ಶಿರಸಿ: ತಾಲೂಕಿನ ಗಡಿ ಭಾಗದ ಹೆಮ್ಮಾಡಿಯ ಕಿಶೋರ ಕಲಾವಿದೆ ಸುಜನಿ ಪೂಜಾರಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಎನ್ಕೆಎಫ್ಎ ಕ್ರೇಜಿ ಡಾನ್ಸರ್ 2023ರ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾಳೆ.
ಜಗನ್ನಾಥ ಎಂ.ಪಿ. ಹಾಗೂ ಸುನೀತಾ ದಂಪತಿಗಳ ಪುತ್ರಿ. ಪ್ರಸ್ತುತ ಹುಬ್ಬಳ್ಳಿಯಲ್ಲಿ ಎಂಟನೇ ತರಗತಿಯ ಓದುತ್ತಿದ್ದಾಳೆ. ಈಗಾಗಲೇ ಭರತನಾಟ್ಯದ ಪ್ರದರ್ಶನ ಅನೇಕ ಕಡೆ ನೀಡಿ ಗಮನ ಸೆಳೆದಿದ್ದಾಳೆ.