Slide
Slide
Slide
previous arrow
next arrow

ಮಾನ ಸನ್ಮಾನಗಳು ಹರಸಿ ಬಂದರೆ ಚಂದ-ಆನಂದ: ಡಾ.ಜಿ.ಜಿ. ಸಭಾಹಿತ್

300x250 AD

ಹೊನ್ನಾವರ : ಮಾನ ಸನ್ಮಾನಗಳು ಬಯಸಿ ಬಂದರೆ ಚಂದವಲ್ಲ, ಹರಸಿ ಬಂದರೆ ಚಂದ ಆನಂದ ಎಂದು ಡಾ.ಜಿ.ಜಿ. ಸಭಾಹಿತ್ ನುಡಿದರು.

ಅವರು ಕೆರೆಮನೆ ಸನ್ಮಿತ್ರ ಬಳಗದವರು ಎಂ.ಎಸ್. ಹೆಗಡೆ ಗುಣವಂತೆಯವರಿಗೆ “ಮನೆಯಂಗಳದಿ ಸನ್ಮಾನ”ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕರ್ನಾಟಕ ವಿಕಾಸ ಬ್ಯಾಂಕಿನ ನಿವೃತ್ತ ಹಿರಿಯ ಅಧಿಕಾರಿ ಎನ್.ಆರ್.ಯಾಜಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪಠ್ಯ ಪುಸ್ತಕವನ್ನು ರಚಿಸುವುದು ಸುಲಭದ ಕಾರ್ಯವಲ್ಲ ಅಂತಹುದರಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ರಚಿಸಿದ ಎಂ.ಎಸ್. ಹೆಗಡೆಯವರು ಪ್ರಶಂಸನಾರ್ಹರು ಎಂದು ನುಡಿದರು.

300x250 AD

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಎಸ್. ಹೆಗಡೆ”ಮನೆಯಂಗಳದಲ್ಲಿ ಸನ್ಮಾನ” ಜೀವನದಲ್ಲಿಯೇ ಮರೆಯಲಾರದ ಸುಮಧುರ ಕ್ಷಣ. ನಮ್ಮ ಮನೆಗೆ ಬಂದು ಸನ್ಮಾನಿಸಿದ ಕೆರೆಮನೆ ಸನ್ಮಿತ್ರ ಬಳಗದವರು ಅಭಿನಂದನಾರ್ಹರು ಎಂದರು.

ಅತಿಥಿಗಳಾದ ಶ್ರೀಧರ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶಿವಾನಂದ ನಾಯ್ಕ ನೀಲೆಕೇರಿಯವರು ಶುಭ ಹಾರೈಸಿದರು. ಎಲ್.ಎಂ.ಹೆಗಡೆ ಕೆರೆಮನೆಯವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು.ಡಾ.ಶ್ರೀಪಾದ ಹೆಗಡೆ, ಉಮೇಶ್ ಹೆಗಡೆ ಕವಲಕ್ಕಿ, ಜಿ.ಎಸ್. ಗೌಡ ಹೆಬ್ಬಾರಹಿತ್ಲ,ವಿ.ಜಿ. ಹೆಗಡೆ ಗುಡ್ಗೆ, ಎಂ.ಎಚ್. ನಾಯ್ಕ, ಎಸ್.ಎಸ್. ಹೆಗಡೆ ಮೊದಲಾದವರು ಮಾತನಾಡಿದರು.ಎಂ.ಆರ್. ಹೆಗಡೆ,ರಜನಿ ಹೆಗಡೆ, ಕೆ.ಜಿ.ಹೆಗಡೆ ಅಣ್ಣುಹಿತ್ತಲ್, ಎನ್.ಜಿ. ಭಟ್, ಮಹೇಶ್ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top