ಶಿರಸಿ: ಭಾರತ ಸ್ಕೌಟ್ ಮತ್ತು ಗೈಡ್ಸ ಕರ್ನಾಟಕ ಇವರ ವತಿಯಿಂದ ಧಾರವಾಡ ವಿಶ್ವವಿದ್ಯಾಲಯದಲ್ಲಿ ನಡೆದ, 2022-23ನೇ ಸಾಲಿನ ರಾಜ್ಯಪುರಸ್ಕಾರ ಪರೀಕ್ಷೆಯಲ್ಲಿ ಶಿರಸಿ ಲಯನ್ಸ್ ಶಾಲೆಯ ಸ್ಕೌಟ್ಸ್ ವಿಭಾಗದ ವಿದ್ಯಾರ್ಥಿಗಳಾದ ಧೀರಜ್ ನಾಯ್ಕ, ನವೀನ್ ಆಚಾರಿ, ಚಿನ್ಮಯ ನಾಯಕ, ಕೌಶಿಕ್ ನಾಯ್ಕ, ಹಾಗೂ ಗೈಡ್ಸ್ ವಿಭಾಗದ ವಿದ್ಯಾರ್ಥಿನಿಯರಾದ ಗಗನಾ ಭಟ್, ಸುಪರ್ಣಾ ಹಿರೇಮಠ, ಕೀರ್ತಿ ಭೋವಿ, ಬಿ.ಎಂ. ಅನುಪ್ರೀತಾ, ಪ್ರಣತಿ ಹೆಗಡೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಈ ಸಾಲಿನ ರಾಜ್ಯಪಾಲ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು ಹಾಗೂ ಗೈಡ್ಸ್ ಕ್ಯಾಪ್ಟನ್ ಚೇತನಾ ಪಾವಸ್ಕರ ತರಬೇತಿ ನೀಡಿದ್ದು, ಈವರೆಗೆ ಲಯನ್ಸ್ ಶಾಲೆಯ ಸ್ಕೌಟ್-ಗೈಡ್ಸ್ ವಿಭಾಗದಿಂದ ಒಟ್ಟೂ 49 ವಿದ್ಯಾರ್ಥಿಗಳು ಕರ್ನಾಟಕದ ಘನತೆವೆತ್ತ ರಾಜ್ಯಪಾಲರಿಂದ ರಾಜ್ಯ ಪುರಸ್ಕಾರ ಪಡೆಯಲು ಯಶಸ್ವಿಯಾಗಿರುವುದು ಶಿರಸಿ ಲಯನ್ಸ್ ಶಾಲೆಯ ಐತಿಹಾಸಿಕ ಸಾಧನೆಯಾಗಿದೆ. ಈ ಸಾಧನೆಗೈದ ವಿದ್ಯಾರ್ಥಿಗಳನ್ನು, ಸಹಕರಿಸಿದ ಪಾಲಕರನ್ನು, ತರಬೇತಿ ನೀಡಿದ ಶಿಕ್ಷಕರನ್ನು ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಆಡಳಿತ ಮಂಡಳಿ ಸದಸ್ಯರು, ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಸಮೂಹ ಶಾಲೆಗಳ ಪ್ರಾಂಸುಪಾಲರು ಹಾಗೂ ಶಿಕ್ಷಕ ಶಿಕ್ಷೇತರ ವೃಂದ, ಪಾಲಕ ವೃಂದ ತುಂಬು ಹೃದಯದಿಂದ ಅಭಿವಂದಿಸಿ ಆಶೀರ್ವದಿಸಿದ್ದಾರೆ.