ಕಾರವಾರ: ಗೋವಾ ವಿಧಾನಸಭಾಧ್ಯಕ್ಷ ರಮೇಶ ತಾವಡಕರ ಬುಧವಾರ ಕಾರವಾರದಲ್ಲಿ ಆಯೋಜಿಸಿದ್ದ ಲೋಕೋತ್ಸವ ಕಾರ್ಯಕ್ರಮದಲ್ಲಿ ಅಂಕೋಲಾ ಮತ್ತು ಕಾರವಾರದ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು. ಅಂಕೋಲಾದ ಅನಾಥ ಶವಗಳಿಗೆ ಮುಕ್ತಿದಾತರಾದ ಉದಯ ರಾಮಚಂದ್ರ ನಾಯ್ಕ, ಮುಖ್ಯಮಂತ್ರಿ ಪದಕ ವಿಜೇತ ಪೌರಕಾರ್ಮಿಕ ಹೋಮಗಾರ್ಡ್ ವಿನೋದ ಹುಲಸ್ವಾರ, ಯಕ್ಷಗಾನದ ಕಲಾವಿದ ನಾರಾಯಣ ನಾಯ್ಕ ಭಾವಿಕೇರಿ, ಕಲಾವಿದ ಸಂಗೀತ ನಿರ್ದೇಶಕ ನಾಗರಾಜ ಜಾಂಬಳೇಕರ, ಯೋಗ ಗುರು ವಿನಾಯಕ ಗುಡಿಗಾರ, ಹಿರಿಯ ಸಾಹಿತಿ ಸಾತು ಗೌಡ ಬಡಗೇರಿ, ಸಾಮಾಜಿಕ ಕಾರ್ಯಕರ್ತ ನಾಗರಾಜ ಐಗಳ, ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ, ಯೋಗಪಟು ಭಾಸ್ಕರ ಕಾಮ ತಾಂಡೇಲ ಭಾವಿಕೇರಿ, 108 ಅಂಬ್ಯುಲನ್ಸ್ ಚಾಲಕ ಶಿವಾನಂದ ಮಾಣಿ ನಾಯಕ ಹಿಲ್ಲೂರಬೈಲ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಸ್ಪೀಕರ್ ರಮೇಶ ತಾವಡಕರ ತಮ್ಮದೇ ಆದ ಟ್ರಸ್ಟ ಮೂಲಕ ಕಳೆದ 22 ವರ್ಷಗಳಿಂದ ಲೋಕೋತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದ್ದಾರೆ. ಜನರ ಬಡತನ ಮತ್ತು ಕಷ್ಟಗಳನ್ನು ನಿವಾರಿಸಲು ಹಲವು ರೀತಿಯ ಸಹಾಯ ಸಹಕಾರಗಳನ್ನು ನೀಡುತ್ತಿದ್ದು ಸಾಮಾಜಿಕ ಸೇವೆ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಅವರ ಕಾರ್ಯಕ್ಕೆ ಉತ್ತೇಜನ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ, ಅಂಕೋಲಾ ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.