Slide
Slide
Slide
previous arrow
next arrow

ಯುರೋಪಿಯನ್ ಯೂನಿಯನ್ ತಜ್ಞರಾಗಿ ಪ್ರೊ.ರಾಜೀವ್ ಭಟ್ ನೇಮಕ

300x250 AD

ಹೊನ್ನಾವರ: ಜಿಲ್ಲೆಯ ಕುಮಟಾ ಮೂಲದ ಪ್ರೊಫೆಸರ್ ರಾಜೀವ್ ಭಟ್ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ (ಯುಎನ್‌ನ ಡಬ್ಲ್ಯುಎಚ್‌ಒ) ‘ಮಾರ್ಗದರ್ಶಿ ಅಭಿವೃದ್ಧಿ ಗುಂಪು’ (ಸಾಂಪ್ರದಾಯಿಕ ಆಹಾರ ಮಾರುಕಟ್ಟೆಗಳು) ಸದಸ್ಯರಾಗಿ ಸೇವೆ ಸಲ್ಲಿಸಲು ಯುರೋಪಿಯನ್ ಯೂನಿಯನ್‌ನಿಂದ ತಜ್ಞರಾಗಿ ನೇಮಿಸಲಾಗಿದೆ.

ವಿಶ್ವಸಂಸ್ಥೆಯ ಆಡಳಿತ ಮಂಡಳಿಯಿ0ದ ಗುರುತಿಸಲ್ಪಟ್ಟಿರುವ ಬಗ್ಗೆ ತಮ್ಮ ಸಂತೋಷವನ್ನು ಅವರು ವ್ಯಕ್ತಪಡಿಸಿದ್ದಾರೆ. ಕೃಷಿ-ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ವ್ಯಾಪಿಸಿರುವ ಅವರ ವೃತ್ತಿಜೀವನದಲ್ಲಿ ಈ ನೇಮಕಾತಿಯನ್ನು ಅವರು ಅತ್ಯಂತ ಸವಾಲಿನ ಪಾತ್ರವೆಂದು ಪರಿಗಣಿಸಿದ್ದಾರೆ. ಪ್ರೊ. ಭಟ್ ಅವರು ಆಹಾರಗಳ ಗುಣಮಟ್ಟ ಮತ್ತು ಸುರಕ್ಷತೆಗೆ ಸಂಬ0ಧಿಸಿದ ವಿವಿಧ ಅಂಶಗಳ ಕುರಿತು ತಮ್ಮ ಪರಿಣತಿಯನ್ನು ಹಂಚಿಕೊಳ್ಳುವ ಜೊತೆ ಜಾಗತಿಕ ಸಾಂಪ್ರದಾಯಿಕ ಆಹಾರ ಮಾರುಕಟ್ಟೆಗಳೊಂದಿಗೆ ಸಂಬOಧಿಸಿರುವ ಸಾರ್ವಜನಿಕ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಮಧ್ಯಂತರ ನಾಯಕತ್ವವನ್ನು ಒದಗಿಸಲು ಕೊಡುಗೆ ನೀಡುವ ನಿರೀಕ್ಷೆ ಇದೆ.

300x250 AD

ರಾಜೀವ್ ಭಟ್ ಇವರು ಮೂಲತಃ ಕುಮಟಾ ಹೊಲನಗದ್ದೆಯ ಮೂಲದವರಾಗಿದ್ದು, ಇವರ ತಂದೆ ನಾಡಿನ ಹೆಸರಾಂತ ಸಾಹಿತಿ ಜಿ ಎಸ್ ಭಟ್ ಮೈಸೂರಿನವರಾಗಿದ್ದಾರೆ. ರಾಜೇಶ ಭಟ್ ಮಂಗಳೂರಿನಲ್ಲಿ ಅಧ್ಯಯನ ನಡೆಸಿದ್ದರು.

Share This
300x250 AD
300x250 AD
300x250 AD
Back to top