Slide
Slide
Slide
previous arrow
next arrow

ಅ.16ರಿಂದ ಕಲಾಭಾಸ್ಕರ ಸಂಯೋಜನೆಯ ತಾಳಮದ್ದಳೆ ಪಂಚಕ

300x250 AD

ಸಿದ್ದಾಪುರ: ತಾಲೂಕಿನ ಕಲಾ ಸಂಘಟನೆಯಾದ ಕಲಾಭಾಸ್ಕರ ಇಟಗಿಯು ಐದುದಿನಗಳ ತಾಳಮದ್ದಳೆಗಳನ್ನು ತಾಲೂಕಿನ ವಿವಿಧೆಡೆಗಳಲ್ಲಿ ಹಮ್ಮಿಕೊಂಡಿದೆ.

ದಕ್ಷಿಣೋತ್ತರಕನ್ನಡ ಶಿವಮೊಗ್ಗ ಜಿಲ್ಲೆಯ ಕಲಾವಿದರುಗಳು ಭಾಗವಹಿಸುವ ಈ ತಾಳಮದ್ದಳೆ ಪಂಚಕ-2023 ಹೆಸರಿನ ಈ ಸರಣಿಯನ್ನು ಅ.16ರ ಸಂಜೆ 5-30ಕ್ಕೆ ಕವಲಕೊಪ್ಪದ ವಿನಾಯಕ ದೇವಾಲದಲ್ಲಿ ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಮ್.ಡಿ.ಭಟ್ಟ ಅಗ್ಗೆರೆಯವರು ಉದ್ಘಾಟಿಸಲಿದ್ದಾರೆ. ಸಾಮಾಜಿಕ ಮುಖಂಡರಾದ ಎನ್.ವಿ.ಹೆಗಡೆ ಮುತ್ತಿಗೆ, ಸೇ.ಸ.ಸಂ.ಬಿದ್ರಕಾನು ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ, ವಿನಾಯಕದೇವಾಲಯದ ಮೊಕ್ತೇಸರರಾದ ಎಮ್.ಎಸ್.ಹೆಗಡೆ ಕವಲಕೊಪ್ಪ ಮುಂತಾದ ಗಣ್ಯರು ಉಪಸ್ಥಿತರಿರುತ್ತಾರೆ. ನಂತರ ಸರ್ವೇಶ್ವರ ಹೆಗಡೆ ಮೂರೂರು ಭಾಗವತಿಕೆಯಲ್ಲಿ ಕವಿ ಹಲಸಿನಳ್ಳಿ ನರಸಿಂಹ ಶಾಸ್ತ್ರೀ ವಿರಚಿತ “ಭೀಷ್ಮಾರ್ಜುನ” ಎಂಬ ತಾಳಮದ್ದಲೆ ಪ್ರದರ್ಶನ ನಡೆಯಲಿದೆ.

ಅ.17ರ ಮಂಗಳವಾರದ0ದು ಮಧ್ಯಾಹ್ನ 3-30ಕ್ಕೆ ಐಸೂರಿನ ವೀರಭದ್ರ ಸಹಿತ ಗೌರಿಶಂಕರ ದೇವಾಲಯದಲ್ಲಿ ಕವಿ ಪಾರ್ತಿಸುಬ್ಬ ವಿರಚಿತ “ವಾಲಿಮೋಕ್ಷ” ಎಂಬ ತಾಳಮದ್ದಳೆಯನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯದ ಮೊಕ್ತೇಸರರಾದ ರಾಮನಾಥ ಹೆಗಡೆ ತಲೆಕೇರಿ, ವಾಜಗೋಡು ಸೇ.ಸ.ಸಂಘದ ಅಧ್ಯಕ್ಷ ಎಮ್.ಆಯ್.ನಾಯ್ಕ ಕೆಳಗಿನಸಸಿ, ಊರಿನ ಪ್ರಮುಖರಾದ ಗಜಾನನ ಭಟ್ಟ ದಾನಮಾವು ಹಾಗೂ ಈರ ನರಸ ಗೌಡ ಕೆಸಿನಮನೆ ಚಾಲನೆ ನೀಡಲಿದ್ದಾರೆ.

ಅ.18ರ ಮಧ್ಯಾಹ್ನ 3-30ರಿಂದ ಶ್ರೀಮನ್ನೆಲೆಮಾವು ಮಠದ ಮಂಗಲಧಾಮದಲ್ಲಿ ಪ.ಪೂ. ಶ್ರೀ ಶ್ರೀ ಮಾಧವಾನಂದಭಾರತಿ ಸ್ವಾಮಿಗಳ ಕೃಪಾಶೀರ್ವಾದಗಳೊಂದಿಗೆ ಕವಿ ಹಲಸಿನಳ್ಳಿ ನರಸಿಂಹ ಶಾಸ್ತ್ರೀ ವಿರಚಿತ “ವಾಮನ ಚರಿತ್ರೆ” ಎಂಬ ತಾಳಮದ್ದಳೆ ಪ್ರದರ್ಶನವು ಏರ್ಪಾಡಾಗಿದೆ. ಮಠದ ಅಧ್ಯಕ್ಷರಾದ ಜಿ.ಎಮ್.ಹೆಗಡೆ ಹೆಗ್ಗನೂರು, ಸಾಮಾಜಿಕ ನೇತಾರ ರಘುಪತಿ ಹೆಗಡೆ ಹಾಲೆಗೌರಿ, ಕಲಾ ಸಂಘಟಕ ಭಾಲಚಂದ್ರ ಎಮ್. ಹೆಗಡೆ ಹೂಡ್ಲಮನೆ ಚಾಲನೆ ನೀಡಲಿದ್ದಾರೆ.

300x250 AD

ಅ.19ರ ಗುರುವಾರದಂದು ಮಧ್ಯಾಹ್ನ 3-30ರಿಂದ ಲಂಬಾಪುರದ ಮಹಾಗಣಪತಿ ದೇವಾಲಯದಲ್ಲಿ ಮಹಾಬಲೇಶ್ವರ ಭಟ್ಟ ಇಟಗಿ ವಿರಚಿತ “ಗುರುದಕ್ಷಿಣೆ” ಎಂಬ ತಾಳಮದ್ದಳೆ ಪ್ರದರ್ಶನವು ನಿಶ್ಚಯವಾಗಿದೆ. ದೇವಸ್ಥಾನದ ಮೊಕ್ತೆಸರರಾದ ಆರ್.ಎಸ್.ಹೆಗಡೆ ವಾಜಗೋಡವರು, ವಾಜಗೋಡು ಗ್ರಾ.ಪಂನ ಉಪಾಧ್ಯಕ್ಷ ಎಸ್.ಎಮ್.ಭಟ್ಟ ಬಿಜ್ಜಾಳವರು, ಗ್ರಾ.ಪಂ. ಸದಸ್ಯರಾದ ಶ್ರೀಪಾದ ಹೆಗಡೆ ಬೈಲಳ್ಳಿಯವರು ಚಾಲನೆ ನೀಡಲಿದ್ದಾರೆ.

ಅ.20ರ ಶುಕ್ರವಾರದ ಸಂಜೆ 6-30ಕ್ಕೆ ಇಟಗಿಯ ಶ್ರೀ ರಾಮೇಶ್ವರ ದೇವಾಲಯದಲ್ಲಿ ಸರಣಿಯ ಸಮಾರೋಪ ಸಮಾರಂಭವಿದೆ. ದೇವಾಲಯದ ಮೊಕ್ತೇಸರರಾದ ಚಂದ್ರಶೇಖರ ಎಮ್.ಹೆಗಡೆ ಕೊಡ್ತಗಣಿಯವರು ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಟಿ.ಎಮ್.ಎಸ್. ಅಧ್ಯಕ್ಷರಾದ ಆರ್.ಎಮ್.ಹೆಗಡೆ ಬಾಳೆಸರ ಹಾಗೂ ಹಿರಿಯ ವಕೀಲರಾದ ಜಯಪ್ರಕಾಶ ಹೆಗಡೆ ಹರಗಿಯವರು ಉಪಸ್ಥಿತರಿರುತ್ತಾರೆ. ನಂತರ ಪಾರ್ತಿಸುಬ್ಬ ವಿರಚಿತ ರಾಮಾಯಣದೊಳಗಣ “ವಿಭೀಷಣ ನೀತಿ” ಎಂಬ ತಾಳಮದ್ದಳೆ ಪ್ರದರ್ಶನವು ನಿಗದಿಯಾಗಿದೆ.

ಈ ಕಾರ್ಯಕ್ರಮಗಳಿಗೆ ಸೃಜನ ಗಣೇಶ ಹೆಗಡೆ ಮಾರುತಿಪುರ ಭಾಗವತರಾಗಿ ಹಾಗೂ ನಾಗಭೂಷಣ ರಾವ್ ಹೆಗ್ಗೋಡು, ಶರತ್ ಹೆಗಡೆ ಜಾನಕೈ, ಕಂಚಿಮನೆ ಮಂಜುನಾಥ ಹೆಗಡೆ, ರಘುಪತಿ ಹೆಗಡೆ ಹೂಡೆಹದ್ದ, ಕು| ಭೂಮಿಕಾ ಹೆಗಡೆ ಹೊಸಗದ್ದೆ ಮೊದಲಾದವರು ಚಂಡೆ- ಮದ್ದಳೆ ವಾದನದಲ್ಲಿ ಭಾಗವಹಿಸಲಿದ್ದಾರೆ. ರಾಧಾಕೃಷ್ಣ ಕಲ್ಚಾರ, ಸರ್ಪಂಗಳ ಈಶ್ವರ ಭಟ್ಟ, ಪವನ್ ಕಿರಣಕೆರೆ, ಮಂಜುನಾಥ ಹೆಗಡೆ ಗೊರಮನೆ, ಬಿ.ಟಿ.ಅರುಣಕುಮಾರ ಸಾಗರ, ಸುಬ್ರಹ್ಮಣ್ಯ ಗೋಳಿಕೈ, ಗಣಪತಿ ಗುಂಜಗೋಡು, ಎಮ್.ಬಿ.ಹೆಗಡೆ ಹಳೇಹಳ್ಳ ಹಾಗೂ ಸಂಸ್ಥೆಯ ಕಲಾವಿದರುಗಳು ಅರ್ಥಧಾರಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅರ್ಥಪೂರ್ಣವಾದ ಈ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ಕಲಾಭಿಮಾನಿಗಳನ್ನು ಕೋರಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಇಟಗಿ ಮಹಾಬಲೇಶ್ವರ ಹಾಗೂ ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top