಪ್ರೊ.ಐ.ಕೆ.ನಾಯ್ಕ ಮಾತನಾಡಿ, ಸಾಮಾನ್ಯವಾಗಿ ಸ್ನಾತಕೋತ್ತರ ಹಂತದಲ್ಲಿ ಸಂಶೋಧನಾತ್ಮಕ ವಿಚಾರಗಳಿಗೆ ಇಂಬು ನೀಡಲಾಗುತ್ತದೆ. ಆದರೆ ಪದವಿ ಹಂತದಲ್ಲೇ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಪ್ರೇರೇಪಿಸಿದರೆ ದೇಶದಲ್ಲಿ ಭವಿಷ್ಯದಲ್ಲಿ ಹೆಚ್ಚಿನ ಸಂಶೋಧನೆಗಳಿಗೆ ಪ್ರಯತ್ನ ನಡೆಯಬಹುದು. ಕೇವಲ ಸಂಬಳ ಅಥವಾ ನೌಕರಿಗಾಗಿ ಅಧ್ಯಯನವಾಗದೇ ಕಲಿಕೆಯ ಸಾರ್ಥಕತೆಯೆಡೆಗೆ ಸಂಶೋಧನೆಗಳ ಗುರಿ ಮಾಡಬೇಕಿದೆ. ಹೀಗೆ ಪದವಿ ಶಿಕ್ಷಣ ವ್ಯವಸ್ಥೆ ಅರ್ಥೈಸುವ ಪ್ರಯತ್ನ ಸಮ್ಮೇಳನದ ಮೂಲಕ ನಡೆಯಲಿದೆ. ನಮ್ಮ ಕಾಲೇಜಿಗೂ ನ್ಯಾಕ್ ಮಾನ್ಯತೆ ಮೇಲ್ದರ್ಜೆಗೆ ಏರಿಸುವಲ್ಲಿ ಸಹಕಾರಿಯಾಗಲಿದೆ ಎಂದರು.

ಸಮ್ಮೇಳನದಲ್ಲಿ ದೇಶದ ವಿವಿದೆಡೆಗಳಿಂದ ವಿಷಯ ತಜ್ಞರು ಮಾತ್ರವಲ್ಲದೇ ದಕ್ಷಿಣ ಕೋರಿಯಾ, ನೈಜಿರಿಯಾ, ರಷ್ಯಾ, ಜರ್ಮನಿ ಇನ್ನಿತರ ವಿದೇಶಗಳಿಂದಲೂ ವಿದ್ವಾಂಸರು ಆಗಮಿಸಿ ವಿಷಯ ಮಂಡಿಸಲಿದ್ದಾರೆ. ಪದವಿ ಹಂತದ ಸಂಶೋಧನಾ ಸಂಸ್ಕೃತಿ, ವಿಜ್ಞಾನ, ಸಾಮಾಜಿಕ ವಿಜ್ಞಾನ ಹಾಗೂ ಮಾನವೀಯತೆಗಳು, ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆಯ ನಾಲ್ಕು ವಿಷಯ ವಿಭಾಗಗಳಲ್ಲಿ ಸಮ್ಮೇಳನ ನಡೆಯಲಿದೆ ಎಂದರು.

300x250 AD

ಎಲ್ಲ ವಿಭಾಗಗಳಲ್ಲಿ ಉತ್ತಮ ವಿಷಯ ಮಂಡನೆಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಮುನ್ನೂರಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು, ವಿದ್ಯಾರ್ಥಿಗಳು ಇನ್ನಿತರರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಎಲ್ಲ ಬಗೆಯ ವ್ಯವಸ್ಥೆ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ ಇಂಥ ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನ ಇತ್ತೀಚಿನ ವರ್ಷಗಳಲ್ಲಿ ಇದೇ ಪ್ರಥಮ ಬಾರಿಯಾಗಿದ್ದು ಇದೊಂದು ಐತಿಹಾಸಿಕ ಸಮ್ಮೇಳನಗೊಳಿಸುವತ್ತ ಸಂಪೂರ್ಣ ಪ್ರಯತ್ನ ಮಾಡಲಾಗುವುದು ಎಂದರು.

ಡಾ. ಗೀತಾ ನಾಯ್ಕ, ವಿ.ಎಂ.ನಾಯ್ಕ, ಕೃಷ್ಣ ನಾಯಕ, ಸಂದೇಶ ಎಚ್. ಇದ್ದರು.

Share This
300x250 AD
300x250 AD
300x250 AD
Back to top