ಶಿರಸಿ: ತಾಲೂಕಿನ ಕುಳವೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಶಿರಸಿಯ ಶ್ರೀ ಮಾರಿಕಾಂಬಾ ತಂಡ ಪ್ರಥಮ ಬಹುಮಾನ ಗಳಿಸಿತು.
ಕುಳವೆ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ರಾತ್ರಿ ಶ್ರೀ ಲಕ್ಷ್ಮೀ ನರಸಿಂಹ ಗೆಳೆಯರ ಬಳಗ ಕುಳವೆಯಿಂದ ನಡೆದ ಪಂದ್ಯಾವಳಿಯಲ್ಲಿ ದ್ವಿತೀಯ ಬಹುಮಾನ ಕುಂಬಾರಕುಳಿ ತಂಡ, ತೃತೀಯ ಬರ್ಗಿ, ನಾಲ್ಕನೇ ಸ್ಥಾನ ಲಕ್ಷ್ಮೀ ನರಸಿಂಹ ಕುಳವೆ ತಂಡ ಪಡೆದುಕೊಂಡಿತುಮ
ಸತತ ಐದನೇ ವರ್ಷ ಹಮ್ಮಿಕೊಂಡ ಪಂದ್ಯಾಟವನ್ನು ಮೊದಲಿಗೆ ಕುಳವೆ ಗ್ರಾಪಂ ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ ಹಾಗೂ ಶಿರಸಿ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ಉದ್ಘಾಟಿಸಿದರು. ಮಾರಿಕಾಂಬಾ ಚಾನೆಲ್ ಮುಖ್ಯಸ್ಥ ನಾಗರಾಜ ಶೆಟ್ಟಿ, ಉಂಚಳ್ಳಿ ಗ್ರಾಪಂ ಸದಸ್ಯ ರವಿತೇಜ ರೆಡ್ಡಿ ಹಾಗೂ ಗ್ರಾಮಸ್ಥರು ಇದ್ದರು. ಪಂದ್ಯಾವಳಿ ವಿಜೇತ ಪ್ರಶಸ್ತಿಯನ್ನು ಗ್ರಾಮಸ್ಥರು ವಿತರಿಸಿದರು.