Slide
Slide
Slide
previous arrow
next arrow

ಉಪನ್ಯಾಸಕಿ ಲಲಿತಾಲಕ್ಷ್ಮೀ ಭಟ್ಟ ನಿಧನ

300x250 AD

ಸಿದ್ದಾಪುರ: ಇಲ್ಲಿಯ ಹಾಳದಕಟ್ಟಾದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಲಲಿತಾಲಕ್ಷ್ಮಿ ಭಟ್ಟ ಅಗ್ನಿ (55) ಅಲ್ಪಕಾಲದ ಅಸ್ವಸ್ಥತೆಯ ನಂತರ ದೈವಾಧೀನರಾಗಿದ್ದಾರೆ.

ಎಂಎಡ್‌ನಲ್ಲಿ ರ‍್ಯಾಂಕ್ ಪಡೆದು ರಾಜ್ಯಪಾಲರಿಂದ ಪ್ರಶಸ್ತಿ ಪಡೆದಿದ್ದ ಇವರು, ಸಾಕ್ಷರತಾ ಆಂದೋಲನ ಕುರಿತು ಪ್ರಬಂಧ ಮಂಡಿಸಿ ಡಿಲಿಟ್ ಪದವಿ ಪಡೆದಿದ್ದರು. ರಾಮಾಯಣ ಕಥಾನಕವನ್ನು ಭಾಮಿನಿಷಟ್ಪಪದಿಯ ಪದ್ಯರೂಪದಲ್ಲಿ ಬರೆದು ಲಲಿತರಾಮಾಯಣ ಹೆಸರಿನಲ್ಲಿ ಪ್ರಕಟಿಸಿದ್ದರು. ಆದಿಗುರು ಶಂಕರಾಚಾರ್ಯರ ಜೀವನ ಚರಿತ್ರೆಯನ್ನು ಗೀತೆಯ ರೂಪದಲ್ಲಿ ಬರೆದಿದ್ದರು. ಇವರ ಭಾವಗೀತೆಗಳ ಸಂಕಲನ ಸದ್ಯದಲ್ಲೇ ಬಿಡುಗಡೆಯಾಗಲಿತ್ತು. ಪ್ರೌಢಶಾಲೆಯ ಶಿಕ್ಷಕಿಯಾಗಿ ಪದೋನ್ನತಿ ಹೊಂದಿ ಉಪನ್ಯಾಸಕಿಯಾಗಿದ್ದ ಇವರು ಮಾತೃತ್ವ ಭಾವದಿಂದ ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪ್ರಯತ್ನಿಸುತ್ತಿದ್ದರು.

300x250 AD

ಮೃತರು ಪತಿ ಪ್ರೌಢಶಾಲಾ ನಿವೃತ್ತ ಮುಖ್ಯಾಧ್ಯಾಪಕ ಎನ್.ಪಿ.ಭಟ್ಟ, ಪುತ್ರ ಗಾಯಕ ಎ.ಎನ್.ಅನಂತ (ಆಸ್ಟ್ರೇಲಿಯಾ), ಪುತ್ರಿ ಗಾಯಕಿ ಅರುಂಧತಿ ವಸಿಷ್ಠ, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಶ್ರೀಮತಿ ಲಲಿತಾಲಕ್ಷ್ಮೀ ಭಟ್ಟ ಅವರ ನಿಧನಕ್ಕೆ ಸ್ಥಳೀಯ ನಿವೇದಿತಾ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಗಾಯತ್ರಿ ವಿ.ಭಟ್ಟ, ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ವಿನಾಯಕರಾವ್ ಹೆಗಡೆ, ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ, ಶಂಕರ ಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ, ಹಿರಿಯ ಸಾಹಿತಿ ಸುಬ್ರಾಯ ಮತ್ತೀಹಳ್ಳಿ, ಕಸಾಪ ತಾಲೂಕಾ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.   

Share This
300x250 AD
300x250 AD
300x250 AD
Back to top