Slide
Slide
Slide
previous arrow
next arrow

ಹೀಗಿರಲಿದೆ “ಮಲೆನಾಡು ಮೆಗಾ ಉತ್ಸವ” ಶಿರಸಿ 1.0

300x250 AD

‘ಪೆಸ್ಟಿವಲ್ ಆಫ್ ಇನ್ನೋವೇಷನ್ ಆ್ಯಂಡ್ ಎಂಟ್ರಪ್ರೀನಿಯರ್ಷಿಪ್’ ಉಪ ಶೀರ್ಷಿಕೆಯಡಿಯಲ್ಲಿ ಗೃಹೋದ್ಯಮ ಮತ್ತು ನವೋದ್ಯಮಕ್ಕೆ ಪೂರಕವಾಗಿ ಬೃಹತ್ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ‘ಓಜಸ್ ಹೆಲ್ತ್ ಬೂಸ್ಟರ್ ಹಾಗು ಶಿರಸಿ ರುಚಿ’ ಪ್ರಾಯೋಜಕತ್ವದಲ್ಲಿ ನ.30, ಗುರುವಾರದಿಂದ ಡಿ.3, ಭಾನುವಾರದ ವರೆಗೆ 4 ದಿನಗಳ ಕಾಲ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಿಕಾಸ ಆಶ್ರಮ ಬಯಲು ರಂಗ ಮಂದಿರದ ಆವಾರದಲ್ಲಿ ಬೃಹತ್ “ಮಲೆನಾಡು ಮೆಗಾ ಉತ್ಸವ” ನಡೆಯಲಿದೆ.


ಜಿಲ್ಲೆಯ ಗೃಹೋದ್ಯಮಿಗಳಿಗೆ ರಾಜ್ಯದ ಇತರೆ ನಡೆಯುವ ಕೃಷಿ ಮೇಳ, ಉದ್ಯಮೋತ್ಸವ ಸೇರಿದಂತೆ ಸಾವಿರಾರು ಜನ ಸೇರುವ ಮೇಳಗಳಲ್ಲಿ ಅಂಗಡಿ ಅಥವಾ ಸ್ಟಾಲ್ ಹಾಕಲು ಕನಿಷ್ಟವೆಂದರೂ ದಿನಕ್ಕೆ 5 ಸಾವಿರದಿಂದ 10 ಸಾವಿರದ ವರೆಗೆ ಶುಲ್ಕ ನೀಡಿ, ಬಹಳ ದೂರ ಪ್ರಯಾಣಿಸಿ ಭಾಗವಹಿಸಬೇಕಾಗುತ್ತದೆ. ಕಿರು ಪ್ರಮಾಣದಲ್ಲಿ ನಡೆಸುವ ಉದ್ಯಮಿಗಳಿಗೆ ದೂರದ ಊರಿನ ಗ್ರಾಹಕರೊಡನೆ ಸಂವಹನ, ವ್ಯವಹಾರ ಮಾಡುವುದು ಕಷ್ಟದ ವಿಷಯ. ಹೀಗಿರುವಾಗ ತಮ್ಮೂರಿನಲ್ಲಿಯೇ 4 ದಿನಗಳ ಕಾಲ ಉದ್ಯಮದ ಪ್ರದರ್ಶನ ಮತ್ತು ಮಾರಾಟಕ್ಕೆ ಸ್ಥಾನೀಯವಾಗಿ ಬೃಹತ್ ಅವಕಾಶ ದೊರೆತಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ. ಸ್ಥಳೀಯವಾಗಿ ಅದೂ ಸಹ ಅತೀ ಕಡಿಮೆ ದರದಲ್ಲಿ 4 ದಿನಗಳ ಕಾಲ ಸ್ಟಾಲ್ ಗಳನ್ನು ಹಾಕಲು ಅವಕಾಶ ದೊರೆಯುವುದು ತೀರಾ ಅಪರೂಪವಾಗಿದೆ.


‘ಮಲೆನಾಡು ಮೆಗಾ ಉತ್ಸವ’ಕ್ಕೆ ಸುಮಾರು 20,000 ಜನರ ನಿರೀಕ್ಷೆ:
ನಾಲ್ಕು ದಿನಗಳ ನಡೆಯಲಿರುವ ಈ ಮೆಗಾ ಉತ್ಸವಕ್ಕೆ ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕಿನ ಹಲವಾರು ಸಂಘ-ಸAಸ್ಥೆಗಳ ಪ್ರತಿನಿಧಿಗಳು, ನವೋದ್ಯಮಿಗಳು, ಗೃಹೋದ್ಯಮಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜೊತೆಗೆ ಸುತ್ತಲಿನ ಜಿಲ್ಲೆಗಳಾದ ಹಾವೇರಿ, ಶಿವಮೊಗ್ಗ ಭಾಗದ ಆಸಕ್ತ ಜನರೂ ಸಹ ಪಾಲ್ಹೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ. ಸ್ಥಳೀಯವಾಗಿ ತಯಾರಾದ ಗುಣಮಟ್ಟದ ಉತ್ಪನ್ನಗಳು ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚು ಪ್ರಯೋಜನಕಾರಿ ಎನ್ನುವ ಕಾರಣಕ್ಕೆ ಜಿಲ್ಲೆಯ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ. ಮತ್ತು ಈ ಮಲೆನಾಡು ಉತ್ಸವಕ್ಕೆ ಆಗಮಿಸುವ ಗ್ರಾಹಕ/ಜನರಿಗೆ ಉಚಿತ ಪ್ರವೇಶವಿರಲಿದೆ.


ಮೆಗಾ’ ಉತ್ಸವಕ್ಕೆ ಸಾಕ್ಷಿಯಾಗಲಿದೆ 100 ಸ್ಟಾಲ್‌ಗಳು:
ಶಿರಸಿ ನಗರದಲ್ಲಿ ನಡೆಯಲಿರುವ ಈ ಮೆಗಾ ಉತ್ಸವಕ್ಕೆ 100 ಸ್ಟಾಲ್ ಗಳನ್ನು ಮೀಸಲಿಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಸಹ ಅಂಗಡಿಕಾರರು, ಉದ್ಯಮಿಗಳು, ಉದ್ಯಮಾಸಕ್ತರು ಸ್ಟಾಲ್ ಹಾಕುವ ಮೂಲಕ ತಮ್ಮ ಉದ್ಯಮ, ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲು ಉತ್ಸುಕರಾಗಿದ್ದಾರೆ. ಜಿಲ್ಲೆಯ ವಿವಿಧ ತಾಲೂಕಿನ ಗೃಹೋದ್ಯಮಿಗಳೂ ಸಹ ಈ ಮೆಗಾ ಉತ್ಸವದಲ್ಲಿ ಭಾಗಿಯಾಗಲು ಮುಂಚೂಣಿಯಲ್ಲಿದ್ದಾರೆ. ಖಾದಿ ಬಟ್ಟೆ, ದೇಶೀಯ ವಸ್ತುಗಳು, ಪ್ಯಾನ್ಸಿ-ಅಲಂಕಾರಿಕ ವಸ್ತುಗಳು, ವಿವಿಧ ರೀತಿಯ ಮಸಾಲ ಪೌಡರ್ಗಳು, ಅನೇಕ ಥರಹದ ಮಿಲೆಟ್ಸ್, ರಾಗಿ ಬೋಟಿಗಳು, ಅಡಕೆಯಿಂದ ತಯಾರಾದ ವಿವಿಧ ಉತ್ಪನ್ನಗಳು, ಕೈಗಳಿಂದ ತಯಾರಿಸಿ ಸೋಪ್, ಮಂಕಿ ಗನ್ ಸ್ಟಾಲ್ ಒಳಗೊಂಡAತೆ ಜನರ ಹಸಿವು/ದಾಹವನ್ನು ನಿವಾರಿಸಲು ಶುಚಿ-ರುಚಿಯಾದ ವಿವಿಧ ಥರಹದ ತಿಂಡಿ ತಿನಿಸುಗಳು ಮತ್ತು ಆಗಮಿಸಿದ ಜನರನ್ನು ಆಕರ್ಷಿಸಲು ಮತ್ತು ರಂಜಿಸಲು ವಿವಿಧ ಥರಹದ ಆಟಗಳನ್ನು ಆಡಲು ಅವಕಾಶವಿದೆ.

300x250 AD


ಉದ್ಘಾಟನೆಗೆ ಮಾಜಿ ವಿಧಾನಸಭಾಧ್ಯಕ್ಷ ಕಾಗೇರಿ ಸಾಥ್; ಸಮಾರೋಪಕ್ಕೆ ಶಾಸಕ ಭೀಮಣ್ಣನ ಬಲ
‘ಮಲೆನಾಡು ಮೆಗಾ ಉತ್ಸವ’ದ ಉದ್ಘಾಟನೆಯನ್ನು ನ.30 ರಂದು ಕ್ಷೇತ್ರದ ಮಾಜಿ ಶಾಸಕ, ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಲಿದ್ದಾರೆ. 4 ದಿನಗಳ ಕಾಲ ನಡೆಯಲಿರುವ ಈ ಉತ್ಸವದ ಸಮಾರೋಪ ಸಮಾರಂಭದಲ್ಲಿ ಶಿರಸಿ – ಸಿದ್ದಾಪುರ ಕ್ಷೇತ್ರದ ಶಾಸಕ, ಉದ್ಯಮಿಯಾಗಿರುವ ಭೀಮಣ್ಣ ನಾಯ್ಕ ಉಪಸ್ಥಿತರಿರಲಿದ್ದಾರೆ. ನಾಲ್ಕು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಜಿಲ್ಲೆಯ ಅನೇಗ ಉದ್ಯಮಿಗಳು, ರಾಜಕೀಯ ನಾಯಕರು, ಸಂಘ-ಸAಸ್ಥೆಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.


ಸ್ಟಾಲ್‌ಗಳಿಗಾಗಿ ಇಲ್ಲಿದೆ ಸಂಪರ್ಕ:
‘ಮಲೆನಾಡು ಮೆಗಾ ಉತ್ಸವ’ದಲ್ಲಿ ಭಾಗಿಯಾಗುವ ಅಥವಾ ಸ್ಟಾಲ್ ಹಾಕುವ ಉದ್ಯಮಿಗಳಿಗೆ ಊಟ, ಉಪಹಾರ, ವಸತಿ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಅವಶ್ಯಕತೆಗಳನ್ನು ಆಯೋಜಕರು ವ್ಯವಸ್ಥಿತ ರೀತಿಯಲ್ಲಿ ಮಾಡಲು ಎಲ್ಲ ತಯಾರಿ ನಡೆಸಿದ್ದು, ಆ ಮೂಲಕ ಸ್ಟಾಲ್ ಹಾಕುವ ಅಂಗಡಿಕಾರರಿಗೆ / ಉದ್ಯಮಿಗಳ ಹಿತಕ್ಕಾಗಿ ಸರ್ವ ರೀತಿಯ ಯೋಜನೆ ರೂಪಿಸಲಾಗಿದೆ. ಸ್ಟಾಲ್ ಬುಕಿಂಗ್ ಅಥವಾ ಇನ್ನಿತರ ಮಾಹಿತಿಗಳಿಗಾಗಿ
Tel;+919916401443 / Tel:+918884144319 ಸಂಪರ್ಕಿಸಬಹುದಾಗಿದೆ.

Share This
300x250 AD
300x250 AD
300x250 AD
Back to top