ಗೋಕರ್ಣ: ಸಂಭ್ರಮ ಸಡಗರದಿಂದ ನವರಾತ್ರಿ ಸಂಪನ್ನಗೊಂಡಿದೆ. ಆದರೂ ಕೂಡ ಅಲ್ಲಿಲ್ಲಿ ಸಣ್ಣಪುಟ್ಟ ಕಾರ್ಯಗಳು ಸಿಮೋಲಂಘನ ಮಾಡುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಕೂಡ ನಡೆಸಲಾಗುತ್ತದೆ.
ಶ್ರೀಕ್ಷೇತ್ರ ಗೋಕರ್ಣದಲ್ಲಿ ವಿಜಯದಶಮಿ ಅಂಗವಾಗಿ ಶ್ರೀಮಹಾಬಲೇಶ್ವರ ದೇವರು ಊರ ಗಡಿ ದಾಟಿ ಸಿಮೋಲಂಘನ ಮಾಡಿದೆ. ಕ್ಷೇತ್ರದ ಅಧಿದೇವತೆ ಎನಿಸಿಕೊಂಡಿರುವ ಶ್ರೀ ಭದ್ರಕಾಳಿ ದೇವಿಗೆ ವಿಶೇಷ ಅಲಂಕಾರವನ್ನು ಕೂಡ ಮಾಡಲಾಗಿತ್ತು. ಶೃಂಗೇರಿ ಶಾರದಾಂಬಾ, ದುರ್ಗಾಪರಮೇಶ್ವರಿ, ತಾಮ್ರಗೌರಿ, ಸ್ಮಶಾನಕಾಳಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಅಲಂಕಾರ ಮಾಡಲಾಗಿತ್ತು.
ಪರಂಪರೆಯಂತೆ ಮಹಾಬಲೇಶ್ವರ ಉತ್ಸವಮೂರ್ತಿ, ಭದ್ರಕಾಳಿ ದೇವಿಯವರೆಗೂ ಬಂದು ಅಲ್ಲಿಂದ ಅಷ್ಟಾವಧಾನ ಸೇವೆ ನಡೆಸಿ ಊರ ಗಡಿಯನ್ನು ದಾಟಿ ಮರಳಿ ಮೂಲ ಜಾಗಕ್ಕೆ ಬಂದಿತ್ತು. ದಾರಿಯುದ್ದಕ್ಕೂ ಭಕ್ತರಿಗೆ ಬನ್ನಿಯನ್ನು ಪ್ರಸಾದ ರೂಪದಲ್ಲಿ ನೀಡಲಾಯಿತು. ಭದ್ರಕಾಳಿ ಮತ್ತು ತಾಮ್ರಗೌರಿಗೆ ಚಂಡಿಕಾಹವನ ನಡೆಯಿತು.