Slide
Slide
Slide
previous arrow
next arrow

ಸಾಂಸ್ಕೃತಿಕ, ಸಾಹಿತ್ಯಿಕ ಪರಿಸರದಿಂದಾಗಿ ಯಲ್ಲಾಪುರ ಶ್ರೀಮಂತ: ನಾಗರಾಜ ನಾಯಕ

300x250 AD

ಯಲ್ಲಾಪುರ: ಪ್ರಮೋದ ಹೆಗಡೆ ನಮಗೆಲ್ಲರಿಗೂ ರೋಲ್ ಮಾಡೆಲ್ ಆಗಿದ್ದಾರೆ. ಸಾಂಸ್ಕೃತಿಕ, ಸಾಹಿತ್ತಿಕ, ಪರಿಸರದಿಂದ ಯಲ್ಲಾಪುರ ಶ್ರೀಮಂತವಾಗಿದೆ. ಸಮಾಜ ಸೇವೆ ಮಾಡಲು ಯಾವುದೇ ಪದವಿ ಅಥವಾ ಶಿಕ್ಷಣದ ಅಗತ್ಯತೆ ಇಲ್ಲ. ಅಂತಹ ಎಲೆ ಮರೆಯ ಸಾಧಕರಿಗೆ ಸನ್ಮಾನ ಮಾಡುವುದು ಉತ್ತಮ ಕೆಲಸ ಎಂದು ಪಹರೆ ವೇದಿಕೆಯ ಮುಖ್ಯಸ್ಥ ನಾಗರಾಜ ನಾಯಕ ಹೇಳಿದರು.

ಅವರು ಪಟ್ಟಣದ ಗಾಂಧೀ ಕುಟೀರದಲ್ಲಿ ನ.1ರಿಂದ ನಡೆಯುತ್ತಿರುವ 37ನೇ ಸಂಕಲ್ಪ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಕಡಿಮೆ ಭೂಮಿಯಲ್ಲಿ ಯಾವುದೇ ಸಾಪ್ಟವೇರ್ ಇಂಜಿನಿಯರ್ ಗೆ ಕಡಿಮೆ ಇಲ್ಲದಂತೆ ದುಡಿಯುತ್ತಿರುವ ಕೃಷಿ ಮಹಳೆ ಆಶಾ ನಾಯಕ ಅವರನ್ನು ಸನ್ಮಾನಿಸುತ್ತಿರುವುದು ಇನ್ನಿತರರಿಗೆ ಪ್ರೇರಣೆಯಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಸಂಕಲ್ಪ ಉತ್ಸವ ಶತಕ ಉತ್ಸವ ದಾಟುತ್ತದೆ ಎಂದು ಭವಿಷ್ಯ ನುಡಿದರು.

ಅಭಿವೃದ್ಧಿ ಅಂದರೆ ರಸ್ತೆ, ಕಾಲುವೆಗಳನ್ನು ಮಾಡುವುದಲ್ಲ. ವಿದ್ಯೆ ಹಾಗೂ ಜ್ಞಾನ ವೃದ್ಧಿಸುವಂತೆ ಮಾಡುವುದು ನಿಜವಾದ ಅಭಿವೃದ್ಧಿ. ಮೌನ ಗ್ರಂಥಾಲಯ ಮತ್ತೊಮ್ಮೆ ಪ್ರಾರಂಭವಾಗುತ್ತಿರುವುದು ಒಳ್ಳೆಯ ಬೆಳವಣಿಗೆ, ಸಾಹಿತ್ತಿಕ ಸಾಂಸ್ಕೃತಿಕ ಚಟುವಟಿಕೆ ಹೆಚ್ಚಾದರೇ, ವ್ಯಸನಗಳು ಕಡಿಮೆ ಆಗುತ್ತವೆ. ಪ್ರಮೋದ ಹೆಗಡೆ ಸಂಕಲ್ಪದ ಮೂಲಕ ಹಚ್ಚಿರುವ ದೀಪದಿಂದ ಸಾವಿರಾರು ದೀಪಗಳು ಬೆಳಗುತ್ತಿವೆ ಎಂದರು.

ಟಿ.ಎಸ್.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ದೇಶದಲ್ಲಿ 135 ಕೋಟಿ ಜನರಿದ್ದೆವೆ, ಆದರೆ ಎಲ್ಲರೂ ಮನುಷ್ಯರಾಗಿಲ್ಲ. ಭಾರತ ಮಾತೆಯ ಮಕ್ಕಳು ಅನಿಸಿಕೊಳ್ಳಬೇಕಾದರೇ ಸಂಕಲ್ಪದಂತಹ ಕಾರ್ಯಕ್ರಮ ಬೇಕಾಗುತ್ತದೆ. ನಮಗೆ ಸಂಸ್ಕೃತಿ, ಸಂಸ್ಕಾರ ಅಗತ್ಯವಿದೆ. ಸಂಕಲ್ಪ ಸಂಸ್ಥೆಯವರು ಔಚಿತ್ಯ ಪೂರ್ಣ ಕಾರ್ಯಕ್ರಮ ಮಾಡುತ್ತಿರುವುದರಿಂದ ನಾವು ಯಲದಲಾಪುರದವರು ಗೌರವದಿಂದಿದ್ದೇವೆ ಎಂದರು.

300x250 AD

ಸಾಹಿತಿ ಶಿವಲೀಲಾ ಹುಣಸಗಿ ಮಾತನಾಡಿ, ನಮಗೆಲ್ಲರಿಗೂ ಸಂಕಲ್ಪ ಇದ್ದರೇ ಮಾತ್ರ ನಾವು ಎನನ್ನಾದರು ಸಾಧಿಸಲು ಸಾಧ್ಯ, ಪ್ರಮೋದ ಹೆಗಡೆಯಯವರ ಮಾರ್ಗದರ್ಶನದಲ್ಲಿ ನಾನೂ ಕೂಡ ಸಾಹಿತಿಯಾಗಿ ಗುರುತಿಸಿಕೊಂಡಿದ್ದೆನೆ. ಸಂಕಲ್ಪ ಉತ್ಸವ ನನಗೆ ವೇದಿಕೆ ಒದಗಿಸಿ ಕೊಟ್ಟಿದೆ ಎಂದು ಹೇಳಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನಿರ್ದೇಶಕ ಹರಿಪ್ರಸಾದ ಪೆರಿಯಾಪು, ವಿದ್ವಾನ್ ಗಣಪತಿ ಕೂಲಿಬೇಣ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ ಮಾತನಾಡಿದರು. ಎಲ್.ಪಿ.ಭಟ್ಟ ಗುಂಡ್ಕಲ್, ಅಣ್ಣಯ್ಯ ಭಟ್ಟ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಶ್ರಮಜೀವಿ ಕೃಷಿಕ ಮಹಿಳೆ ಆಶಾ ನಾಯಕ ಅವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿವಲೀಲಾ ಹುಣಸಗಿ ಸಂಪಾದಕೀಯದಲ್ಲಿ ಕನ್ನಡ ನುಡಿಗವಿತೆಗಳ ಗುಚ್ಚ ಕವನ ಸಂಕಲನವನ್ನು ನಾಗರಾಜ ನಾಯಕ ಬಿಡುಗಡೆಗೊಳಿಸಿದರು. ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು, ಸುಜಯ ದುರಂದರ ಪ್ರಾರ್ಥಿಸಿದರು. ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ ಸ್ವಾಗತಿಸಿದರು. ಶಿಕ್ಷಕಿ ಸುವರ್ಣಲತಾ ಪಟಗಾರ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಚಂದ್ರಹಾಸ ನಾಯ್ಕ ನಿರೂಪಿಸಿದರು. ಮಂಜುನಾಥ ಹಿರೇಮಠ ವಂದಿಸಿದರು.

Share This
300x250 AD
300x250 AD
300x250 AD
Back to top