ಅಂಕೋಲಾ: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಕೆಎಲ್ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಎನ್ಎಸ್ಎಸ್ ಕೋಶ ಹಾಗೂ ಕೆಎಲ್ಇ ಶುಶ್ರೂಷ ಮಹಾವಿದ್ಯಾಲಯದ ಸಹಯೋಗದೊಂದಿಗೆ ವಿಶ್ವ ಹೃದಯ ದಿನವನ್ನು ಕೆಎಲ್ಇ ಸಭಾಭವನದಲ್ಲಿ ಆಚರಿಸಲಾಯಿತು.
ಉಪನ್ಯಾಸಕರಾಗಿ ಕೆಎಲ್ಇ ಶುಶ್ರೂಷ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕರಾದ ಪ್ರದೀಪ ಸಿಂಗ್ರವರು ಯುವಜನತೆಯು ಹೃದಯದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿ ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಅಶ್ವತ್ಥನಾರಾಯಣ ಹೆಗಡೆ, ಇಂದಿನ ಯುವಜನತೆ ಅತಿಯಾದ ಒತ್ತಡದಿಂದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಹಾಗೂ ಆರೋಗ್ಯಕ್ಕೆ ಹಿತವಲ್ಲದ ಆಹಾರ ಪದಾರ್ಥಗಳನ್ನು ಮತ್ತು ತಂಪು ಪಾನೀಯಗಳನ್ನು ಸೇವನೆ ಮಾಡುತ್ತಿದ್ದಾರೆ. ಇವುಗಳನ್ನು ತ್ಯಜಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಉಪನ್ಯಾಸದ ನಂತರ ಕೆಎಲ್ಇ ಶುಶ್ರೂಷ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೃದಯದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ವಿಷಯದ ಮೇಲೆ ಪ್ರಾತಿಕ್ಷತೆಯನ್ನು ತೋರಿಸಿಕೊಟ್ಟರು. ನಂತರ ಹೃದಯ ಸ್ತಂಭನವಾದಾಗ ಹೇಗೆ ಪ್ರಥಮ ಚಿಕಿತ್ಸೆಯನ್ನು ಮಾಡಬೇಕು ಎಂದು ತೋರಿಸಿಕೊಟ್ಟರು.
ವೇದಿಕೆಯ ಮೇಲೆ ಉಪನ್ಯಾಸಕ ಸಂತೋಷ ಎಸ್.ಬಂಟ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆಎಲ್ಇ ಶ್ರೂಶುಶ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಎನ್ಎಸ್ಎಸ್ ಸ್ವಯಂ ಸೇವಕರು ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.