ಶಿರಸಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಕಳೆದ ಸೆಪ್ಟೆಂಬರ್ ನಲ್ಲಿ ನಡೆಸಿದ ಬಿಎಸ್ಸಿ ಅಂತಿಮ ವರ್ಷದ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ 182 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 167 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 91.76% ಉತ್ತಮ ಫಲಿತಾಂಶ ನೀಡಿದ್ದಾರೆ. ಆರೂ ಸೆಮಿಸ್ಟರ್ ಫಲಿತಾಂಶ ಸೇರಿದಂತೆ ಮಹಾವಿದ್ಯಾಲಯಕ್ಕೆ ಅಪರ್ಣಾ ಹೆಗಡೆ ಮತ್ತು ಅಪೂರ್ವಾ ಹೆಗಡೆ 9.23 ಜಿಪಿಎ ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದರೆ, ಸುಪ್ರಿತಾ ಜೋಗಳೇಕರ್ 9.12 ಜಿಪಿಎ ಅಂಕ ಗಳಿಸಿ ದ್ವಿತೀಯ ಹಾಗೂ ಗಾಯತ್ರಿ ಸಮಂತ್ 9.15 ಜಿಪಿಎ ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ಬಿಎಸ್ಸಿ ಅಂತಿಮ ವರ್ಷಕ್ಕೆ ತನ್ವಿ ಶಂಭು ನಾಯ್ಕ್ 96.36% ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರೆ, ವಿಠ್ಠಲ ಪಾಟೀಲ್ ಹಾಗೂ ಸನೋಬಾರ್ ಅಬ್ದುಲ್ 93.81% ದ್ವಿತೀಯ ಹಾಗೂ ಸುಪ್ರಿತಾ ಜೊಗ್ಳೇಕರ್ 93.45% ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಎಂಇಎಸ್ ಅಧ್ಯಕ್ಷರಾದ ಜಿ.ಎಂ. ಹೆಗಡೆ ಮುಳಖಂಡ ,ಉಪಸಮಿತಿ ಅಧ್ಯಕ್ಷ ಎಸ್.ಕೆ. ಭಾಗವತ್, ಪ್ರಾಚಾರ್ಯ ಡಾ.ಟಿ.ಎಸ್.ಹಳೆಮನೆ, ಸದಸ್ಯರು, ಪದಾಧಿಕಾರಿಗಳು, ಬೋಧಕ- ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.