Slide
Slide
Slide
previous arrow
next arrow

ಮಾಜಾಳಿಯಲ್ಲಿ ಚಿತ್ರನಟ ರಿಷಬ್ ಶೆಟ್ಟಿ ಕಾರು ತಪಾಸಣೆ

300x250 AD

ಕಾರವಾರ: ಚಲನಚಿತ್ರ ನಟ ರಿಷಬ್ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರನ್ನು ಬುಧವಾರ ತಾಲ್ಲೂಕಿನ ಮಾಜಾಳಿ ಚೆಕ್‍ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿಗಳು ತಪಾಸಣೆ ನಡೆಸಿದರು.

ಗೋವಾದಲ್ಲಿ ನಡೆದ 54ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಬಳಿಕ ಕುಂದಾಪುರಕ್ಕೆ ಕಾರವಾರ ಮಾರ್ಗವಾಗಿ ರಿಷಬ್ ಪ್ರಯಾಣಿಸಿದ್ದರು. ಮಾಜಾಳಿಯಲ್ಲಿರುವ ರಾಜ್ಯ ತನಿಖಾ ಠಾಣೆ ಬಳಿ ಕಾರನ್ನು ಸಿಬ್ಬಂದಿ ತಪಾಸಣೆಗಾಗಿ ತಡೆದು ನಿಲ್ಲಿಸಿದ್ದರು.

300x250 AD

ನಿಯಮದಂತೆ ಪ್ರತಿ ವಾಹನವನ್ನು ತಡೆದು ತಪಾಸಣೆ ನಡೆಸಲಾಗುತ್ತಿತ್ತು. ಕಾರಿನಲ್ಲಿದ್ದದ್ದು ರಿಷಬ್ ಎಂದು ಗೊತ್ತಾಗುತ್ತಿದ್ದಂತೆ ಪುಳಕಿತರಾದೆವು. ಅವರನ್ನು ಮಾತನಾಡಿಸಿದೆವು. ಕಾರಿನಿಂದ ಕೆಳಕ್ಕೆ ಇಳಿದು ಬಂದ ಅವರು ಕರ್ತವ್ಯದಲ್ಲಿದ್ದ ಅಬಕಾರಿ, ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜತೆ ಫೋಟೊ ತೆಗೆಸಿಕೊಂಡರು ಎಂದು ಸಿಬ್ಬಂದಿಯೊಬ್ಬರು ಸಂತಸದಿಂದ ಹೇಳಿದರು.

Share This
300x250 AD
300x250 AD
300x250 AD
Back to top