Slide
Slide
Slide
previous arrow
next arrow

ಒಡೆದ ಮನಸ್ಸುಗಳಿಂದ ಸದೃಢ ಸಮಾಜ ನಿರ್ಮಾಣ ಅಸಾಧ್ಯ: ಅರುಣಕುಮಾರ್

300x250 AD

ಭಟ್ಕಳ: ಭಾರತ ಜಗದ್ಗುರುವಾಗಿ ಕಂಗೊಳಿಸಬೇಕಾದರೆ ಹಿಂದೂ ಸಮಾಜ ಗಟ್ಟಿಯಾಗಬೇಕು. ಸಮಾಜದಲ್ಲಿನ ಅಸ್ಪೃಶ್ಯತೆ ತೊಲಗಬೇಕು. ಒಡೆದ ಮನಸ್ಸುಗಳಿಂದ ಸದೃಢ ಸಮಾಜ ನಿರ್ಮಾಣ ಅಸಾಧ್ಯ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ್ ಹೇಳಿದರು.

ಭಟ್ಕಳದಲ್ಲಿ ವಿಜಯದಶಮಿ ಪ್ರಯುಕ್ತ ನಡೆದ ವಿಜಯದಶಮಿ ಪಥಸಂಚಲನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡಿ, ಆರ್.ಎಸ್.ಎಸ್. ಪ್ರಾರಂಭದಿಂದಲೂ ಜಾತಿ ಮತಾಂಧತೆ, ಅಸ್ಪೃಶ್ಯತೆ ಇವೆಲ್ಲವನ್ನು ವಿರೋಧಿಸುತ್ತಾ ಬಂದಿದೆ. ಯಾವುದೇ ಜಾತಿ, ಮತ, ಧರ್ಮಕ್ಕೆ ಸೇರಿದವರು ಅಪ್ಪಟ ದೇಶಭಕ್ತರಾಗಿದ್ದರೆ ಅಂತಹವರನ್ನು ಯಾವುದೇ ಬೇಧ ಮಾಡದೇ ಆರ್.ಎಸ್.ಎಸ್. ಒಪ್ಪಿಕೊಳ್ಳುತ್ತದೆ ಎಂದು ಹೇಳಿದರು.

ಗಣವೇಶಧಾರಿ ಸ್ವಯಂ ಸೇವಕರ ಆಕರ್ಷಕ ಪಥಸಂಚಲನವು ಪಟ್ಟಣದ ವೀರವಿಠ್ಠಲ ರಸ್ತೆ ವಡೇರಮಠ ಮೈದಾನದಿಂದ ಆರಂಭವಾಗಿ ಹೂವಿನ ಮಾರುಕಟ್ಟೆ, ಮಾರಿಕಾಂಬಾ ದೇವಾಲಯ, ಹನುಮಂತ ದೇವಸ್ಥಾನ, ನಾಗಯಕ್ಷೆ ದೇವಾಲಯದ ಮೂಲಕ ಸಾಗಿತು. ಸಾರ್ವಜನಿಕರು ಮಾರ್ಗದುದ್ದಕ್ಕೂ ರಂಗೋಲಿ, ಪುಷ್ಪಾರ್ಚನೆ ಮೂಲಕ ಸಂಚಲನವನ್ನು ಸ್ವಾಗತಿಸಿದರು.

300x250 AD

ಈ ವೇಳೆ ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ್, ಮಾಜಿ ಶಾಸಕ ಸುನೀಲ್ ನಾಯ್ಕ್, ವಿನಾಯಕ ಕೇಶಕಾಮತ್ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top