ಹೊನ್ನಾವರ: ತಾಲೂಕಿನ ಅರೇಅಂಗಡಿ ಸರ್ಕಲ್ ಸಮೀಪ ನಡೆದ ದೈವ ನಿಂದನೆ ಕೃತ್ಯ ಖಂಡಿಸಿ ನ.9 ರಂದು ತಹಶೀಲ್ದಾರ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಹಿಂದು ಸಂಘದ ಸಂಚಾಲಕರಾದ ವಿಶ್ವನಾಥ ನಾಯಕ ಹೇಳಿದರು.
ಅರೇಅಂಗಡಿ ಸರ್ಕಲ್ ಸಮೀಪ ಹಿಂದು ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಹೊನ್ನಾವರ ಶಾಂತಿಗೆ ಹೆಸರಾದ ತಾಲೂಕಾಗಿದ್ದು, ಧರ್ಮದ ವಿಷಯದಲ್ಲಿ ಎಂದಿಗು ಗಲಾಟೆ ಆಗಿಲ್ಲ. ಅದರಲ್ಲೂ ಅರೇಅಂಗಡಿ ಭಾಗದಲ್ಲಿ ಉದ್ದೇಶಪೂರ್ವಕವಾಗಿ ಕೋಮು ಸಂಘರ್ಷ ನಡೆಸಿ ಸೌಹಾರ್ದತೆ ಕೆಡಿಸಿ, ಷಡ್ಯಂತ್ರ ಮಾಡುವ ಮೂಲಕ ಶಾಂತಿ ಕದಡುವ ಕಾರ್ಯ ನಡೆಯುತ್ತಿದೆ.
ಕೈಸ್ತ ಧರ್ಮಕ್ಕೆ ಮತಾಂತರವಾದ ವ್ಯಕ್ತಿಯೊರ್ವ ಹಿಂದೂಗಳನ್ನು ಪ್ರಚೋದಿಸಲು ಕುಡಿತದ ಅಮಲಿನಲ್ಲಿ ದೈವ ನಿಂದನೆ ಮಾಡುತ್ತಿದ್ದನು. ಹೀಗೆ ಮುಂದುವರೆದು ಅರೇಅಂಗಡಿ ಸಮೀಪದ ಕರಿಕಾನಮ್ಮ ದೇವಿಯ ಸ್ವಾಗತ ಕಮಾನಿನ ಬಳಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದನ್ನು ಪ್ರಶ್ನಿಸಿದ ವ್ಯಕ್ತಿಗೆ ಹಲ್ಲೆಮಾಡಿ ನಿಂದನೆ ನಡೆಸಿ, ಆ ವ್ಯಕ್ತಿಯ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾನೆ. ತಪ್ಪು ಮಾಡಿದವನು ಆರಾಂ ಆಗಿ ಓಡಾಟ ಮಾಡುತ್ತಿದ್ದು, ಇದನ್ನು ಪ್ರಶ್ನೆ ಮಾಡಿದ್ದವನ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆ ಮತಾಂತರವಾದ ದಲಿತ ಸಮುದಾಯದಿಂದ ಕೈಸ್ತ ಸಮುದಾಯಕ್ಕೆ ಮತಾಂತರವಾಗಿದ್ದಾರೆ. ಆದರೂ ದಲಿತ ಸಮುದಾಯದ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಂಭೀರವಾಗಿ ಪ್ರಕರಣ ಮನ್ನಿಸಿ ಯಾವುದೆ ಶಾಂತಿಗೂ ಭಂಗವಾಗದಂತೆ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು.
ಗುರುವಾರ ಮುಂಜಾನೆ 11 ಗಂಟೆಗೆ ಶರಾವತಿ ಸರ್ಕಲ್ ಮೂಲಕ ಮೆರವಣೆಗೆ ಮೂಲಕ ಸಾಗಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು. ಪ್ರವೀಣ ನಾಯ್ಕ ಮೇಲೆ ದಾಖಲಾದ ಪ್ರಕರಣವನ್ನು ಶೀಘ್ರವಾಗಿ ಬಗೆಹರಿದು ನ್ಯಾಯ ದೊರಕಿಸಿ ಕೊಡಬೇಕು ಎನ್ನುವ ಹಕ್ಕೊತ್ತಾಯದ ಮನವಿ ಸಲ್ಲಿಸುವ ಸಂದರ್ಭದಲ್ಲಿ ಹಿಂದು ಕಾರ್ಯಕರ್ತರು, ಕರಿಕಾನಮ್ಮ ದೇವಾಲಯದ ಭಕ್ತ ವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿಂದು ಸಂಘಟನೆಯ ಪ್ರಮುಖರಾದ ವಿಜು ಕಾಮತ್, ರಾಮಚಂದ್ರ ಕಾಮತ್, ಸಂಜು ಶೇಟ್, ಮುರುಳಿದರ ಗಾಯತೊಂಡೆ, ಹರಿಶ್ಚಂದ್ರ ನಾಯ್ಕ, ವಿವೇಕ ನಾಯ್ಕ, ವಿರೇಂದ್ರ ಮೇಸ್ತ, ರಾಹುಲ್ ಮೇಸ್ತ, ಮಣಿಕಂಟ ಶೆಟ್ಟಿ, ಮಹೇಶ ನಾಯ್ಕ ಅರೇಅಂಗಡಿ ಭಾಗದ ಕಾರ್ಯಕರ್ತರು ಹಾಜರಿದ್ದರು.