ಜೊಯಿಡಾ: ತಾಲೂಕಿನ ನಂದಿಗದ್ದೆ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅವುರ್ಲಿಯಲ್ಲಿ ವಿದ್ಯಾ ದೇವತೆಯಾದ ಸರಸ್ವತಿಯನ್ನು ಶುಕ್ರವಾರ ಪೂಜಿಸಲಾಯಿತು.
ವೈದಿಕರಾದ ಶ್ರೀಕೃಷ್ಣ ಹರಿಹರ ಭಟ್ಟ ಪೂಜಾ ಕಾರ್ಯಕ್ರಮ ನಿರ್ವಹಿಸಿದರು. ಮಕ್ಕಳ ಭಜನಾ ಕಾರ್ಯಕ್ರಮ ನಡೆಯಿತು. ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಮಕ್ಕಳಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಜು ವೇಳಿಪ, ಇಡಿಸಿ ಅಧ್ಯಕ್ಷ ರಾಘವೇಂದ್ರ ನಾಯಕ, ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್, ಶಾಲಾ ಮುಖ್ಯ ಶಿಕ್ಷಕರಾದ ದುಷ್ಯಂತ, ಅತಿಥಿ ಶಿಕ್ಷಕರುಗಳಾದ ರತ್ನಾಕರ ತೆಲೋಲಿಕರ, ರೂಪಾ ದೇಸಾಯಿ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪಾಲಕರು- ಪೋಷಕರು, ಮಾತೆಯರು ಉಪಸ್ಥಿತರಿದ್ದರು.