Slide
Slide
Slide
previous arrow
next arrow

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನ ಕೊರತೆಯಿಲ್ಲ: ನಾಗೇಶ ರಾಯ್ಕರ

300x250 AD

ಅಂಕೋಲಾ: ಸರಕಾರದಿಂದ ಇಲಾಖೆಗಳಿಗೆ ಹಲವಾರು ಉದ್ಯೋಗ ಖಾತ್ರಿ ಯೋಜನೆಗಳು ಬರುತ್ತವೆ. ಅವನ್ನು ಕಾರ್ಯರೂಪಕ್ಕೆ ತರಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನದ ಕೊರತೆ ಇಲ್ಲ. ಜನರಿಗೆ ಕೆಲಸ ಕೊಡಿ ಎಂದು ತಾ.ಪಂ.ಆಡಳಿತಾಧಿಕಾರಿ ನಾಗೇಶ ರಾಯ್ಕರ ಹೇಳಿದರು.

ಅವರು ತಾ.ಪಂ. ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಕೆಲವು ಇಲಾಖೆಗಳಲ್ಲಿ ಸರಕಾರದ ಯೋಜನೆಗಳ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ತೋಟಗಾರಿಕೆ ಇಲಾಖೆ ಹಾಗೂ ಇತರ ಕೆಲವು ಇಲಾಖೆಯಲ್ಲಿ ನಮಗಿಂತ ನೆರೆಯ ತಾಲೂಕುಗಳು ಉತ್ತಮ ಪ್ರಗತಿ ಸಾಧಿಸಿವೆ. ಈಗಾಗಲೇ ವರ್ಷದ ಮುಕ್ಕಾಲು ಅವಧಿ ಮುಗಿದಿದೆ. ಅಂಕೋಲಾ ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದೆ. ನರೇಗಾ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬರುವ ಕೆಲಸಗಳ ವೇಗ ಹೆಚ್ಚಿಸಿ, ಜನರಿಗೆ ಕೆಲಸ ಕೊಡಿ ಎಂದರು.

ತೋಟಗಾರಿಕಾ ಇಲಾಖೆಯ ಪ್ರಸನ್ನಕುಮಾರ ಮಾತನಾಡಿ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವದರಿಂದ ಕೆಲವು ಯೋಜನೆಗಳಿಗೆ ಹಿನ್ನಡೆಯಾಗುತ್ತಿದೆ ಎಂದರು.

ಅಂಕೋಲಾ ತಾಲೂಕಾಸ್ಪತ್ರೆಯಲ್ಲಿ ಎಲ್ಲ ಡಯಾಲಿಸಿಸ್ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆಸ್ಪತ್ರೆಯಲ್ಲಿ ನಾಲ್ಕು ಎಂಬಿಬಿಎಸ್ ವೈದ್ಯರು ಇರಬೇಕಿತ್ತು. ಸದ್ಯ ಒಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಸ್ತ್ರೀರೋಗ ತಜ್ಞರ ತೀರ ಅವಶ್ಯಕತೆ ಇದೆ. ಆದರೆ ಇದುವರೆಗೂ ಯಾರೂ ಬಂದಿಲ್ಲ. ಲ್ಯಾಬ್‌ನಲ್ಲೂ ಸಿಬ್ಬಂದಿ ಕೊರತೆ ಇರುವದರಿಂದ ತೊಂದರೆಯಾಗುತ್ತಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ಸಂತೋಷಕುಮಾರ ಹೇಳಿದರು.

ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದಿರುವದರಿಂದ ರಾಮನಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಎರಡೂ ಕಡೆ ನಿಭಾಯಿಸಬೇಕಾದ ಪರಿಸ್ಥಿತಿ ಇದೆ ಎಂದರು.

300x250 AD

ಪಶು ವೈದ್ಯಕೀಯ ಇಲಾಖೆಯ ಅಧಿಕಾರಿ ಮಾತನಾಡಿ, ಜಾನುವಾರು ಕಳ್ಳತನ ಹಾಗೂ ಅಪಘಾತಗಳಿಂದ ದನಕರುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಅಲ್ಲದೇ, ಮಿಶ್ರ ತಳಿಯ ಹಸುಗಳ ಸಂಖ್ಯೆಯೂ ಕಡಿಮೆ ಇರುವದರಿಂದ ಕೃತಕ ಗರ್ಭಧಾರಣೆಯ ಪ್ರಗತಿಯೂ ಕಡಿಮೆಯಾಗಿದೆ ಎಂದರು.

ಸಭೆಯಲ್ಲಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಿಡಿಸದಿರುವ ಕುರಿತು ಚರ್ಚೆಯಾಯಿತು. ಅದಕ್ಕೆ ಘಟಕ ವ್ಯವಸ್ಥಾಪಕಿ ಚೈತನ್ಯ ಅಗರಗಟ್ಟಿ ಉತ್ತರಿಸಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯಾಗಿಲ್ಲ. ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ರಾತ್ರಿ ವೇಳೆ ಬರುವ ಬಸ್ಸುಗಳು ನಿಲ್ದಾಣದೊಳಗೇ ಬಂದು ಹೋಗುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನೀಲ‌ ಎಂ. ಸಭೆ ನಿರ್ವಹಿಸಿದರು

Share This
300x250 AD
300x250 AD
300x250 AD
Back to top