ಶಿರಸಿ: ಜಾತಿ, ಪ್ರದೇಶ, ಪಕ್ಷಗಳನ್ನು ಮೀರಿ ನಿಜನಾಯಕರಾಗಿ ಜನಾನುರಾಗಿಯಾಗಿ ಬೆಳೆದು ರಾಜ್ಯಾದ್ಯಂತ ಅಭಿಮಾನಿಗಳನ್ನು ಹೊಂದಿದ ಕೆಲವೇ ನಾಯಕರಲ್ಲಿ ಎಸ್. ಬಂಗಾರಪ್ಪನವರು ಒಬ್ಬರು ಎಂದು ಹಿರಿಯ ಕಾಂಗ್ರೆಸಿಗ ಎಸ್ ಕೆ ಭಾಗ್ವತ್ ಅಭಿಪ್ರಾಯ ಪಟ್ಟರು.
ಸಮಾಜವಾದಿ ಸಿದ್ಧಾಂತದೊಂದಿಗೆ ರಾಜಕೀಯ ಪ್ರವೇಶ ಮಾಡಿ ಗೇಣಿದಾರರ ಪರವಾಗಿ ಹೋರಾಟ ಮಾಡಿ, ಶೋಷಿತರ ಗಟ್ಟಿ ಧ್ವನಿಯಾಗಿ ರಾಜ್ಯಕ್ಕೆ ಸಮರ್ಥ ನಾಯಕತ್ವ ನೀಡಿ ಬಂಗಾರಪ್ಪನವರ 90 ನೇ ಜನ್ಮದಿನದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್. ಬಂಗಾರಪ್ಪರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ತಮ್ಮ ದೀರ್ಘಕಾಲದ ರಾಜಕೀಯ ಜೀವನದಲ್ಲಿ ಕೆಲವು ವರ್ಷಗಳಲ್ಲಿ ಸಚಿವರಾಗಿ, ಮುಖ್ಯಮಂತ್ರಿಯಾಗಿ ಅವರು ನೀಡಿದ ಕಾರ್ಯಕ್ರಮ ಸದಾ ಜನರ ಮನಸ್ಸಿನಲ್ಲಿ ಇರುತ್ತದೆ, ಸಮಾಜವಾದಿ ಚಿಂತಕರಾಗಿ, ರಾಜಕಾರಣಿಯಾಗಿ, ಸಾಂಸ್ಕೃತಿಕ ವ್ಯಕ್ತಿಯಾಗಿ ಅವರು ಸದಾ ಸ್ಮರಣೀಯ ಎಂದು ಹೇಳಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಗದೀಶ್ ಗೌಡ, ಬಂಗಾರಪ್ಪನವರು ಸಾಮಾನ್ಯರಲ್ಲಿ ಸಾಮಾನ್ಯರಂತಿರುತ್ತಿದ್ದರ ಬಗ್ಗೆ ವಿವರಿಸಿದರು. ಅನೇಕ ವರ್ಷಗಳ ಹಿಂದೆ ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿಯಲ್ಲಿ ನಡೆಯುತ್ತಿದ ಸಂಗೀತ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಭಾಗವಹಿಸಿ ಪ್ರೇಕ್ಷಕರೊಂದಿಗೆ ಕುಳಿತು ಸಂಗೀತ ಕಾರ್ಯಕ್ರಮ ಕೇಳಿದ ಪ್ರಸಂಗವನ್ನು ಹೇಳಿ ಬಂಗಾರಪ್ಪನ್ನವರ ಸರಳತೆಯ ಬಗ್ಗೆ ಗುಣಗಾನ ಮಾಡಿದರು.
ಈ ಸಮಯದಲ್ಲಿ ಶ್ರೀಮತಿ ಮೋಹಿನಿ ಬೈಂದೂರು, ಶ್ರೀಮತಿ ಗಾಯತ್ರಿ ನೇತ್ರೆಕರ್, ಶ್ರೀಪಾದ ನಾಯ್ಕ್, ಗಜು ನಾಯ್ಕ, ರಘು ಕಾನಡೆ ಮಾತನಾಡಿದರು. ಪಕ್ಷದ ಹಿರಿಯರಾದ ವೆಂಕಟೇಶ್ ಹೆಗಡೆ, ಸತೀಶ್ ನಾಯ್ಕ್, ಶ್ರೀಮತಿ ಜ್ಯೋತಿ ಪಾಟೀಲ್, ಶ್ರೀಮತಿ ಸುಮಾ ಉಗ್ರಾಣಕರ್, ಶ್ರೀಮತಿ ಗೀತಾ ಶೆಟ್ಟಿ, ಶ್ರೀಮತಿ ವನೀತಾ ಶೆಟ್ಟಿ, ಶ್ರೀಮತಿ ರುಬಿಲಾ ಫರ್ನಾಂಡಿಸ್, ಶ್ರೀನಿವಾಸ ನಾಯ್ಕ, ಶ್ರೀಧರ್ ನಾಯ್ಕ, ಎಂ. ಎಸ್. ನಾಯ್ಕ, ಪ್ರಶಾಂತ ನಾಯ್ಕ,ಲಾಜರ ಫರ್ನಾಂಡಿಸ್, ಕಾಶಿಂ ಸಾಭ, ಹಾಗೂ ಪಕ್ಷದ ಪ್ರಮುಖರು ಭಾಗವಹಿಸಿದ್ದರು.