ಅಂಕೋಲಾ: ರಾಷ್ಟ್ರೀಯ ಈಡಿಗ ಮಹಾಮಂಡಳಿ ವತಿಯಿಂದ ಇಂದು ಅ.7ರಂದು ಸಂಜೆ 4 ಗಂಟೆಗೆ ತಾಲೂಕಿನ ಹನುಮಟ್ಟಾದಲ್ಲಿ ನಾಲ್ವರು ಹಿರಿಯ ಯಕ್ಷಗಾನ ಕಲಾವಿದರನ್ನು ಗುರುತಿಸಿ, ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಹಲವು ದಶಕಗಳಿಂದ ನೂರಾರು ಯಕ್ಷಗಾನದಲ್ಲಿ ವಿವಿಧ ಪಾತ್ರಧಾರಿಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ವಸಂತ ಖೇಮು ನಾಯ್ಕ, ವಾಮನ ಗಣೇಶ ನಾಯ್ಕ, ಮೋನಪ್ಪ (ಮೋಹನ) ಬೊಮ್ಮಯ್ಯ ನಾಯ್ಕ, ನಾರಾಯಣ ಜಟ್ಟಿ ನಾಯ್ಕ ಇವರು ಸನ್ಮಾನಕ್ಕೆ ಆಯ್ಕೆಯಾದವರಾಗಿದ್ದಾರೆ.
ರಾಷ್ಟ್ರೀಯ ಈಡಿಗ ಮಹಾಮಂಡಳಿಯವರು ಈಗಾಗಲೇ ತಾಲೂಕಾ ಮಟ್ಟದ ಹಲವಾರು ಕಾರ್ಯಕ್ರಮಗಳನ್ನು ಪಟ್ಟಣ ವ್ಯಾಪ್ತಿಯಲ್ಲಿ ಮಾಡಿರುವುದರಿಂದ ಇನ್ನು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ವ್ಯಕ್ತಿಗಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲು ನಿರ್ಧರಿಸಿದ್ದಾರೆ.
ಹನುಮಟ್ಟಾದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಆಗಮಿಸುವಂತೆ ಸಂಘದ ಅಧ್ಯಕ್ಷ ಡಿ.ಜಿ.ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜ ಎಂ., ಗೌರವಾಧ್ಯಕ್ಷ ಮಾದೇವ ಎಂ. ನಾಯ್ಕ, ಉಪಾಧ್ಯಕ್ಷರಾದ ರಮೇಶ ಎನ್. ನಾಯ್ಕ, ರಮೇಶ ಎಸ್. ನಾಯ್ಕ, ಉಮೇಶ ಎನ್. ನಾಯ್ಕ, ಸಂಜಯ ಆರ್. ನಾಯ್ಕ, ಖಜಾಂಚಿ ಶ್ರೀಪಾದ ನಾಯ್ಕ, ಮಹಿಳಾ ಅಧ್ಯಕ್ಷೆ ಲೀಲಾವತಿ ನಾಯ್ಕ, ಯುವ ಅಧ್ಯಕ್ಷ ಮಂಜುನಾಥ ಕೆ. ನಾಯ್ಕ, ಕಾರ್ಯದರ್ಶಿ ವಸಂತ ನಾಯ್ಕ, ಜಿಲ್ಲಾ ಮಹಿಳಾ ಗೌರವಾಧ್ಯಕ್ಷೆ ಮಂಜುಳಾ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕೊಂಡಳ್ಳಿ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ ನಾಯ್ಕ, ರಾಜ್ಯ ಕಾರ್ಯದರ್ಶಿ ಉಲ್ಲಾಸ ನಾಯ್ಕ ಮೊರಳ್ಳಿ ವಿನಂತಿಸಿದ್ದಾರೆ.