ಶಿರಸಿ : ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಹವ್ಯಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಮ್.ಸಿಸಿ ಸಂತೆಗುಳಿ ಪ್ರಥಮ ಬಹುಮಾನ ಗಳಿಸಿತು.
ಶನಿವಾರ ಹಾಗೂ ಭಾನುವಾರ ತುಂಬೆಮನೆ ಹವ್ಯಕ ಕಪ್ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆಗಿ ಯಂಗ್ಸ್ ಸ್ಟಾರ್ಸ ಸಾಗರ ಹೊರಹೊಮ್ಮಿತು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಸೇರಿದಂತೆ ಇನ್ನಿತರು ಭಾಗವಹಿಸಿದ್ದರು.