Slide
Slide
Slide
previous arrow
next arrow

ಬಿದ್ರಕಾನ ಪ್ರೌಢಶಾಲೆಯಲ್ಲಿ ಯೋಗ ತರಬೇತಿ ಶಿಬಿರ ಯಶಸ್ವಿ

300x250 AD

ಸಿದ್ದಾಪುರ:ತಾಲೂಕಿನ ಬಿದ್ರಕಾನಿನ ಎಂ.ಜಿ.ಸಿ.ಎಂ.ಪ್ರೌಢಶಾಲೆಯಲ್ಲಿ ನ.20 ರಿಂದ ನ 25 ರವರೆಗೆ ನಡೆದ ಯೋಗ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮವು ನ.25, ಶನಿವಾರದಂದು ನಡೆಯಿತು. ಒಂದು ವಾರದ ಯೋಗ ಶಿಬಿರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡು ಯೋಗ ಮತ್ತು ಪ್ರಾಣಾಯಾಮಗಳನ್ನುಅಭ್ಯಾಸ ಮಾಡಿದರು.

ಯೋಗ ಗುರುಗಳಾಗಿ ಪತಂಜಲಿ ಯೋಗ ಕೇಂದ್ರ ತಾಲೂಕಾ ಪ್ರಭಾರಿ ಮಂಜುನಾಥ ನಾಯ್ಕ, ಸಿದ್ದಾಪುರ ಆಗಮಿಸಿ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿ ತರಬೇತಿ ನೀಡಿದರು. ಸೂರ್ಯನಮಸ್ಕಾರ, ತಾಡಾಸನ, ಉತ್ತಾನಾಸನ, ತ್ರಿಕೋಣಾಸನ, ಪಾರ್ಶ್ವಕೋನಾಸನ, ವೃಕ್ಷಾಸನ, ಅರ್ಧಮತ್ಸ್ಯೇಂದ್ರಾಸನ, ಹಲಾಸನ, ವೀರಾಸನ, ಉಷ್ಟ್ರಾಸನ, ಪಶ್ಚಿಮೋತ್ತಾಸನ, ಸರ್ವಾಂಗಾಸನ, ಶೀರ್ಷಾಸನ ಮೊದಲಾದ ಆಸನಗಳನ್ನು ರೂಢಿಮಾಡಿಸಿದರು. ಜೊತೆಗೆ ಅನುಲೋಮ ವಿಲೋಮ, ಬಸ್ತಿಕಾ, ಕಪಾಲಭಾತಿ ಇತ್ಯಾದಿ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವ ಕ್ರಮಗಳನ್ನು ತಿಳಿಸಿದರು.

ಸಮಾರೋಪ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ ಮಂಜುನಾಥ ನಾಯ್ಕ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿ ಮತ್ತು ಶಿಸ್ತಿನಿಂದ ಯೋಗ ಕಲಿಕೆಯ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದನ್ನು ಶ್ಲಾಘಿಸಿದರು. ಉತ್ತಮ ಆರೋಗ್ಯಕರ ಜೀವನಕ್ಕಾಗಿ ನಮ್ಮ ದೈನಂದಿನ ದಿನಚರಿ ಮತ್ತು ಆಹಾರ ಕ್ರಮ ಹೇಗಿರಬೇಕೆಂದು ತಿಳಿಸಿದರು. ಪ್ರತಿಯೊಬ್ಬರು ಈಗ ಪಡೆದ ತರಬೇತಿಯನ್ನು ಪ್ರತಿನಿತ್ಯ ಅಭ್ಯಸಿಸಲು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಪ್ರೌಢಶಾಲೆಯ ಎಸ್.ಎಂ.ಡಿ.ಸಿ. ಅಧ್ಯಕ್ಷರಾದ ಎಸ್. ಎಲ್. ಹೆಗಡೆ ಸ್ವಾನುಭವಗಳನ್ನು ಹಂಚಿಕೊಂಡು, ಯೋಗ & ಪ್ರಾಣಾಯಾಮವು ತಮ್ಮ ಜೀವನದಲ್ಲಿ ಉಂಟುಮಾಡಿದ ಧನಾತ್ಮಕ ಅಂಶಗಳನ್ನು ತಿಳಿಸಿದರು. ಉತ್ತಮ ಆರೋಗ್ಯ, ಜೀವನಕ್ಕಾಗಿ ಯೋಗದ ಅವಶ್ಯಕತೆಯನ್ನು, ಯೋಗದಿಂದಾಗುವ ಲಾಭವನ್ನು ತಿಳಿಸಿದರು.

300x250 AD

ಮುಖ್ಯೋಪಾಧ್ಯಾಯರಾದ ಎಸ್.ಎಸ್. ಪಮ್ಮಾರ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಯೋಗದ ಮಹತ್ವವನ್ನು ಮತ್ತು ಯೋಗಕಲಿಕೆಯ ಅಗತ್ಯತೆಯನ್ನು ತಿಳಿಸಿದರು. ಈ ವೇಳೆ ಯೋಗ ಗುರುಗಳಾದ ಮಂಜುನಾಥ ನಾಯ್ಕ ಅವರನ್ನು ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಿಬಿರದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಸ್. ಎಸ್. ಪಮ್ಮಾರ ಸ್ವಾಗತಿಸಿದರು. ಶ್ರೀಮತಿ ವಿಜಯಲಕ್ಷ್ಮಿ ಶಿವಳ್ಳಿ ವಂದಿಸಿದರು.

Share This
300x250 AD
300x250 AD
300x250 AD
Back to top