ಶಿರಸಿ: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಎಂ.ಇ.ಎಸ್ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಫ್ಯಾಶನ್ ಡಿಸೈನಿಂಗ್ ಡಿಪ್ಲೋಮಾ ಕೋರ್ಸ್ ಆರಂಭಿಸಲು ನಿರ್ಧರಿಸಲಾಗಿದೆ.
ಪದವಿ ಜೊತೆಗೆ ಕೌಶಲ್ಯ ತರಬೇತಿ ನೀಡುವ ಉದ್ದೇಶದೊಂದಿಗೆ ಇತ್ತೀಚೆಗಷ್ಟೇ ಟೇಲರಿಂಗ್ ಮತ್ತು ಎಂಬ್ರಾಯಡರಿ ಕೋರ್ಸ್ ಆರಂಭಿಸಿರುವ ಎಂ.ಇ.ಎಸ್ ಶಿಕ್ಷಣ ಸಂಸ್ಥೆ ಈಗ ಆರು ತಿಂಗಳ ಅವಧಿಯ ಫ್ಯಾಶನ್ಡಿಸೈನಿಂಗ್ ಡಿಪ್ಲೋಮಾ ಕೋರ್ಸ್ ಅಕ್ಟೋಬರ್ ಕೊನೆಯ ವಾರದಲ್ಲಿ ಪ್ರಾರಂಭಿಸಲಿದ್ದು ಎಂ.ಇ.ಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದ್ದು, ಉಳಿದವುಗಳನ್ನು ಹೊರಗಿನ ವಿದ್ಯಾರ್ಥಿನಿಯರಿಗೆ ನೀಡಲಾಗುವುದು.
ದೇಶದ ಫ್ಯಾಶನ್ ಜಗತ್ತಿನಲ್ಲಿ ಇಂದು ಹೊಸ ಹೊಸ ವಿನ್ಯಾಸಗಳು, ಆವಿಷ್ಕಾರಗಳು ನಾವಿನ್ಯತೆಗಳು ಉಂಟಾಗುತ್ತಿದ್ದು ಜನರ ಆಶೋತ್ತರಗಳನ್ನು ತುಂಬಲು ಫ್ಯಾಶನ್ಡಿಸೈನಿಂಗ್ನಂತಹ ಡಿಪ್ಲೋಮಾ ಕೋರ್ಸ್ಗಳನ್ನು ಆರಂಭಿಸುವುದರ ಮೂಲಕ ಪದವಿ ಜೊತೆಗೆ ಕೌಶಲ್ಯದ ತರಬೇತಿಯು ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.
ಮನುಷ್ಯನ ವ್ಯಕ್ತಿತ್ವ ಅಳೆಯಲು ವಸ್ತ್ರ ವಿನ್ಯಾಸವೂ ಕೂಡಾ ಒಂದು ಮಾನದಂಡವಾಗಿರುತ್ತದೆ. ಉಡುಪು ಶಿಸ್ತಿನ ಸಂಕೇತ ಕೂಡಾ ಹೌದು ಹಾಗೂ ವ್ಯಕ್ತಿಯ ಶಿಸ್ತು ರಚನಾತ್ಮಕತೆಯನ್ನು ಅಳೆಯಲು ಸಹಾಯಕವಾಗುತ್ತದೆ. ಕಾಲಕ್ಕೆ ತಕ್ಕಂತೆ ಸಿದ್ಧರಾಗಲು ಹೊಸ ಹೊಸ ಫ್ಯಾಶನ್ ಕೂಡಾ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಕೋರ್ಸ್ಗೆ ಭಾರಿ ಬೇಡಿಕೆ ಇರುವುದರಿಂದ ಈ ಕೋರ್ಸ್ಗೆ ಎಂ.ಇ.ಎಸ್ ಅವಕಾಶ ಕಲ್ಪಿಸುತ್ತಿದೆ.
ಈ ಫ್ಯಾಶನ್ಡಿಸೈನಿಂಗ್ ಡಿಪ್ಲೋಮಾ ಕೋರ್ಸ್ನಲ್ಲಿ ಒಟ್ಟೂ 40 ವಿದ್ಯಾರ್ಥಿನಿಯರಿಗೆ ಅವಕಾಶವಿದ್ದು, 20 ಸೀಟುಗಳು ಎಂ.ಇ.ಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿನಿಯರಿಗೆ ಹಾಗೂ ಉಳಿದ 20 ಸೀಟುಗಳು ಹೊರಗಿನ ಆಸಕ್ತರಿಗೆ ನೀಡಲಾಗುವುದು. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಪ್ರಾಚಾರ್ಯರನ್ನು ಸಂಪರ್ಕಿಸಬಹುದು. ಮೊ:Tel:+919449798970