Slide
Slide
Slide
previous arrow
next arrow

ಕಾರ್ಮಿಕ ಬಜೆಟ್ ತಯಾರಿಕೆಗೆ ಮನೆ-ಮನೆ ಭೇಟಿ ಜಾಥಾ: ಸಿಇಒ

300x250 AD

ಕಾರವಾರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಉದ್ದೇಶದಿಂದ ಅ.2ರಿಂದ 31 ರವರೆಗೆ ಒಂದು ತಿಂಗಳ ಕಾಲ ಜಿಲ್ಲೆಯಾದ್ಯಂತ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ ಹಾಗೂ ಮನೆ-ಮನೆ ಭೇಟಿ ಜಾಥಾ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರಕುಮಾರ ಖಂಡೂ ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನರೇಗಾ ಯೋಜನೆಯ 2024-25 ನೇ ಸಾಲಿನ ಆರ್ಥಿಕ ವರ್ಷದ ಆಯವ್ಯಯ ತಯಾರಿಸಲು ವೇಳಾಪಟ್ಟಿ ನಿಗದಿಪಡಿಸಿ, ಕಾಲಮಿತಿಯೊಳಗೆ ಕಾರ್ಮಿಕರ ಆಯವ್ಯಯವನ್ನು ಸಲ್ಲಿಸಲು ಸೂಚನೆ ಬಂದಿದ್ದು, ಅದರಂತೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಐಇಸಿ ಕಾರ್ಯಕ್ರಮಗಳಡಿ ಅಭಿಯಾನಹಾಗೂಮನೆಮನೆಭೇಟಿ ಜಾಥಾ ಆಯೋಜಿಸಲಾಗುತ್ತಿದೆ. ಸರ್ಕಾರ ಮತ್ತು ಇಲಾಖೆಯ ನಿಯಮದಂತೆ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿ ಮತ್ತು ಸುತ್ತೋಲೆಗಳನ್ನು ಕಡ್ಡಾಯವಾಗಿ ಪಾಲಿಸಿ, ಜನರ ಸಹಭಾಗಿತ್ವದೊಂದಿಗೆ ಅರ್ಥಪೂರ್ಣವಾಗಿ ಯಶಸ್ವಿಗೊಳಿಸಲು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬಹು ಮುಖ್ಯವಾಗಿದ್ದು, ಗ್ರಾಮವಾಸಿಗಳು ಕಡ್ಡಾಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ಪ್ರತಿಯೊಂದು ಮನೆಗೆ ಭೇಟಿ ನೀಡಿ ನರೇಗಾ ಕುರಿತು ಮಾಹಿತಿ ನೀಡಲಾಗುತ್ತಿದೆ. ಕೆಲಸ ಮತ್ತು ಕಾಮಗಾರಿಗಳ ಬೇಡಿಕೆಯನ್ನು ಸಂಗ್ರಹಿಸಲು ಗ್ರಾಮ ಪಂಚಾಯತಿ ಸಿಬ್ಬಂದಿ ಪಾಲ್ಗೊಂಡು ವಾರ್ಡ್ಗಳ ಪ್ರತಿ ಮನೆಗೂ ಭೇಟಿ ನೀಡಿ ಯೋಜನೆಯ ಹಾಗೂ ಇತರ ಪ್ರಮುಖ ವಿಷಯಗಳಕುರಿತುಮಾಹಿತಿ ನೀಡಲಿದ್ದಾರೆ. ಜಾಗೃತಿ ಮೂಲಕ ಗ್ರಾಮಸ್ಥರಿಗೆ ಯೋಜನೆಯಡಿ ಸಿಗುವಸೌಲಭ್ಯಹಾಗೂ ಜಲಸಂಜೀವಿನಿ ಕಾರ್ಯಕ್ರಮದಮಹತ್ವದಬಗ್ಗೆಪ್ರಚಾರ ಆಂದೋಲನ ಕೈಗೊಳ್ಳಲಾಗುತ್ತಿದೆ.

ಆಯುಕ್ತಾಲಯದ ಮಾರ್ಗಸೂಚಿಯಂತೆ ಒಟ್ಟು ವೆಚ್ಚದ ಶೇ 60ರಷ್ಟನ್ನು ಕೃಷಿ ಹಾಗೂ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಗೆ ಸಂಬಂಧಿತ ಚಟುವಟಿಕೆಗಳಿಗೆ ಖರ್ಚು ಮಾಡಬೇಕು. ವೈಯಕ್ತಿಕ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆಯನ್ನು ಸರಳಗೊಳಿಸುವ ಉದ್ದೇಶದಿಂದ ಜಲಸಂಜೀವಿನಿಯಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡ, ಬಿಪಿಎಲ್ ಕುಟುಂಬಗಳು, ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳೆಯರು- ಅಂಗವಿಕಲರು, ಲಿಂಗತ್ವ ಅಲ್ಪ ಸಂಖ್ಯಾತರು, ಸ್ವ-ಸಹಾಯ ಸಂಘಗಳ ಸದಸ್ಯರು ಸೇರಿ ನರೇಗಾದಡಿ ನೊಂದಾಯಿತ ಎಲ್ಲಾ ವರ್ಗದ ಅರ್ಹ ಫಲಾನುಭವಿಗಳ ವೈಯಕ್ತಿಕ ಕಾಮಗಾರಿಗಳ ಪಟ್ಟಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸಿ, ಒಂದೇ ಬಾರಿಗೆ ಅನುಮೋದನೆ ಪಡೆಯುವಂತೆ ಮಾಡಲಾಗುತ್ತದೆ. ಈ ರೀತಿ ಅನುಮೋದನೆಗೊಂಡ ಪಟ್ಟಿಯಲ್ಲಿನ ಯಾವುದೇ ಫಲಾನುಭವಿ ಕುಟುಂಬವು ತಮ್ಮ ಜೀವಿತಾವಧಿಯಲ್ಲಿ 2.50 ಲಕ್ಷ ರೂ.ಗಳ ಮಿತಿಯೊಳಗೆ ಯೋಜನೆಯಡಿ ತನಗೆ ಬೇಕಾದ ವೈಯಕ್ತಿಕ ಸೌಲಭ್ಯಗಳನ್ನು (ಕಾಮಗಾರಿ) ಪಡೆದುಕೊಳ್ಳಲು ಹಾಗೂ ಸ್ಥಳೀಯ ಮಟ್ಟದ ಪರಿಹಾರ ಕ್ರಮಗಳನ್ನು ಕಂಡುಕೊಳ್ಳಲು ಗ್ರಾಮ ಸಭೆಯು ನೆರವಾಗುವುದು. ಆದ್ದರಿಂದ ಗ್ರಾಮವಾಸಿಗಳು ಗ್ರಾಮ ಸಭೆಯ ಸದುಪಯೋಗ ಪಡಿಸಿಕೊಳ್ಳಬೇಕು.

300x250 AD

ಸಾರ್ವಜನಿಕರಿಂದ ಯೋಜನೆಯಡಿ ಲಭ್ಯವಿರುವ ಕಾಮಗಾರಿಗಳ ಹಾಗೂ ಕೂಲಿ ಕೆಲಸದ ಬೇಡಿಕೆಯನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೇಡಿಕೆ ಪಟ್ಟಿಗೆ ಮೂಲಕ ಪಡೆದು ನಂತರದಲ್ಲಿ ಅರ್ಜಿ ಪರಿಶೀಲಿಸಿ, ನಿಯಮಾನುಸಾರ ಸದರಿ ಗ್ರಾಮ ಪಂಚಾಯತಿಯಲ್ಲಿ ಆಯೋಜಿಸುವ ವಾರ್ಡ್ ಸಭೆಗಳಲ್ಲಿ ಮಂಡಿಸಿ ಕಾಮಗಾರಿ ಪಟ್ಟಿ ತಯಾರಿಸಿ ಅನುಮೋದಿಸಿ ಗ್ರಾಮ ಸಭೆಗೆ ಸಲ್ಲಿಸುವಂತೆ ಮಾಡಲಾಗುತ್ತದೆ. ಗ್ರಾಮ ಸಭೆಯ ಅನುಮೋದನೆ ಕಡ್ಡಾಯವಾಗಿದ್ದು, ಸಾರ್ವಜನಿಕರಿಂದ ಅಕ್ಟೋಬರ್ 31ರವರೆಗೆ ಬೇಡಿಕೆ ಸ್ವೀಕರಿಸಲಾಗುತ್ತದೆ. ಜೊತೆಗೆ ಕಳೆದ ಸಾಲಿನಿಂದ ಅನುಷ್ಠಾನಿಸುತ್ತಿರುವ ಜಲಸಂಜೀವಿನಿಪರಿಕಲ್ಪನೆಯಡಿ ಮಧ್ಯಸ್ಥರದಲ್ಲಿ ಅನುಷ್ಠಾನಿಸುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಕೂಡ ತಯಾರಿಸಲಾಗುತ್ತಿದ್ದು, ಕನಿಷ್ಠ ಶೇ. 65 ರಷ್ಟನ್ನು  ನರೇಗಾದಡಿ ನೈಸರ್ಗಿಕಸಂಪನ್ಮೂಲಗಳ ಕಾಮಗಾರಿ ಅನುಷ್ಠಾನಗೊಳಿಸಿ ಅಂತರ್ಜಲಮಟ್ಟಹೆಚ್ಚಿಸುವುದುನರೇಗಾ ಜಲಸಂಜೀವಿನಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಯೋಜನೆಯಡಿ ಭರಿಸುವ ಒಟ್ಟು ಮೊತ್ತದಲ್ಲಿ ಕೂಲಿ ಸಾಮಗ್ರಿ ಅನುಪಾತವನ್ನು ಸರಿದೂಗಿಸುವಂತೆ ಆದೇಶವಿರುವ ಹಿನ್ನಲೆಯಲ್ಲಿ ಕಾಮಗಾರಿಗಳ ಅಂದಾಜು ವೆಚ್ಚದಲ್ಲಿ ಕೂಲಿ ಸಾಮಗ್ರಿ ಅನುಪಾತವನ್ನು ಲೆಕ್ಕ ಹಾಕುವಾಗ ಕಡ್ಡಾಯವಾಗಿ ಮಾದರಿ ಅಂದಾಜು ಪತ್ರಿಕೆಗಳಲ್ಲಿ ನೀಡಲಾಗಿರುವ ಕೂಲಿ ಸಾಮಗ್ರಿ ವೆಚ್ಚ ಪರಿಗಣಿಸುವ ಮತ್ತು ಜಿಲ್ಲಾ ಪಂಚಾಯಿತಿಯ ಅನುಪಾತವನ್ನು ವಾರ್ಷಿಕ ಕ್ರಿಯಾಯೋಜನೆಯ ಒಟ್ಟು ಅಂದಾಜು ವೆಚ್ಚದಲ್ಲಿ ಸಾಮಗ್ರಿ ಅನುಪಾತವು ಶೇ. 40ರಷ್ಟನ್ನುಮೀರತಕ್ಕದಲ್ಲ. ಯೋಜನೆಯಡಿ ಕಾಮಗಾರಿಗಳನ್ನು ಆಯ್ಕೆಮಾಡುವಸಂದರ್ಭದಲ್ಲಿಸ್ಥಳದಲಭ್ಯತೆ, ಸೂಕ್ತತೆ ಇತ್ಯಾದಿ ಖಚಿತಪಡಿಸಿಕೊಂಡು ಕಾಮಗಾರಿ ಕೈಗೆತ್ತಿಕೊಳ್ಳಬೇಕು ಹಾಗೂ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕಾಲಮಿತಿಯ ಬಗ್ಗೆಯೂ ಅಭಿಯಾನದ ಮೂಲಕ ಸೂಚಿಸಲಾಗುತ್ತದೆ .

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2024-25 ನೇ ಸಾಲಿನ ಕಾರ್ಮಿಕ ಆಯವ್ಯಯ ಸಿದ್ದಪಡಿಸಲು ಇದೇ ಅಕ್ಟೋಬರ್ 2 ರಿಂದ ಒಂದು ತಿಂಗಳ ಕಾಲ ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡ್ ಸಭೆ, ಗ್ರಾಮಸಭೆ ಆಯೋಜಿಸಲಾಗುತ್ತಿದೆ. ನಿಮ್ಮ ಕೃಷಿ ಜಮೀನಿನಲ್ಲಿ ತೋಟಗಾರಿಕೆ, ರೇಷ್ಮೆ ಬೆಳೆಮತ್ತು ಕೃಷಿ ಅರಣ್ಯಪ್ರದೇಶವಿಸ್ತರಿಸಿಕೊಳ್ಳಲು, ಮಣ್ಣಿನಸವಕಳಿ ತಡೆದುಮಳೆನೀರನ್ನುಸಂರಕ್ಷಿಸಲು ಕಂದರಬದು ಕೃಷಿಹೊಂಡ ನಿರ್ಮಿಸಿಕೊಳ್ಳಲು, ಜಾನುವಾರುಗಳಿಗೆ ಶೆಡ್ ಕಟ್ಟಿಕೊಳ್ಳಲು, ಮನೆ ಬಳಕೆಯ ತ್ಯಾಜ್ಯ ನೀರನ್ನು ಇಂಗಿಸಲು ಒಳ್ಳಲುಗುಂಡಿ ನಿರ್ಮಿಸಿಕೊಳ್ಳಲು ಈ ಗ್ರಾಮ ಸಭೆಯ ಅನುಮೋದನೆ ಕಡ್ಡಾಯವಾಗಿದೆ. ಉದ್ಯೋಗ ಚೀಟಿ ಹೊಂದಿದ ಎಲ್ಲಾ ಆಸಕ್ತ ಕುಟುಂಬಗಳು ಈ ಸಭೆಗಳಲ್ಲಿ ಭಾಗವಹಿಸಿ ಬೇಡಿಕೆಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಿಇಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top