ಕಾರವಾರ: ಹೆಸ್ಕಾಂ ಕುಮಟಾ ಉಪವಿಭಾಗದ ನಗರ ಶಾಖೆಯ 11 ಕೆ.ವಿ ಮಾರ್ಗದ ಕೊಪ್ಪಳಕರವಾಡಿ, ನೆಲ್ಲಿಕೇರಿ, ಹೊಸಹಿತ್ತಲ, ಹೆರವಟ್ಟಾ, ಬಗ್ಗೋಣ, ಹೊನ್ಮಾವ, ಕುಂಬಾರಮಕ್ಕಿ, ಹಳೇ ಮೀನು ಮಾರುಕಟ್ಟೆ ಮುಂತಾದ ಭಾಗಗಳಲ್ಲಿ ನ.3ರಂದು ಬೆಳಗ್ಗೆ 9:30 ಗಂಟೆಯಿಂದ ಮಧ್ಯಾಹ್ನ 4:30 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಕುಮಟಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.