ಅಂಕೋಲಾ: ಕೆಎಲ್‌ಇ ಸಂಸ್ಥೆ ಹಾಗೂ ಉನ್ನತಿ ಫೌಂಡೇಶನ್ನಿನ ಸಹಯೋಗದೊಂದಿಗೆ ಅಂತಿಮ ವರ್ಷದ ಬಿ.ಎ ಮತ್ತು ಬಿ.ಕಾಂ ಪದವಿ ವಿದ್ಯಾರ್ಥಿಗಳಿಗೆ 165 ಗಂಟೆಗಳ (30 ದಿನಗಳ) ಯುಎನ್‌ಎಕ್ಸ್ಟಿ ಮೃದು ಕೌಶಲ್ಯ ತರಬೇತಿ ಕಾರ್ಯಗಾರ ನಡೆಯಿತು.
ತರಬೇತುದಾರರಾಗಿ ಉನ್ನತಿ ಫೌಂಡೇಶನ್ನಿನ ಬೋಬೆರವರು ವಿದ್ಯಾರ್ಥಿಗಳಿಗೆ ವಾಕ್ ಸಾಮರ್ಥ್ಯ, ನಾಯಕತ್ವ ಕೌಶಲ್ಯ, ತಂಡದ ಕೆಲಸದ ಕೌಶಲ್ಯ, ಸಮಸ್ಯೆ ಪರಿಹರಿಸುವ ಕೌಶಲ್ಯ, ವಿಮರ್ಶಾತ್ಮಕ ಚಿಂತನೆಯ ಕೌಶಲ್ಯ, ಸಮಯ ನಿರ್ವಹಣೆಯ ಕೌಶಲ್ಯಗಳನ್ನು ಕಾರ್ಯಗಾರದಲ್ಲಿ ತಿಳಿಸಿದರು.
ಒಟ್ಟು 27 ವಿದ್ಯಾರ್ಥಿಗಳು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತರಬೇತಿಯಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರವನ್ನು ನೀಡಲಾಯಿತು ಎಂದು ಪ್ರಾಚಾರ್ಯ ಅಶ್ವಥನಾರಾಯಣ ಎಸ್.ಹೆಗಡೆ ತಿಳಿಸಿದರು.