ಕದಂಬ ಮಾರ್ಕೆಟಿಂಗ್ ಶಿರಸಿ
ಹಸಿ ಅಡಿಕೆ ಟೆಂಡರ್
ದಿನಾಂಕ 21-11-2023 ಮಂಗಳವಾರದಿಂದ ಪ್ರತಿ ದಿನ ಹಸಿ ಅಡಿಕೆ ಟೆಂಡರ್ ಆರಂಭವಾಗುತ್ತಿದ್ದು ರೈತರು ಇದರ ಪ್ರಯೋಜನ ಪಡೆಯಲು ಕೋರಿದೆ.
➡️ರೈತರು ಅಂದಿನ ದಿನದ ಟೆಂಡರ್ ಗೆ ಮಧ್ಯಾಹ್ನ12.00 ಗಂಟೆಯ ಒಳಗೆ ತರಬೇಕು.
➡️ ಭಾನುವಾರ ಹಾಗೂ ರಜಾದಿನ ಹೊರತುಪಡಿಸಿ ವಾರದ ಎಲ್ಲಾ ದಿನ ಹಸಿ ಅಡಿಕೆ ಇಳಿಸಿಕೊಳ್ಳುವ ವ್ಯವಸ್ಥೆ ಇರುತ್ತದೆ.
➡️ರೈತರು ತಮ್ಮ ಪ್ರಾಥಮಿಕ ಸಹಕಾರ ಸಂಘಗಳ ಖಾತೆಯ ಮೂಲಕವೂ ವ್ಯವಹರಿಸಬಹುದು.
➡️ಟೆಂಡರಿನಲ್ಲಿ ಹಸಿ ಅಡಿಕೆ ಖರೀದಿಸಲು ಹೆಚ್ಚಿನ ಸಂಖ್ಯೆಯ ವ್ಯಾಪಾರಸ್ಥರು ಬರುವ ಕಾರಣ ರೈತರಿಗೆ ಸ್ಪರ್ಧಾತ್ಮಕ ದರ ಲಭಿಸಲಿದೆ.
➡️ನಿಖರ ತೂಕದೊಂದಿಗೆ ಕೊನೆಅಡಿಕೆಗೆ ಜಿಂಗಿನ ತೂಕ ತೆಗೆಯಲಾಗುವುದಿಲ್ಲ.
ರೈತರು ಗಮನಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ: ☎️ Tel:+9108384233163 / Tel:+919741161107