Slide
Slide
Slide
previous arrow
next arrow

ಕೈ ಪಕ್ಷದ ಆಕಾಂಕ್ಷಿಗಳಿಗೆ ನಿರಾಸೆ ; ನಿಗಮ ಮಂಡಳಿಗಳ ನೇಮಕಕ್ಕೆ ವಿಳಂಬ

300x250 AD

ಶಿರಸಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ನಾಲ್ಕು ತಿಂಗಳುಗಳೇ ಕಳೆದಿದೆ. ಸಂಪುಟದ ಎಲ್ಲಾ ಸ್ಥಾನಗಳನ್ನ ಒಂದೆಡೆ ಭರ್ತಿ ಮಾಡಿದರೆ ಇನ್ನೊಂದೆಡೆ ಹೆಚ್ಚಾಗಿ ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಸಿಗುತ್ತಿದ್ದ ನಿಗಮ ಮಂಡಳಿಗಳಿಗೆ ಮಾತ್ರ ಇನ್ನೂ ನೇಮಕ ಮಾಡಿಲ್ಲ. ಲೋಕಸಭಾ ಚುನಾವಣೆಯ ಗಡುವನ್ನ ಇಟ್ಟುಕೊಂಡಿರುವ ಕೈ ನಾಯಕರು ಚುನಾವಣೆಯ ನಂತರ ನಿಗಮಗಳಿಗೆ ನೇಮಕ ಮಾಡುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬಂದಿದೆ.

ಈ ಬಾರಿ ರಾಜ್ಯದಲ್ಲಿ 135 ಸ್ಥಾನದಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಸರ್ಕಾರವನ್ನ ರಚಿಸಿತ್ತು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನದ ಜೊತೆಗೆ ಸಂಪುಟದ ಎಲ್ಲಾ ಸ್ಥಾನವನ್ನ ಭರ್ತಿ ಮಾಡಲಾಗಿತ್ತು. ಇದಲ್ಲದೇ  ಸರ್ಕಾರದ ವಿವಿಧ ಹುದ್ದೆಗಳಿಗೆ ಸಹ ನೇಮಕ ಮಾಡಲಾಗಿತ್ತು. ಇನ್ನು ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೆ ಶಾಸಕರ ಜೊತೆ ಪಕ್ಷಕ್ಕಾಗಿ ದುಡಿದವರಿಗೂ ನಿಗಮ ಮಂಡಳಿಗಳಲ್ಲಿ ಅವಕಾಶವನ್ನ ಕಲ್ಪಿಸಿಕೊಡಲಾಗುತ್ತದೆ. ನಿಗಮ ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಯ ಜೊತೆ ನಿರ್ದೇಶಕ ಹುದ್ದೆಗಳಿಗೆ ಕಾರ್ಯಕರ್ತರುಗಳಿಗೆ ಅವಕಾಶವನ್ನ ಕಲ್ಪಿಸಿಕೊಡಲಾಗುತ್ತದೆ.

ಆದರೆ ಸರ್ಕಾರ ರಚನೆಯಾಗಿ ನಾಲ್ಕು ತಿಂಗಳಾದರು ಇನ್ನೂ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಕಾರ್ಯಕ್ಕೆ ಮಾತ್ರ ಮುಂದಾಗಿಲ್ಲ. ಕೆಲ ದಿನದ ಹಿಂದೆ ಕೆಪಿಸಿಸಿ ನಾಯಕರು ಜಿಲ್ಲಾ ಮಟ್ಟದ ನಾಯಕರುಗಳಿಂದ ನಿಗಮ ಮಂಡಳಿಗಳಿಗೆ ಯಾರ್ಯಾರನ್ನ ನೇಮಕ ಮಾಡಬಹುದು ಎನ್ನುವ ಮಾಹಿತಿಯನ್ನ ಪಡೆದಿದ್ದರು ಎನ್ನಲಾಗಿತ್ತು. ಆದರೆ ಸದ್ಯ ಲೋಕಸಭಾ ಚುನಾವಣೆಯ ವರೆಗೆ ಈ ನೇಮಕ ಪ್ರಕ್ರಿಯೆ ಡೌಟ್ ಎನ್ನುವ ಮಾತು ಕೇಳಿ ಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಲಾಗಿತ್ತು. ಇನ್ನು ಪಕ್ಷಕ್ಕಾಗಿ ಹಲವರು ಹಲವಾರು ವಷfಳಿಂದ ದುಡಿಯುತ್ತಿದ್ದು ಶಾಸಕರ, ಸಚಿವರ, ರಾಜ್ಯ ಮತ್ತು ದೆಹಲಿ ಮಟ್ಟದ ನಾಯಕರನ್ನ ಮನವೊಲಿಸಿ ಹೇಗಾದರು ಮಾಡಿ ನಿಗಮದಲ್ಲಿ ಅವಕಾಶ ಪಡೆಯಬೇಕು ಎನ್ನುವ ಪ್ರಯತ್ನದಲ್ಲಿದ್ದರು.

ಸರ್ಕಾರ ರಚನೆಯಾಗಿ ಒಂದೆರಡು ತಿಂಗಳಿನಲ್ಲಿಯೇ ಈ ನೇಮಕ ನಡೆಯಲಿದೆ ಎನ್ನಲಾಗಿತ್ತು. ಸದ್ಯ ನಾಲ್ಕು ತಿಂಗಳಾದರು ಇನ್ನೂ ಯಾವ ಪ್ರಕ್ರಿಯೆಗೂ ಸರ್ಕಾರ ಮುಂದಾಗಿಲ್ಲ. ಲೋಕಸಭಾ ಚುನಾವಣೆಯ ಒಳಗೆ ನಿಗಮ ಗಳಿಗೆ ಅವಕಾಶ ಕಲ್ಪಿಸಿದರೆ ಅವಕಾಶ ಸಿಗದೇ ಇರುವವರು ಅಸಮಾಧಾನ ವ್ಯಕ್ತಪಡಿಸಿ ಚುನಾವಣೆಯಲ್ಲಿ ಹಿನ್ನಡೆಯಾಗುವಂತೆ ಮಾಡಬಹುದು. ಈ ನಿಟ್ಟಿನಲ್ಲಿ ಚುನಾವಣೆಯ ನಂತರ ಅವಕಾಶ ಕಲ್ಪಿಸಿಕೊಟ್ಟರೇ ಉತ್ತಮ ಎನ್ನುವ ಅಭಿಪ್ರಾಯಕ್ಕೆ ಕೆಪಿಸಿಸಿ ನಾಯಕರು ಬಂದಿದ್ದಾರೆ ಎನ್ನಲಾಗಿದೆ. ನಿಗಮಗಳಿಗೆ ಅವಕಾಶ ಕಲ್ಪಿಸದೇ ಇದ್ದರೆ ಲೋಕಸಭಾ ಚುನಾವಣೆ ನಂತರ ತಮಗೆ ಅವಕಾಶ ಸಿಗಬಹುದು ಎಂದು ಪಕ್ಷದ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯುತ್ತಾರೆ. ಮೊದಲೇ ಅವಕಾಶ ಕಲ್ಪಿಸಿದರೆ ಭಿನ್ನಮತವೇ ಮುಳುವಾಗಬಹುದು ಎಂದು ಕೈ ನಾಯಕರು ಚುನಾವಣೆಯ ನಂತರ ನೇಮಕ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕಳೆದ ಬಾರಿಯೂ ನೇಮಕಾತಿ ವಿಳಂಬ:

300x250 AD

2013ರಲ್ಲಿ ಪೂರ್ಣ ಬಹುಮತದ ಮೂಲಕ ಆಡಳಿತಕ್ಕೆ ಕಾಂಗ್ರೆಸ್ ಬಂದಿತ್ತು. ಆಗ ಸಹ ಸರ್ಕಾರ ರಚನೆಯಾಗಿ ಮೊದಲ ಎರಡು ವರ್ಷ ಯಾರಿಗೂ ಅವಕಾಶ ಕೊಟ್ಟಿರಲಿಲ್ಲ. ಕೊನೆಯ 36 ತಿಂಗಳು ಇರುವ ವೇಳೆ ತಲಾ 18 ತಿಂಗಳಂತೆ ವಿಂಗಡಿಸಿ ಹಲವರಿಗೆ ನಿಗಮಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಈ ಬಾರಿ ಸಹ ತಡವಾಗಿ ಅದೇ ರೀತಿ ಅವಕಾಶ ಕಲ್ಪಿಸಿಕೊಡುವ ಹುನ್ನಾವರ ಕಾಂಗ್ರೆಸ್ ನಾಯಕರನ್ನ ಎನ್ನಲಾಗಿದೆ. ಇನ್ನೊಂದೆಡೆ ಕಳೆದ ಬಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಹ ಸರ್ಕಾರ ರಚನೆಯಾದರು ನಿಗಮಗಳ ನೇಮಕ ಮಾತ್ರ ತಡಮಾಡಲಾಗಿತ್ತು. ಚುನಾವಣೆಗೆ ಏಳೆಂಟು ತಿಂಗಳು ಇರುವ ವೇಳೆಯಲ್ಲಿ ಕೆಲವರಿಗೆ ಅವಕಾಶ ಕಲ್ಪಿಸಿದ್ದು ಹಲವರ ಅಸಮಾಧಾನಕ್ಕೆ ಸಹ ಕಾರಣವಾಗಿತ್ತು.

ಹಲವು ನಾಯಕರ ಪ್ರಯತ್ನ:

ಜಿಲ್ಲೆಯಲ್ಲಿ ಈ ಬಾರಿ ನಿಗಮಗಳಲ್ಲಿ ಅವಕಾಶ ಪಡೆಯಲು ಹಲವರು ಪ್ರಯತ್ನಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಲೆನಾಡು ಅಭಿವೃದ್ದಿ ಪ್ರಾಧಿಕಾರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಸಿದ್ದಾಪುರದ ವಸಂತ್ ನಾಯ್ಕ ಮನ್ಮನೆ, ಹೊನ್ನಾವರದ ಕೃಷ್ಣ ಗೌಡ, ಕುಮಟಾದ ಮಂಜುನಾಥ ನಾಯ್ಕ, ಭಾಸ್ಕರ್ ಪಟಗಾರ್, ಭಟ್ಕಳದ ಜೆ.ಡಿ ನಾಯ್ಕ, ಸೇರಿದಂತೆ ಸುಮಾರು 50ಕ್ಕೂ ಅಧಿಕ ನಾಯಕರು ತಮಗೆ ನಿಗಮದಲ್ಲಿ ಅವಕಾಶ ಸಿಗಲಿ ಎನ್ನುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದ್ದು ಅಂತಿಮವಾಗಿ ಯಾರಿಗೆ ಅವಕಾಶ ಸಿಗಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.

Share This
300x250 AD
300x250 AD
300x250 AD
Back to top