ಪಣಜಿ: ಗೋವಾದಲ್ಲಿ ಬೀಚ್ ಬದಿಯ ಹೊಟೇಲ್‌ಗಳಲ್ಲಿ ಭಾರತೀಯ ಮತ್ತು ಅಂತಾರಾಷ್ಟ್ರೀಯ ಆಹಾರಗಳ ಜತೆಗೆ ರಾಜ್ಯದ ಸ್ಥಳೀಯ ಪ್ರಸಿದ್ಧ ಆಹಾರವಾದ ‘ಮೀನು ಸಾರು- ಅನ್ನ’ವನ್ನು ಆಹಾರ ಪಟ್ಟಿಯಲ್ಲಿ ಸೇರಿಸುವುದು ಕಡ್ಡಾಯವಾಗಿದೆ.
ಈ ಬಗ್ಗೆ ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಕೌಂತೆ ಮಾಹಿತಿ ನೀಡಿದ್ದಾರೆ. ಗೋವಾ ಸರಕಾರ ಇತ್ತೀಚೆಗೆ ‘ಬೀಚ್ ಬದಿಯ ಹೊಟೇಲ್‌ಗಳ ನೀತಿ’ಯನ್ನು ಅಂಗೀಕರಿಸಿತು. ಇದರ ಪ್ರಕಾರ ಹೊಟೇಲ್‌ಗಳು ತಮ್ಮ ಮೆನುನಲ್ಲಿ ‘ಮೀನು ಸಾರು-ಅನ್ನ’ ಸಹಿತ ಗೋವಾದ ಸ್ಥಳೀಯ ಆಹಾರಗಳನ್ನು ಕಡ್ಡಾಯವಾಗಿ ಸೇರಿಸಬೇಕು. ಇದೇ ವೇಳೆ ನೂತನ ನಿಯಮದ ಪ್ರಕಾರ, ಬೀಚ್‌ಗಳಲ್ಲಿ ಪರವಾನಿಗೆ ಹೊಂದದೇ ಅಕ್ರಮವಾಗಿ ವ್ಯಾಪಾರ-ವಹಿವಾಟು ಮತ್ತು ಮಾರಾಟದಲ್ಲಿ ತೊಡಗುವುದನ್ನು ನಿಷೇಧಿಸಿದೆ ಎಂದು ಅವರು ತಿಳಿಸಿದ್ದಾರೆ.