Slide
Slide
Slide
previous arrow
next arrow

ಆರೋಗ್ಯವಂತರು ರಕ್ತದಾನ ಮಾಡಿ ಜೀವ ಉಳಿಸಲು ನೆರವಾಗಿ: ಡಾ.ಸೌಮ್ಯ ಕೆ.

300x250 AD

ಯಲ್ಲಾಪುರ: ರಕ್ತದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು. ಅವಶ್ಯಕತೆಯ ಸಂದರ್ಭವನ್ನು ಎದುರಿಸಲು ರಕ್ತ ಸಂಗ್ರಹಣೆ ಅವಶ್ಯ. ಆರೋಗ್ಯವಂತರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ನೆರವಾಗಬೇಕೆಂದು ನೇತ್ರತಜ್ಞೆ ಡಾ. ಸೌಮ್ಯ ಕೆ. ವಿ. ಹೇಳಿದರು.

ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗೂ ವಿಶ್ವದರ್ಶನ ಸೇವಾ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನದ ಮಹತ್ವದ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಮಾತನಾಡಿ, ಸಂಸ್ಥೆ ಕೇವಲ ಶಿಕ್ಷಣ ಮಾತ್ರ ಅಲ್ಲದೇ ವಿದ್ಯಾರ್ಥಿಗಳಿಗೆ ಸೇವಾ ಪರಿಕಲ್ಪನೆಯನ್ನು ಬೆಳೆಸುತ್ತಿದೆ. ಸಮಾಜದಲ್ಲಿ ನಾವು ಪರಸ್ಪರರಿಗೆ ಸಹಕರಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಎಚ್ ಡಿ ಎಫ್ ಸಿ ಬ್ಯಾಂಕ್ ಶಿರಸಿ ಶಾಖೆಯ ವ್ಯವಸ್ಥಾಪಕ ಜುಜೆಸ್ ಫರ್ನಾಂಡಿಸ್, ಯಲ್ಲಾಪುರ ಶಾಖೆಯ ವ್ಯವಸ್ಥಾಪಕ ರೋಹನ್ ಗೋಪಾಲಕೃಷ್ಣ ಬಗ್ಗೋಣ ಉಪಸ್ಥಿತರಿದ್ದರು. ಉಪನ್ಯಾಸಕರಾದ ಕವಿತಾ ಹೆಬ್ಬಾರ, ರವೀಂದ್ರ ಶರ್ಮಾ ನಿರ್ವಹಿಸಿದರು. ಶಿರಸಿಯ ಪಂಡಿತ ಸರ್ಕಾರಿ ಆಸ್ಪತ್ರೆ ಹಾಗೂ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ರಕ್ತ ಸಂಗ್ರಹಣಾ ಘಟಕದ ಸಿಬ್ಬಂದಿ ದಾನಿಗಳಿಂದ ಸುಮಾರು 28 ಯೂನಿಟ್ ರಕ್ತ ಸಂಗ್ರಹಿಸಿದರು.

300x250 AD
Share This
300x250 AD
300x250 AD
300x250 AD
Back to top