Slide
Slide
Slide
previous arrow
next arrow

ಸ್ಪರ್ಧೆಯ ವೇಳೆ ಕುಸಿದು ಬಿದ್ದು ಸ್ಪರ್ಧಿ ಸಾವು!

300x250 AD

ಪಣಜಿ: ವಿಶ್ವದ ಅತ್ಯಂತ ಕಠಿಣ ಸ್ಪರ್ಧೆಗಳಲ್ಲಿ ಒಂದೆಂದು ಕರೆಯಲ್ಪಡುವ ‘ಐರನ್‌ಮ್ಯಾನ್ 70.3’ ಸ್ಪರ್ಧೆಯ ವೇಳೆ ಸ್ಪರ್ಧಿಯೊಬ್ಬರು ಏಕಾಏಕಿ ಕುಸಿದು ಬಿದ್ದಿದ್ದು ಚಿಕಿತ್ಸೆ ವೇಳೆ ಮೃತಪಟ್ಟಿರುವ ಘಟನೆ ಇಲ್ಲಿ ನಡೆದಿದೆ.

ಮೃತ ಸ್ಪರ್ಧಿಯನ್ನು ಕಾಮಾಖ್ಯ ಸಿದ್ಧಾರ್ಥ್ (26) ಎಂದು ಗುರುತಿಸಲಾಗಿದೆ. ಅವರು ದೋನಾಪಾವ್ಲಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸ್ಪರ್ಧೆಗೆ ಎರಡು ದಿನ ಮೊದಲು ಸಿದ್ದಾರ್ಥ್ಗೆ ಜ್ವರ ಬಂದಿದ್ದರೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯ ವೇಳೆ ದೇಹದ ಸೆಳೆತದಿಂದಾಗಿ ಅವರು ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಅವರನ್ನು ಚಿಕಿತ್ಸೆಗಾಗಿ ಪಣಜಿ ಸಮೀಪದ ದೋನಾಪಾವ್ಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಿದ್ದಾರ್ಥ್ ಸಾವನ್ನಪ್ಪಿದ್ದಾರೆ.

300x250 AD

ಏತನ್ಮಧ್ಯೆ, ಮರಣೋತ್ತರ ಪರೀಕ್ಷೆಯ ನಂತರ ಸಿದ್ಧಾರ್ಥ್ ಸಾವಿನ ಕಾರಣವನ್ನು ಬಹಿರಂಗಪಡಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top