Slide
Slide
Slide
previous arrow
next arrow

ಕಾಡಾನೆ ದಾಳಿ: ತೋಟ,ಗದ್ದೆಗಳಿಗೆ ಹಾನಿ

300x250 AD

ಮುಂಡಗೋಡ: ತಾಲೂಕಿನ ಕಾತೂರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳು ಭತ್ತದ ಗದ್ದೆ, ಗೋವಿನ ಜೋಳದ ಗದ್ದೆಗಳು,ಕಬ್ಬಿನ ಗದ್ದೆ ಸೇರಿದಂತೆ ಅಡಕೆ ತೋಟಗಳಿಗೆ ನುಗ್ಗಿ ತಿಂದು ತಿಳಿದು ಹಾನಿ ಪಡಿಸುತ್ತಿದ್ದು ಇದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗುತ್ತಿದೆ.
ಮಳಗಿ ಭಾಗದ ಗ್ರಾಮಸ್ಥರು ಪ್ರತಿದಿನ ನೂರಕ್ಕೂ ಅಧಿಕ ಯುವಕರು ಪ್ರತಿದಿನ ಆನೆಗಳನ್ನು ಓಡಿಸುವಲ್ಲಿ ನಿರತರಾಗಿದ್ದಾರೆ.

ಕಾತೂರ ಭಾಗಕ್ಕೆ ಆಗಮಿಸಿರುವ ಕಾಡಾನೆಗಳ ಹಿಂಡು ಪ್ರತಿನಿತ್ಯ ಸಂಜೆಯಾಗುತ್ತಿದ್ದಂತೆ ಗದ್ದೆಗಳಿಗೆ ದಾಳಿ ನಡೆಸುತ್ತಿದೆ. ಕಳೆದ 5-6 ದಿನಗಳಿಂದ ಮಳಗಿ ಗ್ರಾಮಗಳ ಸನಿಹದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸುತ್ತಿವೆ. ಭತ್ತದ ಬೆಳೆಯನ್ನು ಹಾನಿ ಪಡಿಸಿ ತಿಂದು ತುಳಿದು ಹಾಕುವ ಮೂಲಕ ಹಲವು ರೈತರ ಭತ್ತದ ಬೆಳೆ ನಾಶ ಪಡಿಸಿವೆ. ಅಡಕೆ ತೋಟ ಹಾಗೂ ಗೋವಿನಜೋಳದ ಬೆಳೆಗಳನ್ನು ನಾಶ ಪಡಿಸಿದ್ದು ಅಡಕೆ ತೋಟಗಳಿಗೆ ನುಗ್ಗಿರುವ ಕಾಡಾನೆಗಳು ಕಷ್ಟ ಪಟ್ಟು ಬೆಳೆಸಿದ ಅಡಕೆ ಬೆಳೆ ಒಂದೆ ರಾತ್ರಿಗೆ ನೆಲಕ್ಕುರುಳಿರುವುದು ರೈತರಿಗೆ ದಿಕ್ಕು ತೋಚದಂತಾಗಿದೆ.

300x250 AD

ಸಿಗದ ಪಟಾಕಿ: ಕಾಡಾನೆಗಳನ್ನು ಓಡಿಸಲು ಸಾಮಾನ್ಯವಾಗಿ ಪಟಾಕಿ ಬಳಸಲಾಗುತ್ತದೆ ಪಟಾಕಿ ಸಿಡಿಸಿ ಆನೆಗಳನ್ನು ಹೆದರಿಸಿ ಓಡಿಸಲಾಗುತ್ತಿತ್ತು ಆದರೆ ಸರ್ಕಾರ ಇತ್ತೀಚೆಗೆ ಪಟಾಕಿಗಳ ಮಾರಾಟವನ್ನು ನಿಷೇಧಿಸಿದ ಹಿನ್ನಲೆಯಲ್ಲಿ ಅಂಗಡಿಗಳಲ್ಲಿ ಪಟಾಕಿ ಸಿಗುತ್ತಿಲ್ಲ ಇದರಿಂದ ಕಾಡಾನೆಗಳನ್ನು ಓಡಿಸುವುದು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ.
100 ಕ್ಕೂ ಹೆಚ್ಚು ಯುವಕರ ಆನೆ ಓಡಿಸಲು ಪ್ರತಿ ದಿನ ಕೆಲಸವಾಗಿದೆ:
ಮಳಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಆನೆಗಳ ಎರಡು ಮೂರು ಗುಂಪುಗಳಾಗಿ ಮಾರ್ಪಟ್ಟಿದ್ದು, ಪ್ರತಿ ದಿನ ಗದ್ದೆಗಳತ್ತ ದಾಳಿ ಮಾಡುತ್ತಿವೆ. ಪ್ರತಿದಿನ ಯುವಕರು ಆನೆಗಳನ್ನು ಓಡಿಸಲು ಮುಂದಾಗುತ್ತಿದ್ದಾರೆ. ರಾತ್ರಿ 11-12ಗಂಟೆಯವರೆಗೆ ಆನೆಗಳನ್ನು ಓಡಿಸುವುದೆ ಕೆಲಸವಾಗಿದೆ. ಕಳೆದ ಐದಾರು ದಿನಗಳಿಂದ ನಿರಂತರವಾಗಿ ದಾಳಿ ಮಾಡುತ್ತಿವೆ. ಶನಿವಾರ ಬೆಳಗಿನ ಜಾವದವರೆಗು ಆನೆಗಳ ತೊಂದರೆ ಮಾಡಿವೆ. ಅರಣ್ಯ ಸಿಬ್ಬಂದಿ ಒಬ್ಬರೆ ನಮ್ಮ ಜೋತೆಗಿದ್ದರು ಆದರೆ ಕೃಷ್ಣ ಭರತನಳ್ಳಿ, ಬಸಮ್ಮ ಮಳಗಿ, ಪ್ರಮೋದ ಡವಳೆ, ಹನಮಂತ ಸೇರಿದಂತೆ ಹಲವು ರೈತರ ಬೆಳೆಗಳು ಹಾನಿ ಮಾಡಿವೆ ಎಂದು ಮಳಗಿ ಗ್ರಾಮದ ರೈತ ಹನುಮಂತ ಇಡಗೋಡ ಹೇಳಿದರು.

Share This
300x250 AD
300x250 AD
300x250 AD
Back to top