Slide
Slide
Slide
previous arrow
next arrow

ಆಟೋರಿಕ್ಷಾ ಚಾಲಕರಿಗೆ ಆರೋಗ್ಯ ವಿಮೆ ಮಾಡಿಸುವ ಯೋಜನೆಯಿದೆ: ಅನಂತಮೂರ್ತಿ ಹೆಗಡೆ

300x250 AD

ಕಾರವಾರ: ಆಟೋ ರಿಕ್ಷಾ ಚಾಲಕರಿಗೆ ಆರೋಗ್ಯ ವಿಮೆ ಮಾಡುವ ಯೋಜನೆ ಹೊಂದಿದ್ದೇನೆ ಎಂದು ಅನಂತಮೂರ್ತಿ ಹೆಗಡೆ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ಉಚಿತ ಸಮವಸ್ತ್ರ, ಆಟೋಗಳಿಗೆ ಪ್ರಿಂಟಿಂಗ್ ಹುಡ್ ಹಾಗೂ ಇತರ ಸೌಕರ್ಯ ವಿತರಿಸಿ, ಹಿರಿಯ ಆಟೋ ಚಾಲಕರ ಕುಟುಂಬಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಬಡತನ ಎಂಬುದು ಶಾಪ. ಬಡವರನ್ನು ಸಮಾಜ ದೂರ ಇಡುತ್ತದೆ. ಅದರ ಭೀಕರತೆಯನ್ನು ನಾನು ಅನುಭವಿಸಿದ್ದೇನೆ. ಆದರೆ, ಬಡವರಾಗಿ ಹುಟ್ಟಿದ್ದು ನನ್ನ ತಪ್ಪಲ್ಲ. ಬಡವನಾಗಿ ಸಾಯಬಾರದು ಎಂದು ನಿರ್ಧಾರ ಮಾಡಿದೆ.‌ ಬೆಂಗಳೂರಿಗೆ ಹೋಗಿ ವೈದಿಕ ವೃತ್ತಿಯಲ್ಲಿ ತೊಡಗಿದೆ. ಅದರಿಂದ ಬಂದ ಹಣದಲ್ಲಿ ಉದ್ಯಮ ಆರಂಭಿಸಿದೆ.‌ ಅದರಲ್ಲಿ ಯಶಸ್ವಿಯಾದೆ. ಈಗ ನಾನು ಅನುಕೂಲಸ್ಥನಾಗಿದ್ದೇನೆ. ಶಿರಸಿಯಲ್ಲೂ ಉದ್ಯಮ ಹೊಂದಿದ್ದೇನೆ. ನನ್ನ ದುಡಿಮೆಯಲ್ಲಿ ಸಮಾಜ ಸೇವೆ ಮಾಡಬೇಕು ಎಂದುಕೊಂಡಿದ್ದೇನೆ. ಅದರ ಹೊರತು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲ‌ ಎಂದು ಸ್ಪಷ್ಟಪಡಿಸಿದರು.

ರಸ್ತೆಯಲ್ಲಿ ಅಪಘಾತವಾದಾಗ ಗಾಯಾಳುವನ್ನು ಮೊದಲು ರಕ್ಷಿಸುವುದು ಆಟೋ ಚಾಲಕರು. ಸಾಮಾನ್ಯ ಜನರ ಪ್ರತಿ ಬೇಕು, ಬೇಡಿಕೆಗಳಿಗೆ ಪ್ರತಿ ಹಂತದಲ್ಲಿ ಸ್ಪಂದಿಸುವವರು ಆಟೋ‌ ಚಾಲಕರು.‌ಆದರೆ, ಆಟೋ ಚಾಲಕರನ್ನು ಜನ ತುಚ್ಛವಾಗಿ ಕಾಣುತ್ತಾರೆ. ಅದು ಬದಲಾಗಬೇಕು. ಹಾಗಾಗಿ ಆಟೋ ಚಾಲಕರಿಗೆ ನೆರವಾಗುವ ಯೋಜನೆ ರೂಪಿಸಿ ಕಾರ್ಯಗತ ಮಾಡಿದ್ದೇನೆ. ಮುಂದೆ ಆಟೋ‌‌ ಚಾಲಕರ ಮಕ್ಕಳ‌ ಶಿಕ್ಷಣಕ್ಕೆ ನೆರವಾಗುವ ಯೋಜನೆ ಇದೆ ಎಂದರು.

ನಮ್ಮ ಊರಿಗೆ, ಗ್ರಾಮಕ್ಕೆ, ಜಿಲ್ಲೆಗೆ, ನಮಗೆ ಏನು ಬೇಕು ಎಂಬುದನ್ನು ಕೂಗಿ ಹೇಳಬೇಕು. ಆಗ ಮಾತ್ರ ಅದಕ್ಕೆ ಸ್ಪಂದನೆ ದೊರತೆಯುತ್ತದೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಅಪಘಾತ ಹೃದಯಾಘಾತ ಸಂಭವಿಸಿದರೆ ದೂರದ ಮಂಗಳೂರು, ಹುಬ್ಬಳ್ಳಿ ಭಾಗಕ್ಕೆ ಚಿಕಿತ್ಸೆಗೆ ತೆರಳಬೇಕು. ಕಾರವಾರದಲ್ಲಿ ಆಗಿರುವ ವೈದ್ಯಕೀಯ ಕಾಲೇಜ್‌ನಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಇದರಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರವರೆಗೆ ನವೆಂಬರ್‌ 2 ರಿಂದ ಪಾದಯಾತ್ರೆ ನಡೆಸುತ್ತಿದ್ದೇನೆ. ಘಟ್ಟದ ಮೇಲೊಂದು ಹಾಗೂ ಕೆಳಗೊಂದು ಆಸ್ಪತ್ರೆ ಬೇಕು ಎಂಬುದು ನನ್ನ ಉದ್ದೇಶ ಎಂದರು.

300x250 AD

ಸೇಂಟ್ ಮಿಲಾಗ್ರಿಸ್ ಸೌಹಾರ್ದ ಸಹಕಾರಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್, ಕಾರ್ಯಕ್ರಮ‌ ಉದ್ಘಾಟಿಸಿ ಮಾತಮಾಡಿ, ಕೋವಿಡ್ ನಿಂದ ಸಂಕಷ್ಟಕ್ಕೊಳಗಾದ ಆಟೋ ರಿಕ್ಷಾ ಚಾಲಕರಿಗೆ ಸರ್ಕಾರದ ಶಕ್ತಿ ಯೋಜನೆಯ ಬರೆ ಎಳೆದಿದೆ. ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿದ್ದಕ್ಕೆ ಸ್ವಾಗತ. ಆದರೆ, ಆಟೋ ರಿಕ್ಷಾ ಚಾಲಕರ‌ ಸಮಸ್ಯೆಯನ್ನೂ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಪೆಟ್ರೋಲ್ ಮೇಲೆ ಸಬ್ಸಿಡಿ ಕೊಡು ವ್ಯವಸ್ಥೆ ಜಾರಿಗೆ ತರಬೇಕು. ಮನೆ ಇಲ್ಲದವರಿಗೆ ಮನೆ ಕಟ್ಟಿಕೊಡುವ ಕಾರ್ಯ ಮಾಡಬೇಕು ಎಂದರು. ಆಟೋ ರಿಕ್ಷಾ ಚಾಲಕರಿಗೆ ಪ್ರತಿ ತಿಂಗಳ ಕನಿಷ್ಟ ಆದಾಯ ದೊರಕಿಸಿಕೊಡುವ ಯೋಜನೆ ಜಾರಿಗೆ ತರಬೇಕು ಎಂದರು.

ಹೊನ್ನಾವರ ಆಟೋ ರಿಕ್ಷಾ ಚಾಲಕರ‌, ಮಾಲೀಕರ‌ ಕ್ಷೇಮಾಭಿವೃದ್ಧಿ ಸಂಘದ ಶಿವರಾಜ ಮೇಸ್ತ, ಭಟ್ಕಳದ ಕೃಷ್ಣಾ ನಾಯ್ಕ, ಉದ್ಯಮಿ ರಾಜೇಶ ಕಾಮತ್, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ವೇದಿಕೆಯಲ್ಲಿದ್ದರು.

Share This
300x250 AD
300x250 AD
300x250 AD
Back to top