Slide
Slide
Slide
previous arrow
next arrow

ಚುನಾವಣೆಗಾಗಿ ಹಾಲು ಸಂಘಗಳು ಕಾರವಾರಕ್ಕೆ ಅಲೆದಾಡುವ ವ್ಯವಸ್ಥೆ ಕೊನೆಗೊಳ್ಳಬೇಕು: ಸುರೇಶ್ಚಂದ್ರ ಹೆಗಡೆ

300x250 AD

ಶಿರಸಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಉತ್ತರಕನ್ನಡ ಜಿಲ್ಲಾ ಸಹಕಾರ ಯೂನಿಯನ್‌ ನಿ., ಕುಮಟಾ ಹಾಗೂ ಸಹಕಾರ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಶಿರಸಿ ಉಪವಿಭಾಗದ ವ್ಯಾಪ್ತಿಯಲ್ಲಿ ಜ.01, 2024 ರಿಂದ ಡಿ. 31, 2024 ರವರೆಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಜರುಗುವ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಕರುಗಳಿಗೆ ಒಂದು ದಿನದ ಚುನಾವಣಾ ತರಬೇತಿ ಕಾರ್ಯಕ್ರವು ಶಿರಸಿಯ ಎ.ಪಿ.ಎಂ.ಸಿ. ಯಾರ್ಡ್‌ನಲ್ಲಿರುವ ಟಿ.ಆರ್.ಸಿ. ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗುವ ಮೂಲಕ ಧಾರವಾಡ ಸಹಕಾರ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್‌ ನಿರ್ದೇಶಕರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಹಾಗೂ ಉತ್ತರಕನ್ನಡ ಜಿಲ್ಲಾ ಸಹಕಾರ ಸಹಕಾರ ಯೂನಿಯನ್‌ ನಿ., ಕುಮಟಾ ದ ನಿರ್ದೇಶಕರು ಹಾಗೂ ಹಿರಿಯ ಸಹಕಾರಿಗಳಾದ ಜಿ.ಟಿ.ಹೆಗಡೆ ತಟ್ಟೀಸರ ಉದ್ಘಾಟಿಸಿದರು.

ಕೇಂದ್ರ ಸಹಕಾರ ಇಲಾಖೆಯ ಸಚಿವರಾದಂತಹ ಮಾನ್ಯ ಅಮಿತ್‌ ಶಾ ಸ್ವತಃ ಒಂದು ಕೃಷಿ ಸಹಕಾರ ಪತ್ತಿನ ಸಂಘದ ನಿರ್ದೇಶಕರಾಗಿದ್ದು ಅವರಿಗೆ ಸಹಕಾರ ಸಂಘಗಳ ಕಾರ್ಯನಿರ್ವಹಣೆಯ ಬಗ್ಗೆ ಸಂಪೂರ್ಣವಾಗಿ ಅರಿವಿದ್ದು, ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಗ್ರಾಮೀಣ ವರ್ಗದ ಜನರನ್ನು ತಲುಪಲು ಪ್ರಾಥಮಿಕ ಸಹಕಾರ ಸಂಘಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯನ್ನು ಅವರು ಹೊಂದಿದ್ದು, ಅವುಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿರುತ್ತಾರೆ. ಅಂತೆಯೇ ಸಹಾಕರ ಸಂಘಗಳು ಕಾಲಕಾಲಕ್ಕೆ ಸರಿಯಾಗಿ ತಮ್ಮ ಸಂಘಗಳಲ್ಲಿ ಜರುಗಬೇಕಾದ ಚುನಾವಣಾ ಪ್ರಕ್ರಿಯೆಯನ್ನು ಯಾವುದೇ ಗೊಂದಲಗಳಿಗೆ ಅನುವು ಮಾಡಿಕೊಡದೇ ಸರಿಯಾದ ರೀತಿಯಲ್ಲಿ ಕಾನೂನು ಬದ್ಧವಾಗಿ ನಿರ್ವಹಿಸಬೇಕಿದೆ. ನಮ್ಮ ಜಿಲ್ಲೆಯ ಹಾಲು ಸಂಘಗಳು ಚುನಾವಣೆಯ ಸಲುವಾಗಿ ಕಾರವಾರಕ್ಕೆ ಹೋಗಿ ಚುನಾವಣೆಗೆ ಸಂಬಂಧಿಸಿದ ದಾಖಲಾತಿಗಳನ್ನು ಉಪ ನಿಬಂಧಕರ ಕಚೇರಿಗೆ ಸಲ್ಲಿಸಬೇಕಾದ ಪರಿಸ್ಥಿತಿಯಿದ್ದು, ಇದರಿಂದ ಎಲ್ಲಾ ಹಾಲು ಸಂಘಗಳಿಗೆ ಬಹಳ ತೊಂದರೆ ಉಂಟಾಗುತ್ತಿದ್ದು, ಈ ವ್ಯವಸ್ಥೆ ಬದಲಾಗಬೇಕಿದೆ. ಬಹುತೇಕ ಎಲ್ಲಾ ಹಾಲು ಸಂಘಗಳು ಕಡಿಮೆ ಲಾಭದಲ್ಲಿದ್ದು, ಅನೇಕ ಸಂಘಗಳು ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿರದ ಕಾರಣ ಕಾರವಾರಕ್ಕೆ ಹೋಗಿ ಬರುವ ಖರ್ಚು ವೆಚ್ಚಗಳನ್ನು ಭರಿಸಲು ಹಾಲು ಸಂಘಗಳಿಗೆ ಕಷ್ಟಕರವಾಗಿರುತ್ತದೆ. ಮುಂದಿನ ದಿನಗಳಲ್ಲಿ ಹಾಲು ಸಂಘಗಳ ಚುನಾವಣೆಗೆ ಸಂಬಂಧಿಸಿದಂತೆ ಕಾರವಾರದ ಉಪ ನಿಬಂಧಕರ ಕಚೇರಿಯ ಸಿಬ್ಬಂಧಿಗಳು ಆಯಾ ತಾಲೂಕು ಕೆಂದ್ರಗಳಿಗೆ ಆಗಮಿಸಿ ಹಾಲು ಸಂಘಗಳ ಚುನಾವಣಾ ದಾಖಲಾತಿಗಳನ್ನು ಪರಿಶೀಲಿಸುವಂತಾಗಬೇಕು ಎಂದು ಸಭೆಯ ಮೂಲಕ ಉತ್ತರಕನ್ನಡ ಜಿಲ್ಲಾ ಸಹಕಾರ ಸಹಕಾರ ಯೂನಿಯನ್‌ ನಿ., ಕುಮಟಾ ದ ನಿರ್ದೇಶಕರು ಹಾಗೂ ಹಿರಿಯ ಸಹಕಾರಿಗಳಾದ ಜಿ.ಟಿ.ಹೆಗಡೆ ತಟ್ಟೀಸರ ಅವರಲ್ಲಿ ಮನವಿ ಮಾಡಿದರು.

300x250 AD

ಉತ್ತರಕನ್ನಡ ಜಿಲ್ಲಾ ಸಹಕಾರ ಸಹಕಾರ ಯೂನಿಯನ್‌ ನಿ., ಕುಮಟಾ ದ ನಿರ್ದೇಶಕರು ಹಾಗೂ ಹಿರಿಯ ಸಹಕಾರಿಗಳಾದ ಜಿ.ಟಿ.ಹೆಗಡೆ ತಟ್ಟೀಸರ ಮಾತನಾಡಿ, ಕೇಂದ್ರ ಸರಕಾರ ಕೆಲವು ದಿನಗಳ ಹಿಂದೆ ಎಲ್ಲಾ ಸಂಘಗಳು ಒಂದೇ ರೀತಿ ಪೋಟ ನಿಯಮಗಳನ್ನು ಹೊಂದಬೇಕು ಎಂದು ಸುತ್ತೋಲೆಯನ್ನು ಹೊರಡಿಸಿತ್ತು, ಪ್ರತಿಯೊಂದು ಸಹಕಾರ ಸಂಘಗಳು ತಮ್ಮ ವ್ಯವಹಾರಕ್ಕೆ ತಕ್ಕಂತೆ ಆಯಾ ಪ್ರದೇಶಗಳ ಸಹಕಾರದ ವಾತಾವರಣಕ್ಕೆ ಅನುಗುಣವಾಗಿ ಆಯಾ ಭಾಗದ ರೈತರ ಹಿತದೃಷ್ಠಿಯನ್ನು ಕಾಪಾಡುವ ನಿಟ್ಟಿನಲ್ಲಿ ಪೋಟ ನಿಯಮಗಳನ್ನು ಹೊಂದಿರುತ್ತದೆ. ಎಲ್ಲಾ ಸಹಕಾರ ಸಂಘಗಳು ಒಂದೇ ರೀತಿಯ ಪೋಟ ನಿಯಮಗಳನ್ನು ಹೊಂದಬೇಕೆಂಬ ನಿಯಮದಿಂದ ನಮ್ಮ ಜಿಲ್ಲೆಯ ಸಹಕಾರ ಸಂಘಗಳಿಗೆ ತೊಂದರೆಯಾಗುತ್ತದೆ ಎಂಬ ಅಂಶವನ್ನು ಗಮನಿಸಿ ನಾವು ರಾಜ್ಯ ಸರಕಾರದ ಮೂಲಕ ಸದರಿ ಸುತ್ತೋಲೆಯಲ್ಲಿರುವ ಸಾಧಕ-ಬಾಧಕಗಳ ಕುರಿತು ಮಾಹಿತಿ ನೀಡಿ ನಮ್ಮ ಜಿಲ್ಲೆಯಲ್ಲಿ ಇರುವಂತಹ ಸಹಕಾರ ಸಂಘಗಳಿಗೆ ಆಗುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಸದರಿ ಸುತ್ತೋಲೆಯನ್ನು ನಮ್ಮ ಜಿಲ್ಲೆಯ ಸಹಕಾರ ಸಂಘಗಳಿಗೆ ಜಾರಿಗೆ ಮಾಡದಂತೆ ವಿನಾಯತಿ ಪಡೆಲಾಯಿತು ಎಂದರು. ಸಹಕಾರ ಸಂಘಗಳು ಹೇಗೆ ಕಾರ್ಯನಿರ್ವಹಿಸಬೇಕು, ಸಂಘದ ಸದಸ್ಯರ ಜವಾಬ್ದಾರಿಗಳು, ಚುನಾವಣಾ ಪ್ರಕ್ರಿಯೆಯ ತಯಾರಿಗಳನ್ನು ಮುಂಚಿತವಾಗಿ ಹೇಗೆ ಮಾಡಬೇಕು, ಸಹಕಾರ ಸಂಘಗಳ ಕಾನೂನುಗಳ ಬಗ್ಗೆ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಸಹಕಾರ ಸಂಘಗಳ ಕಾರ್ಯಚಟುವಟಿಕೆಗಳಲ್ಲಿ ಚುನಾವಣಾಯ ಮಹತ್ವ ಹಾಗೂ ಮತದಾರರ ಪಟ್ಟಿ ಸಿದ್ಧಪಡಿಸುವಿಕೆಯ ಕ್ರಮಗಳು ಹಾಗೂ ಸಹಕಾರ ಸಂಘಗಳ ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳು ಮತ್ತು ಕೈಗೊಳಬೇಕಾದ ಅಗತ್ಯ ಕ್ರಮಗಳ ವಿಷಯದ ಕುರಿತು ಸಹಕಾರ ಸಂಘಗಳ ಸಹಾಕರ ನಿಬಂಧಕರಾದ ಶ್ರೀನಿವಾಸ ಟಿ.ವಿ. ಅವರು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್‌, ಸಹಕಾರ ಸಂಘಗಳ ಮಾರಾಟಾಧಿಕಾರಿ ಬಿ ಡಿಸೋಜಾ, ಸಹಕಾರ ಸಂಘಗಳ ಮುಖ್ಯ ಕಾರ್ಯಕಾರ್ಯನಿರ್ವಹಾಕರುಗಳು ಹಾಗೂ ಟಿ.ಆರ್.ಸಿ. ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top