Slide
Slide
Slide
previous arrow
next arrow

ಕಸ್ತೂರಿ ರಂಗನ್ ವರದಿಯು ನೈಜ ಚಿತ್ರಣಕ್ಕೆ ವ್ಯತಿರಿಕ್ತ: ರವೀಂದ್ರ ನಾಯ್ಕ್

300x250 AD

ಯಲ್ಲಾಪುರ: ಕಸ್ತೂರಿ ರಂಗನ್ ವರದಿಯ ಕರಡು ಪ್ರತಿಯಲ್ಲಿ ಗುರುತಿಸಿದ ಅತೀ ಸೂಕ್ಷ್ಮ ಪರಿಸರ ಪ್ರದೇಶವು ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಆಧಾರದ ಮೇಲೆ ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿರುವುದರಿಂದ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಅವರು ರವಿವಾರ ಪಟ್ಟಣದ ವೆಂಕಟ್ರಮಣ ದೇವಸ್ಥಾನದ ಸಭಾಮಂಟಪದಲ್ಲಿ ಕಸ್ತೂರಿ ರಂಗನ್ ವಿರೋಧ ಜಾಥದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಗ್ರಾಮದ ಶೇ.20 ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶವನ್ನು ಜೀವವೈವಿಧ್ಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ಸೇರಿಸಲ್ಪಟ್ಟಿದೆ. ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಅಥವಾ ಬೌದ್ಧಿಕ ಸರ್ವೇಮಾಡಿ ವಿಷಯ ಸಂಗ್ರಹ ಮಾಡಿರುವುದಿಲ್ಲ. ಪಶ್ಚಿಮ ಘಟ್ಟ ಪ್ರದೇಶವನ್ನ ರಕ್ಷಣೆ ಹಾಗೂ ಸಂರಕ್ಷಿಸಲು ಅಸ್ತಿತ್ವದಲ್ಲಿರುವ ಕಾನೂನು, ನೀತಿ- ನಿಯಮ ಇರುವುದರಿಂದ ಹೊಸಮಾನದಂಡದ ಅವಶ್ಯಕತೆ ಇರುವುದಿಲ್ಲ ಎಂದರು.

300x250 AD

ತಾಲೂಕ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ,ಪ್ರಮುಖರಾದ ಮಹಾಬಲೇಶ್ವರ ಭಟ್ಟ ಬಾಸಲ್, ನಾಗರಾಜ ಮರಾಠಿ ಆನಗೋಡ, ನೂರಹಮ್ಮದ್ ಮದನೂರು, ಸುಬ್ರಾಯ ಭಟ್,ನರಸಿಂಹ ನಾಯ್ಕ ಕುಂದರಗಿ, ಸೀತಾರಾಮ ನಾಯ್ಕ ಕುಂದರಗಿ, ಅನಂತ ಗೌಡ ಮಾವಿನಮನೆ, ರಾಜಾರಾಮ ಕಿರವತ್ತಿ, ರಾಘವೇಂದ್ರ ಕುಣಬಿ ಮಲವಳ್ಳಿ, ಭಾಸ್ಕರ ಗೌಡ ಹಿತ್ಲಳ್ಳಿ, ಶೇಖರ್ ನಾಯ್ಕ ಹಿತ್ಲಳ್ಳಿ, ರಾಘವೇಂದ್ರ ನಾಯ್ಕ ಗುಳ್ಳಾಪುರ ಇದ್ದರು.

Share This
300x250 AD
300x250 AD
300x250 AD
Back to top